ನೀವು ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ, ನೀವು ಅದರತ್ತ ನಿಮ್ಮ  ಜವಾಬ್ದಾರಿಯನ್ನು ಸಹ ತೋರಿಸಬೇಕು. ಸಂವಹನದ ಈ ಅತ್ಯುತ್ತಮ ವೇದಿಕೆಯನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸುವುದು ಪ್ರತಿಯೊಬ್ಬ ಬಳಕೆದಾರರ ಜವಾಬ್ದಾರಿಯಾಗಿದೆ. ಇದು ನಿಮ್ಮ ಪಾಲಿಗೂ ಸಹ ಮಾಹಿತಿ ವಿನಿಮಯದ ಅತ್ಯುತ್ತಮ ಸಾಧನವಾಗಿದ್ದರೆ, ಅದರ ದುರುಪಯೋಗದಿಂದ ತಪ್ಪು ಮಾಹಿತಿ ರವಾನೆ ಅಥವಾ ಸಿಗುವ ಅಪಾಯವೂ ಅಷ್ಟೇ ಹೆಚ್ಚು. ವಾಟ್ಸಾಪ್ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ವಾಟ್ಸಾಪ್ ಬಳಕೆಯಲ್ಲಿ ಏನು ವಿಶೇಷ ಕಾಳಜಿ ವಹಿಸಬೇಕು ಎಂಬುದನ್ನು ನಾವು ನಿಮಗೆ ಇಲ್ಲಿ ಹೇಳಿಕೋಡಲಿದ್ದೇವೆ.


COMMERCIAL BREAK
SCROLL TO CONTINUE READING

ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
ಅನಪೇಕ್ಷಿತ ಸ್ವಯಂಚಾಲಿತ ಅಥವಾ ಬೃಹತ್ ಸಂದೇಶಗಳನ್ನು ಕಳುಹಿಸಬೇಡಿ

ಒಂದು ವೇಳೆ ನೀವು ಜವಾಬ್ದಾರಿಯುತ ಬಳಕೆದಾರರಾಗಿದ್ದರೆ, ವಾಟ್ಸ್‌ಆ್ಯಪ್‌ನಿಂದ ಅನಪೇಕ್ಷಿತ, ಸ್ವಯಂಚಾಲಿತ ಅಥವಾ ಬೃಹತ್ ಸಂದೇಶಗಳನ್ನು ಯಾರಿಗೂ ಕಳುಹಿಸಬೇಡಿ. ವಾಟ್ಸಾಪ್ ತನ್ನ ಬಳಕೆದಾರರಿಂದ ಕಳುಹಿಸಲಾಗುವ ಅನಪೇಕ್ಷಿತ ಸಂದೇಶಗಳನ್ನು ಮಷೀನ್ ಲರ್ನಿಂಗ್ ಮುಖಾಂತರ ನಿಷೇಧಿಸುವ ಮತ್ತು ವರದಿಗಳನ್ನು ಕಳುಹಿಸುವ ಮೂಲಕ ಅಂತಹ ಖಾತೆಗಳನ್ನು ಪತ್ತೆ ಮಾಡುತ್ತದೆ. ಅನಪೇಕ್ಷಿತ ಅಥವಾ ಸ್ವಯಂಚಾಲಿತ ವಿಧಾನಗಳಿಂದ ಖಾತೆ ಅಥವಾ ಗುಂಪನ್ನು ರಚಿಸಬೇಡಿ, ಅಥವಾ ವಾಟ್ಸಾಪ್ನ ಯಾವುದೇ ಕೃತಕ ಆವೃತ್ತಿಯನ್ನು ಬಳಸಬೇಡಿ.


ಕಾಂಟಾಕ್ಟ್ ಲಿಸ್ಟ್ ಬಳಸುವಾಗ ಎಚ್ಚರಿಕೆ ವಹಿಸಿ
ನಿಮ್ಮದಲ್ಲದ ಕಾಂಟಾಕ್ಟ್ ಲಿಸ್ಟ್ ಎಂದಿಗೂ ಬಳಸಬೇಡಿ. ಅದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಜನರ ಅನುಮತಿಯಿಲ್ಲದೆ ಜನರ ಫೋನ್ ಸಂಖ್ಯೆಯನ್ನು ಎಂದಿಗೂ ಹಂಚಿಕೊಳ್ಳಬೇಡಿ ಅಥವಾ ಬಳಕೆದಾರರಿಗೆ ತಪ್ಪಾದ ರೀತಿಯಲ್ಲಿ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸಬೇಡಿ.


ಬ್ರಾಡ್ಕಾಸ್ಟ್ ಲಿಸ್ಟ್ ಹೇಗೆ ಬಳಸಬೇಕು?
ಬ್ರಾಡ್ಕಾಸ್ಟ್ ಲಿಸ್ಟ್  ಅತಿಯಾಗಿ ಬಳಸಬೇಡಿ. ಬ್ರಾಡ್ಕಾಸ್ಟ್ ಲಿಸ್ಟ್  ಮೂಲಕ, ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ  ಸಂಪರ್ಕಗಳಿಗೆ ಮಾತ್ರ ನೀವು ಸಂದೇಶಗಳನ್ನು ಕಳುಹಿಸಬಹುದು. ನೀವು ಅಗತ್ಯಕ್ಕಿಂತ ಹೆಚ್ಚು ಬ್ರಾಡ್ಕಾಸ್ಟ್ ಲಿಸ್ಟ್  ಬಳಸಿದರೆ, ಬಳಕೆದಾರರು ನಿಮ್ಮ ಸಂದೇಶವನ್ನು ವರದಿ ಮಾಡಬಹುದು. ಕಂಪನಿಯು ಅನೇಕ ಬಾರಿ ವರದಿಯಾದ ಖಾತೆಗಳನ್ನು ನಿರ್ಬಂಧಿಸುತ್ತದೆ.


ಸೇವಾ ನಿಯಮಗಳನ್ನು ಉಲ್ಲಂಘಿಸಬೇಡಿ.
ಕಂಪನಿಯ ಸೇವಾ ನಿಯಮಗಳನ್ನು ಎಂದಿಗೂ ಉಲ್ಲಂಘಿಸಬೇಡಿ. ಸುಳ್ಳು ಮಾಹಿತಿ ಪ್ರಸಾರ, ಬೆದರಿಕೆ, ದ್ವೇಷ, ಜನಾಂಗೀಯ ದ್ವೇಷ ಪಸರಿಸುವ, ಆಕ್ರಮಣಕಾರಿ ನಡುವಳಿಕೆ ಪ್ರಕಟಿಸುವುದನ್ನು ಇದು ನಿಷೇಧಿಸುತ್ತದೆ ನೆನಪಿಡಿ. ಈ ನಿಯಮಗಳು ವಾಟ್ಸ್ ಆಪ್ ಜೊತೆ ನಿಮ್ಮ ಜವಾಬ್ದಾರಿಯುತ ಸಂಬಂಧ ಸೂಚಿಸುತ್ತದೆ. ಸೇವಾ ನಿಯಮದ ಯಾವುದೇ ಉಲ್ಲಂಘನೆ ಕಂಪನಿ ಸಹಿಸಿಕೊಳ್ಳುವುದಿಲ್ಲ ಹಾಗೂ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ.