ಮನೆಯಲ್ಲಿಯೇ ಕುಳಿತು ನಿಮ್ಮ ನಗರದಲ್ಲಿನ ಪೆಟ್ರೋಲ್-ಡಿಸೇಲ್ ಬೆಲೆ ತಿಳಿಯುವುದು ಹೇಗೆ?
ಏಪ್ರಿಲ್ 5, 2020 ರ ಭಾನುವಾರ, ಪೆಟ್ರೋಲ್ ಮತ್ತು ಡೀಸೆಲ್ ಎರಡರ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ (ಇಂದು ಪೆಟ್ರೋಲ್ ಬೆಲೆ). ಇತ್ತೀಚೆಗೆ ತೈಲ ಕಂಪನಿಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಂದು ರೂಪಾಯಿ ಹೆಚ್ಚಿಸಿವೆ. ಈ ಹೆಚ್ಚಳದಿಂದ, ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ.
ಏಪ್ರಿಲ್ 5, 2020 ರ ಭಾನುವಾರ, ಪೆಟ್ರೋಲ್ ಮತ್ತು ಡೀಸೆಲ್ ಎರಡರ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ (ಇಂದು ಪೆಟ್ರೋಲ್ ಬೆಲೆ). ಇತ್ತೀಚೆಗೆ ತೈಲ ಕಂಪನಿಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಂದು ರೂಪಾಯಿ ಹೆಚ್ಚಿಸಿವೆ. ಈ ಹೆಚ್ಚಳದಿಂದ, ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ. ಅಂದರೆ, ಇಂದೂ ಕೂಡ ನೀವು ಪೆಟ್ರೋಲ್ ಖರೀದಿಸಲು ಶನಿವಾರದ ಬೆಲೆಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಇದರಿಂದಾಗಿ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿವೆ.
ನಿತ್ಯ ಪರಿಷ್ಕರಣೆಯಾಗುತ್ತವೆ ತೈಲ ಬೆಲೆಗಳು
ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಈ ಹಿನ್ನೆಲೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ನಿತ್ಯ ತಮ್ಮ ತೈಲ ಬೆಳೆಗಳನ್ನು ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರ ನಿರ್ಧರಿಸಲಾಗುತ್ತದೆ.
ನಿಮ್ಮ ನಗರದಲ್ಲಿ ತೈಲ ಬೆಲೆ ಎಷ್ಟು? ಈ ರೀತಿ ಪರಿಶೀಲಿಸಿ
ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ನಿತ್ಯ ಬೆಳಗ್ಗೆ 06 ಗಂಟೆಗೆ ಆ ದಿನದ ತೈಲಬೆಲೆಗಳನ್ನು ನಿಗದಿಪಡಿಸಿ ಜಾರಿಗೊಲಳಿಸುತ್ತವೆ.. ಬೆಳಗ್ಗೆ 6 ಗಂಟೆಯ ನಂತರ ಪೆಟ್ರೋಲ್-ಡೀಸೆಲ್ ದರವನ್ನು ಪರಿಶೀಲಿಸಲು, ನೀವು 9224992249 ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಬೆಲೆಯನ್ನು ತಿಳಿಯಬಹುದು. ಇದಕ್ಕಾಗಿ, ನೀವು RSP <ಸ್ಪೇಸ್> ಪೆಟ್ರೋಲ್ ಪಂಪ್ ಡೀಲರ್ನ ಕೋಡ್ ಅನ್ನು ಬರೆಯಬೇಕು ಮತ್ತು ಅದನ್ನು 9224992249 ಗೆ ಕಳುಹಿಸಬೇಕು. ತೈಲ ಮಾರುಕಟ್ಟೆಯ ಎಲ್ಲಾ ಕಂಪನಿಗಲಾಗಿರುವ IOC, BPCL ಹಾಗೂ HPCL ಗಳು ಬೆಳಗ್ಗೆ 6ಗಂಟೆಗೆ ಪೆಟ್ರೋಲ ಹಾಗೂ ಡಿಸೇಲ್ ಬೆಲೆಗಳನ್ನು ನಿಗದಿಪದಿಸುತ್ತವೆ. ಅವುಗಳು ನಿಗದಿಪಡಿಸಿದ ದರಬಳು ಬೆಳಗ್ಗೆ 6 ಗಂಟೆಯಿಂದಲೇ ಅನ್ವಯಿಸುತ್ತವೆ. ಕಂಪನಿಗಳು ನಿಗದಿಪಡಿಸಿದ ದರಗಳಲ್ಲಿ ಅಬಕಾರಿ ಸುಂಕ, ಡೀಲರ್ಸ್ ಕಮಿಷನ್ ಸೇರಿಸಿದರೆ ಬೆಲೆಗಳು ಬಹುತೇಕ ಡಬಲ್ ಆಗುತ್ತವೆ.