ನೀವೂ ಕೂಡ ಉಚಿತವಾಗಿ ತೆರೆಯಬಹುದು Aadhaar ಕೇಂದ್ರದ ಫ್ರಾಂಚೈಸಿ
ಸದ್ಯ ನೀವು ಯಾವುದಾದರೊಂದು ವ್ಯಾಪಾರ ಆರಂಭಿಸಿ ಹಣ ಗಳಿಸಲು ಯೋಜನೆ ರೂಪಿಸುತ್ತಿದ್ದರೆ, ನಿಮ್ಮ ಬಳಿ ಆಧಾರ್ ಕಾರ್ಡ್ ಫ್ರಾಂಚೈಸಿ ಹೊಂದುವ ಉತ್ತಮ ಅವಕಾಶ ಇದೆ.
ನವದೆಹಲಿ: ಸದ್ಯ ಹಣಗಳಿಸಲು ನೀವು ಯಾವುದಾದರೊಂದು ಬಿಸಿನೆಸ್ ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ನಿಮ್ಮ ಬಳಿ ಆಧಾರ್ ಕಾರ್ಡ್ ಫ್ರಾಂಚೈಸಿ ತೆರೆಯುವ ಉತ್ತಮ ಅವಕಾಶವಿದೆ. ಆಧಾರ್ ಕಾರ್ಡ್ ಫ್ರಾಂಚೈಸಿ ಹೊಂದುವ ಮೂಲಕ ನೀವು ಉತ್ತಮ ಆದಾಯ ಗಳಿಸಬಹುದು. ಆದರೆ, ಈ ಫ್ರಾಂಚೈಸಿ ಹೇಗೆ ಪಡೆಯಬೇಕು.. ಈ ಬಿಸಿನೆಸ್ ಆರಂಭಿಸಲು ನೀವು ಲೈಸನ್ಸ್ ವೊಂದನ್ನು ಪಡೆಯಬೇಕು. ಈ ಲೈಸನ್ಸ್ ಪಡೆಯಲು ನೀವು ಪರೀಕ್ಷೆಯೊಂದನ್ನು ಪಾಸ್ ಮಾಡಬೇಕು. ಹಾಗಾದರೆ ಬನ್ನಿ ಸಂಪೂರ್ಣ ಪ್ರೋಸೆಸ್ ಏನೆಂಬುದನ್ನು ಒಮ್ಮೆ ತಿಳಿದುಕೊಳ್ಳೋಣ.
ಪರೀಕ್ಷೆ ಪಾಸ್ ಮಾಡುವುದು ಅನಿವಾರ್ಯ
ಇದೊಂದು ಆನ್ಲೈನ್ ಪರೀಕ್ಷೆಯಾಗಿದ್ದು, UIDAI ಈ ಪರೀಕ್ಷೆ ನಡೆಸುತ್ತದೆ. UIDAI ಸರ್ಟಿಫಿಕೇಶನ್ ಗಾಗಿ ಈ ಪರೀಕ್ಷೆ ನಡೆಯುತ್ತದೆ. ಒಂದು ವೇಳೆ ನೀವು ಈ ಪರೀಕ್ಷೆ ಪಾಸ್ ಆದರೆ, ನೀವು ಆಧಾರ್ ಎನ್ರೋಲ್ಲ್ಮೆಂಟ್ ಹಾಗೂ ಬಯೋಮೆಟ್ರಿಕ್ ಪರೀಶೀಲನೆ ಮಾಡಬೇಕು. ಇದಾದ ಬಳಿಕ ನೀವು ತೆಗೆದುಕೊಳ್ಳುವ ಫ್ರಾಂಚೈಸಿಯನ್ನು ನೀವು ಕೇಂದ್ರದಿಂದ ಮಾನ್ಯತೆ ಪಡೆದ ಸೆಂಟರ್ ಆಗಿ ಪರಿವರ್ತಿಸಲು ಬಯಸಿದರೆ ನೀವು ಹಾಗೆ ಮಾಡಬಹುದು. ನೀವು ನಿಮ್ಮ ಶಾಖೆಯನ್ನು ಒಂದು ಕಾಮನ್ ಸರ್ವಿಸ್ ಸೆಂಟರ್ ಆಗಿ ರಿಜಿಸ್ಟ್ರೆಶನ್ ಮಾಡಿಸಬೇಕು
ಆಧಾರ್ ಕಾರ್ಡ್ ಸೆಂಟರ್ ನ ಕಾರ್ಯಗಳೇನು?
- ಹೊಸ ಆಧಾರ್ ಕಾರ್ಡ್ ತಯಾರಿಸುವುದು.
- ಅಧಾರ ಕಾರ್ಡ್ ನಲ್ಲಿ ಸ್ಪೆಲ್ಲಿಂಗ್ ನಲ್ಲಾಗಿರುವ ತಪ್ಪನ್ನು ಸರಿಪಡಿಸುವುದು.
- ಆಧಾರ್ ಕಾರ್ಡ್ ಅಡ್ರೆಸ್ಸ್ ತಪ್ಪಾಗಿದ್ದರೆ ತಿದ್ದುವುದು ಅಥವಾ ಅಡ್ರೆಸ್ ಬದಲಾಯಿಸುವಿಕೆ.
- ಆಧಾರ್ ಕಾರ್ಡ್ ಜನನ ತಿಥಿ ತಪ್ಪಾಗಿದ್ದರೆ ಬದಲಾಯಿಸುವುದು.
- ಭಾವಚಿತ್ರ ಸರಿಯಾಗಿ ಇಲ್ಲದೆ ಇದ್ದರೆ ಅದನ್ನು ಕೂಡ ಬದಲಾಯಿಸುವುದು.
- ಆಧಾರ್ ಕಾರ್ಡ್ ನಲ್ಲಿ ಹೊಸ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು.
- ಇ-ಮೇಲ್ ಅಡ್ರೆಸ್ ಬದಲಾವಣೆ ಇತ್ಯಾದಿ ಕೆಲಸಗಳನ್ನು ಮಾಡಬಹುದು.
ಆಧಾರ್ ಕಾರ್ಡ್ ಸೆಂಟರ್ ತೆರೆಯಲು ಲೈಸನ್ಸ್ ಪಡೆಯಲು ನೀವು ಆನ್ಲೈನ್ ನಲ್ಲಿ ಅಪ್ಪ್ಲೈ ಮಾಡಬೇಕು. ಬಳಿಕ ನೀವು ಎಕ್ಸಾಮ್ ಬರೆಯಬೇಕು. ಎಕ್ಸಾಮ್ ನಲ್ಲಿ ಪಾಸಾದವರಿಗೆ ಆಧಾರ್ ಕಾರ್ಡ್ ಸೆಂಟರ್ ಲೈಸನ್ಸ್ ಸಿಗುತ್ತದೆ. ಲೈಸನ್ಸ್ ಗೆ ಹೇಗೆ ಅಪ್ಪ್ಲೈ ಮಾಡಬೇಕು ಬನ್ನಿ ನೋಡೋಣ.
ಈ ಕ್ರಮ ಅನುಸರಿಸಿ
- ಮೊದಲಿಗೆ, NSEIT (https://uidai.nseitexams.com/UIDAI/LoginAction_input.action) ವೆಬ್‌ಸೈಟ್‌ಗೆ ಹೋಗಿ.
- ಇಲ್ಲಿ ನೀವು Create New User ಮೇಲೆ ಕ್ಲಿಕ್ ಮಾಡಿ.
- ಈಗ XML ಫೈಲ್ ತೆರೆಯುತ್ತದೆ.
- ಈಗ ನಿಮಗೆ Share Code ನಮೂದಿಸಲು ಹೇಳಲಾಗುವುದು.
-XML ಫೈಲ್ ಹಾಗೂ Share Codeಗಾಗಿ ನೀವು ಆಧಾರ್ ವೆಬ್‌ಸೈಟ್ https://resident.uidai.gov.in/offline-kyc ಗೆ ಹೋಗಿ ನಿಮ್ಮ ಆಫ್‌ಲೈನ್ ಇ ಆಧಾರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
- ಡೌನ್ಲೋಡ್ ಮಾಡಿದಾಗ XML ಫೈಲ್ ಮತ್ತು ಶೇರ್ ಕೋಡ್ ಎರಡನ್ನೂ ಡೌನ್‌ಲೋಡ್ ಮಾಡಲಾಗುತ್ತದೆ. - - ಇವುಗಳನ್ನು ಮೇಲೆ ಸೂಚಿಸಿದ ಸ್ಥಳದಲ್ಲಿ ಬಳಸಬೇಕು.
- ಈಗ ಮತ್ತೊಂದು ಫಾರ್ಮ್ ತೆರೆದುಕೊಳ್ಳಲಿದೆ. ಅದರಲ್ಲಿ ನೀವು ಕೆಲವು ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ.
- ಈ ಫಾರ್ಮ್ ಅನ್ನು ಸಲ್ಲಿಸಿದ ನಂತರ, ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಅನ್ನು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ.
- ಇವುಗಳಿಂದ ನೀವು ಆಧಾರ್ ಪರೀಕ್ಷೆ ಮತ್ತು ಪ್ರಮಾಣೀಕರಣದ ಪೋರ್ಟಲ್‌ನಲ್ಲಿ ಲಾಗಿನ್ ಆಗಲು ಸಾಧ್ಯವಾಗುತ್ತದೆ.
- ಇದರ ನಂತರ, ಮುಂದುವರಿಸಿ ಬಟನ್ ಕ್ಲಿಕ್ ಮಾಡಿ.
- ಈಗ ಒಂದು ಫಾರ್ಮ್ ನಿಮ್ಮ ಮುಂದೆ ಬರಲಿದೆ, ಇದರಲ್ಲಿ ಕೋರಿದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಈ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ಫೋಟೋ ಮತ್ತು ಸಹಿಯನ್ನು ನೀವು ಅಪ್‌ಲೋಡ್ ಮಾಡಬೇಕು.
- ಈಗ ನೀವು ಪ್ರಿವ್ಯೂ ಆಯ್ಕೆ ಕಾಣಿಸಲಿದೆ. ಇದರಲ್ಲಿ ನೀವು ನೀಡಿರುವ ಮಾಹಿತಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿ.
- ಈಗ Ceclaration Box ಮೇಲೆ ಟಿಕ್ ಮಾಡಿ ಮತ್ತು ಫಾರ್ಮ್ ಸಲ್ಲಿಸಲು Proceed submit form ಮೇಲೆ ಕ್ಲಿಕ್ ಮಾಡಿ.