ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಘೋಸಿಸಲಾಗಿರುವ ಹಿನ್ನೆಲೆ ಸ್ಮಾರ್ಟ್ ಫೋನ್ ಬಳಕೆಯಲ್ಲಿ ಹೆಚ್ಚಳವಾಗಿದೆ. ಏಕೆಂದರೆ ಬಹುತೇಕ ಜನರು ತಮ್ಮ ಬಹುತೇಕ ಕೆಲಸಗಳನ್ನು ತಮ್ಮ ಮೊಬೈಲ್ ನಲ್ಲಿಯೇ ಮಾಡಲು ಇಷ್ಟಪಡುತ್ತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಹ್ಯಾಕರ್ ಗಳೂ ಕೂಡ ತುಂಬಾ ಸಕ್ರೀಯವಾಗಿದ್ದಾರೆ. ಎಲ್ಲ ಕೆಲಸಗಳಿಗೆ ಬೇಕಾಗುವ ದಾಖಲೆಗಳು ಸೇರಿದಂತೆ ಹಣಕಾಸಿನ ಎಲ್ಲ ವ್ಯವಹಾರಗಳು ಫೋನ್ ಮೂಲಕವೇ ನಡೆಯುತ್ತಿದೆ. 1 ಗಂಟೆ ಸಹ ಫೋನ್ ಕಾರ್ಯನಿರ್ವಹಿಸದಿದ್ದರೆ ಅನೇಕ ಜನರು ಪ್ರಕ್ಷುಬ್ಧಕ್ಕೆ ಒಳಗಾಗುತ್ತಾರೆ. ಇದರಿಂದ ಸೈಬರ್ ಹ್ಯಾಕರ್‌ಗಳು ಫೋನ್‌ ಗಳನ್ನು ತಪ್ಪು ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಅವರು ಫೋನ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಜನರ ಮಾಹಿತಿಯನ್ನು ಕದ್ದು, ನಂತರ ಖಾಸಗಿ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಸೈಬರ್ ಎಕ್ಸ್ಪರ್ಟ್ ಪವನ್ ದುಗ್ಗಲ್, ವಿಶ್ವದಲ್ಲಿ ಹ್ಯಾಕ್ ಮಾಡಲಾಗದ ಯಾವುದೇ ವಸ್ತುಗಳಿಲ್ಲ. ಹೀಗಾಗಿ ನಮ್ಮ ಫೋನ್ ಕೂಡ ಹ್ಯಾಕ್ ಆಗುವ ಸಾಧ್ಯತೆ ಇದೆ ಎಂಬುದನ್ನು ನಾವು ಅಲ್ಲಗಳೆಯಬಾರದು. ಹೀಗಾಗಿ ಫೋನ್ ಬಳಕೆ ಮಾಡುವ ವಿಚಾರದಲ್ಲಿ ನಾವು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.


ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ಇಲ್ಲಿವೆ


  • ಯಾವುದೇ ಅಪ್ಲಿಕೇಶನ್ ಡೌನ್ ಲೋಡ್ ಮಾಡುವ ವೇಳೆ ಅಧಿಕೃತ ಪ್ಲಾಟ್ ಫಾರ್ಮ್ ಗಳ ಮೂಲಕ ಮಾತ್ರ ಡೌನ್ ಲೋಡ್ ಮಾಡಿ. ನೇರವಾಗಿ ಯಾವುದೇ ಅಧಿಕ್ರುತವಲ್ಲದ ಪ್ಲಾಟ್ಫಾರ್ಮ್ ಗಳಿಂದ ಡೌನ್ಲೋಡ್ ಮಾಡಬೇಡಿ. ಯಾವುದೇ ಆಪ್ ಡೌನ್ಲೋಡ್ ಮಾಡುವ ಮೊದಲು ಅವುಗಳ ಟರ್ಮ್ಸ್ ಅಂಡ್ ಕಂಡಿಷನ್ ಗಳನ್ನು ಓದಲು ಮರೆಯದಿರಿ.

  • ಯಾವುದೇ ವಸ್ತು ಖರೀದಿಸುವಾಗ ಅಥವಾ ಆರ್ಥಿಕ ವ್ಯವಹಾರ ನಡೆಸುವಾಗ ಆ ವೆಬ್ ಸೈಟ್ ಅಡ್ರೆಸ್ ನಲ್ಲಿ https ಇದೆಯೋ ಅಥವಾ ಇಲ್ಲವೋ ಎಂಬುದನ್ನು ಗಮನಿಸಿ. 's' ನ ಅರ್ಥ ಸೆಕ್ಯೋರಿಟಿ ಎಂದರ್ಥ. ಒಂದು ವೇಳೆ ನೀವು ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು 's' ಇಲ್ಲದೆ ಇರುವ ವೆಬ್ಸೈಟ್ ನಲ್ಲಿ ಬಳಸಿದರೆ ಅದು ಸುರಕ್ಷಿತವಲ್ಲ.

  • ಸೈಬರ್ ಸುರಕ್ಷತೆಯ ಬಗ್ಗೆ ಹೆಚ್ಚಿಗೆ ಜಾಗರೂಕರಾಗಿರಿ. ಇದನ್ನು ನೀವು ನಿಮ್ಮ ಲೈಫ್ ಸ್ಟೈಲ್ ನಲ್ಲಿ ಅಳವಡಿಸಿ. ಗೊತ್ತು-ಗುರಿ ಇಲ್ಲದ ಆಪ್ ಡೌನ್ಲೋಡ್ ನಿಂದ ದೂರವಿರಿ.


ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂಬುದನ್ನು ಗುರುತಿಸುವುದು ಹೇಗೆ?
ಯಾರಾದರು ಒಂದು ವೇಳೆ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ ಎಂದಾದಲ್ಲಿ, ನಿಮ್ಮ ಫೋನ್ ವರ್ತನೆ ಸಾಮಾನ್ಯವಾಗಿರುವುದಿಲ್ಲ. ಏಕಕಾಲಕ್ಕೆ ಒಟ್ಟಾಗಿ ಹಲವು ಆಪ್ ಗಳು ತೆರೆದುಕೊಳ್ಳುತ್ತವೆ. ಡೇಟಾ ಬಳಕೆ ಹೆಚ್ಚಾಗುತ್ತದೆ. ಯಾವುದೇ ಒಂದು ಆಪ್ ನಿಮ್ಮ ಅನುಮತಿ ಇಲ್ಲದೆಯೇ ಖುದ್ದಾಗಿ ಡೌನ್ಲೋಡ್ ಆಗುತ್ತದೆ. ನೀವು ಒಂದು ವೇಳೆ ನಿಲ್ಲಿಸಲು ಯತ್ನಿಸಿದರೂ ಕೂಡ ಅದು ನಿಲ್ಲುವುದಿಲ್ಲ. ಫೋನ್ ಬಿಸಿಯಾಗುತ್ತದೆ. ಹ್ಯಾಕ್ ಆಗಿರುವ ಫೋನ್ ನಲ್ಲಿ ಪಾಪ್ ಅಪ್ ಗಳ ಅಲೆಯೇ ಸೃಷ್ಟಿಯಾಗುತ್ತದೆ. ಇಂಟರ್ನೆಟ್ ನಲ್ಲಿ ಸರ್ಫಿಂಗ್ ಮಾಡುವ ವೇಳೆ ಜಾಹೀರಾತುಗಳಿಂದ ನೀವು ಕಿರಿಕಿರಿ ಅನುಭವಿಸುತ್ತಿರಿ.