ನವದೆಹಲಿ: ಒಂದು ವೇಳೆ ನೀವು ನಿಮ್ಮ ಕಾರ್ಯದಲ್ಲಿ ತುಂಬಾ ಮಗ್ನರಾಗಿದ್ದರೆ, ನಿಮ್ಮ ಮೊಬೈಲ್ ಬಿ ಬರುವ ಪ್ರತಿಯೊಂದು ಟೆಕ್ಸ್ಟ್ ಸಂದೇಶಕ್ಕೆ ಪ್ರತ್ಯುತ್ತರಿಸುವುದು ನಿಮಗೆ ಸುಲಭದ ಮಾತಲ್ಲ. ಆದರೆ ಸಂದೇಶಕ್ಕೆ ಪ್ರತಿಕ್ರಿಯಿಸದ ಕಾರಣ ಜನರು ನಿಮ್ಮಿಂದ ಅಸಮಾಧಾನಗೊಳ್ಳಬಹುದು. ಪ್ರತಿ ಟೆಕ್ಸ್ಟ್ ಸಂದೇಶಕ್ಕೆ ನಿಮ್ಮಿಂದ ಪ್ರತ್ಯುತ್ತರ ನೀಡಲು ಸಾಧ್ಯವಿಲ್ಲ ಎಂದಾದಲ್ಲಿ, ಸ್ವಯಂಚಾಲಿತ ಪ್ರತ್ಯುತ್ತರ ಸಂದೇಶ ವೈಶಿಷ್ಟ್ಯವನ್ನು ಬಳಸುವುದು ಉತ್ತಮ. ಆಂಡ್ರಾಯ್ಡ್ ಫೋನ್‌ಗಳೊಂದಿಗೆ ಈ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಈ ವೈಶಿಷ್ಟ್ಯ ಬಳಸುವುದು ಹೇಗೆ?
ಆಂಡ್ರಾಯ್ಡ್ ಫೋನ್‌ಗಳಲ್ಲಿ, ಡೀಫಾಲ್ಟ್ ಸ್ವಯಂಚಾಲಿತ ಪಠ್ಯ ಸಂದೇಶವನ್ನು ಕಳುಹಿಸುವ ಯಾವುದೇ ವಿಕಲ್ಪ ನೀಡಲಾಗಿಲ್ಲ. ಇದಕ್ಕಾಗಿ, ನೀವು ಥರ್ಡ್ ಪಾರ್ಟಿ  ಅಪ್ಲಿಕೇಶನ್‌ನ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ, ನೀವು SMS Auto Reply ಅಪ್ಲಿಕೇಶನ್‌ನ ಸಹಾಯವನ್ನು ಡೆಯಬಹುದಾಗಿದೆ. (https://play.google.com/store/apps/details?id=com.lemi.smsautoreplytextmessagefree&hl=en_IN) ಈ ಲಿಂಕ್ ನ ಸಹಾಯವನ್ನು ನೀವು ಪಡೆಯಬಹುದಾಗಿದೆ. ಅಷ್ಟೇ ಅಲ್ಲ ಅದನ್ನು ನೀವು Google Play Store ನಿಂದ ಕೂಡ ಡೌನ್‌ಲೋಡ್ ಮಾಡಬಹುದು.


- ಈ ಆಪ್ ಡೌನ್‌ಲೋಡ್ ಮಾಡಿದ ಬಳಿಕ, ಅಪ್ಲಿಕೇಶನ್ ತೆರೆಯಿರಿ ಮತ್ತು Add / Edit ಬಟನ್ ಮೇಲೆ ಟ್ಯಾಪ್ ಮಾಡಿ.
- ಇದರಲ್ಲಿ ಬಿಸಿ ಪ್ರೊಫೈಲ್ ನಿಮ್ಮ ಡಿಫಾಲ್ಟ್ ಪ್ರೊಫೈಲ್ ಸೆಟ್ ಆಗಿರುತ್ತದೆ. ನಿಮ್ಮ ಹೆಸರನ್ನು ನಮೂದಿಸಿದ ನಂತರ ನೀವು ನಿಮ್ಮ ಸಂದೇಶವನ್ನು ಕಸ್ಟಮೈಸ್ ಮಾಡಬಹುದಾಗಿದೆ. ಒಂದು ವೇಳೆ ನೀವು ಬಯಸಿದಲ್ಲಿ, ಈಗಾಗಲೇ ಅಪ್ಲೋಡ್ ಮಾಡಲಾಗಿರುವ ಪ್ರೊಫೈಲ್ ಅನ್ನು ಸಹ ನೀವು ಬದಲಾಯಿಸಬಹುದು. ಇಲ್ಲಿ, ನೀವು ಡ್ರೈವಿಂಗ್, ಸ್ಲೀಪಿಂಗ್ ಹಾಗೂ ಮೀಟಿಂಗ್ ಇತ್ಯಾದಿಗಳನ್ನು ಕಸ್ಟಮೈಸ್ ಮಾಡಿದ ಪ್ರೊಫೈಲ್ ಗಳನ್ನು ಸೇರಿಸಬಹುದಾಗಿದೆ.
- ಯಾವುದೇ ಒಂದು ವಿಶೇಷ ರೀತಿಯ ಸಂದೇಶವನ್ನು ಆಟೋ ರಿಪ್ಲೈ ಆಗಿ ಸೆಟ್ ಮಾಡುವ ಅವಕಾಶ ಇಲ್ಲಿ ನಿಮಗೆ ಸಿಗುತ್ತದೆ. ಇದಕ್ಕಾಗಿ ನೀವು ಪೆರ್ಸ್ನ್ಲೈಸ್ದ್ ಲಿಸ್ಟ್ ಮೇಲೆ ಟ್ಯಾಪ್ ಮಾಡಬೇಕು. ಬಳಿಕ ನೀವು ಆಟೋ ರಿಪ್ಲೈ ಮಾಡಬಯಸುವ ಕಾಂಟಾಕ್ಟ್ ಗಳನ್ನೂ ನಿಮ್ಮ ಮೊಬೈಲ್ ನ ಕಾಂಟಾಕ್ಟ್ ಲಿಸ್ಟ್ ಭೇಟಿ ನೀಡಿ ಆಯ್ಕೆ ಮಾಡಿಕೊಳ್ಳಿ. ಇಲ್ಲಿ ನಿಮಗೆ ಡೋಂಟ್ ರಿಪ್ಲೈ ಆಪ್ಶನ್ ಕೂಡ ಸಿಗಲಿದೆ. ಈ ಆಪ್ಶನ್ ನಲ್ಲಿ ನೀವು ಆಟೋ ರಿಪ್ಲೈ ಮಾಡಬಯಸದ ಕಾಂಟಾಕ್ಟ್ ಗಳನ್ನು ಸೇರಿಸಿ.
- ಬಳಿಕ ಸೆಟ್ ಟೈಮ್ ಆಪ್ಶನ್ ಮೇಲೆ ಕ್ಲಿಕ್ಕಿಸಿ. ಅಲ್ಲಿ ಆಟೋ ರಿಪ್ಲೈ ಸಂದೇಶಕ್ಕಾಗಿ ಡೇಟ್, ಟೈಮ್ ಅನ್ನು ಸೆಟ್ ಮಾಡಿ
- ಈ ಎಲ್ಲ ಮೆಸೇಜ್ ಕಸ್ಟಮೈಸೆಶನ್ ಕೆಲಸ ಪೂರ್ಣಗೊಂಡ ಬಳಿಕ, ಸೇವ್ ಆಪ್ಶನ್ ಮೇಲೆ ಕ್ಲಿಕ್ಕಿಸಿ.
- ಬಳಿಕ Turn ON/Turn OFF ಆಪ್ಶನ್ ಮೇಲೆ ಕ್ಲಿಕ್ಕಿಸಿ. ಇಲ್ಲಿಯೇ ಟಾಗಲ್ ಅನ್ನು ಆಟೋ ರಿಪ್ಲೈಗಾಗಿ ಆನ್ ಮಾಡಿ. ಜೊತೆಗೆ ನೋಟಿಫಿಕೇಶನ್ ಎಕ್ಸಸ್ ಗಾಗಿ ಅನುಮತಿ ನೀಡಿ.
- ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನಿಮ್ಮ ಅಂಡ್ರಾಯಿಡ್ ಫೋನ್ ಮೇಲೆ ಬರುವ ಟೆಕ್ಸ್ಟ್ ಸಂದೇಶಗಳಿಗೆ ಆಟೋ ರಿಪ್ಲೈ ಹೋಗಲು ಆರಂಭವಾಗುತ್ತದೆ. ಆದರೆ, ಇದು ಮಿಸ್ಡ್ ಕಾಲ್, ವಾಟ್ಸ್ ಆಪ್ ಸಂದೇಶ ಹಾಗೂ ಹ್ಯಾಂಗ್ ಔಟ್ ಸಂದೇಶಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.