ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ವಿಮಾನಯಾನದ ಟಿಕೆಟ್ ದರಗಳು ಸಾಕಷ್ಟು ಕಡಿತಗೊಂಡಿದ್ದು, ಇದರಿಂದ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಕ್ರಮೇಣ ಹೆಚ್ಚಾಗಿದೆ. ಆದರೆ, ಅನಿರೀಕ್ಷಿತ ಕಾರಣಗಳಿಂದ ಆ ದಿನದಂದು ನೀವು ಪ್ರಯಾಣಿಸಲು ಸಾಧ್ಯವಾಗದಿದ್ದಲ್ಲಿ ವಿಮಾನ ಸೇವೆಯಲ್ಲಿ ಖಚಿತ(Confirmed)ಗೊಂಡ ಟಿಕೆಟ್ಗಳನ್ನು ಮತ್ತೊಬ್ಬರಿಗೆ ವರ್ಗಾಯಿಸಲು ಅವಕಾಶವಿಲ್ಲ. ಈಗ ಅಂತಹ ಒಂದು ಸುವರ್ಣಾವಕಾಶವನ್ನು ಭಾರತೀಯ ರೈಲ್ವೆ ಒದಗಿಸಿದೆ. 


COMMERCIAL BREAK
SCROLL TO CONTINUE READING

ಯಾವುದೇ ಅನಿರೀಕ್ಷಿತ ಕಾರಣದಿಂದಾಗಿ ನೀವೇನಾದರೂ ಪ್ರಯಾಣಿಸಲು ಸಾಧ್ಯವಾಗದಿದ್ದಲ್ಲಿ, ಖಚಿತಗೊಂಡ ರೈಲು ಟಿಕೆಟ್ಗಳನ್ನು ಇನ್ನೊಬ್ಬರಿಗೆ ವರ್ಗಾಯಿಸಲು ರೈಲ್ವೆ ಇಲಾಖೆ ಅವಕಾಶ ನೀಡಿದ್ದು, ಈ ಪ್ರಕ್ರಿಯೆ ಮೊದಲಿಗಿಂತಲೂ ಸರಳವಾಗಿದೆ. ಟಿಕೇಟ್ ಅನ್ನು ವರ್ಗಾವಣೆ ಮಾಡುವಾಗ ಈ ಸರಳ ಅಂಶಗಳನ್ನು ನೆನಪಿನಲ್ಲಿಡಿ.


* ಪ್ರಯಾಣಿಕನು ತನ್ನ ಖಚಿತಗೊಂಡ ರೈಲ್ವೆ ಟಿಕೆಟ್ ಅನ್ನು ತನ್ನ ಕುಟುಂಬದ ಮತ್ತೊಬ್ಬ ಸದಸ್ಯರಿಗೆ ವರ್ಗಾವಣೆ ಮಾಡಲು ರೈಲು ನಿರ್ಗಮನ ಸಮಯಕ್ಕೆ 24 ಗಂಟೆಗಳ ಮೊದಲು ಲಿಖಿತ ಸಲ್ಲಿಕೆ ನೀಡುವ ಮೂಲಕ ತನ್ನ ಟಿಕೆಟ್ ಅನ್ನು ವರ್ಗಾಯಿಸಬಹುದು. ತಂದೆ, ತಾಯಿ, ಸಹೋದರ, ಸಹೋದರಿ, ಮಗ, ಮಗಳು, ಪತ್ನಿ ಮತ್ತು ಪತಿಯನ್ನು ಸಂಬಂಧಿಕರ ವರ್ಗದ ಅಡಿಯಲ್ಲಿ ವರ್ಗಾವಣೆಗೆ ಸ್ವೀಕರಿಸಲಾಗುತ್ತದೆ. 


* ಕರ್ತವ್ಯದ ಮೇಲೆ ಪ್ರಯಾಣ ಮಾಡುವ ಸರ್ಕಾರಿ ನೌಕರನು ತನ್ನ ಟಿಕೆಟ್ ಅನ್ನು ಸಂಬಂಧಿತ ರೈಲಿನ ನಿರ್ಗಮನಕ್ಕೆ 24 ಗಂಟೆಗಳ ಮೊದಲು ಲಿಖಿತ ವಿನಂತಿಯನ್ನು ಸಲ್ಲಿಸಿ ವರ್ಗಾಯಿಸಬಹುದು.


* ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಯು ತನ್ನ ಟಿಕೆಟ್ ಅನ್ನು ವರ್ಗಾಯಿಸಲು ಬಯಸಿದರೆ, ಅವನು ಅಥವಾ ಅವಳು ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿದ ಲಿಖಿತ ಮನವಿಯನ್ನು ಪಡೆದು, ಸಂಬಂಧಿತ ರೈಲು ನಿರ್ಗಮನಕ್ಕೆ 24 ಗಂಟೆಗಳ ಮೊದಲು ಸಲ್ಲಿಸಬೇಕು. ಅಂತಹ ಸಂದರ್ಭದಲ್ಲಿ, ಅದೇ ಸಂಸ್ಥೆಯ ಮತ್ತೊಂದು ವಿದ್ಯಾರ್ಥಿಗೆ ಮಾತ್ರ ಆ ಟಿಕೇಟ್ ವರ್ಗಾವಣೆ ಮಾಡಬಹುದು.


* ಮದುವೆ ಸಮಾರಂಭಕ್ಕೆ ತೆರಳುತ್ತಿರುವ ಸದಸ್ಯರು ತಮ್ಮ ಗುಂಪಿನ ಯಾವುದೇ ಒಬ್ಬ ವ್ಯಕ್ತಿಯನ್ನು ಗುಂಪಿನ ಮುಖ್ಯಸ್ಥರಾಗಿ ನೇಮಿಸಿ, ಸಂಬಂಧಿತ ರೈಲಿನ ನಿರ್ಗಮನಕ್ಕೆ 48 ಗಂಟೆಗಳ ಮೊದಲು ವರ್ಗಾವಣೆಗಾಗಿ ಲಿಖಿತ ಕೋರಿಕೆಯನ್ನು ಸಲ್ಲಿಸಬಹುದು. ಇಂತಹ ವಿನಂತಿಗಳನ್ನು ಒಮ್ಮೆ ಮಾತ್ರ ಸ್ವೀಕರಿಸಲಾಗುವುದು. 


* NCC ಕೆಡೆಟ್ಗಳು ತಮ್ಮ ಖಚಿತಗೊಂಡ ಟಿಕೆಟ್ಗಳನ್ನು ಇತರ ಕೆಡೆಟ್ಗಳಿಗೆ ವರ್ಗಾಯಿಸಬಹುದು. ಅದಕ್ಕಾಗಿ ಅವರು ರೈಲಿನ ನಿರ್ಗಮನಕ್ಕೆ 24 ಗಂಟೆಗಳ ಮೊದಲು NCC ಅಧಿಕಾರಿಯಿಂದ ಲಿಖಿತ ಮನವಿಯನ್ನು ಸಲ್ಲಿಸಬಹುದು.


* ಆದರೆ, ವಿದ್ಯಾರ್ಥಿ ಸಮೂಹ, ಎನ್ಸಿಸಿ ಕೆಡೆಟ್ಗಳು ಮತ್ತು ಮದುವೆಗೆ ತೆರಳುತ್ತಿರುವ ಸಮೂಹಗಳ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಶೇ.10ರಷ್ಟು ಖಚಿತಗೊಂಡ ಟಿಕೇಟ್ಗಳನ್ನು ಮಾತ್ರ ವರ್ಗಾಯಿಸಬಹುದು ಎಂದು ಭಾರತೀಯ ರೈಲ್ವೆ ಇಲಾಖೆ ಘೋಷಿಸಿದೆ. ಹಾಗೆಯೇ ಇಂತಹ ವಿನಂತಿಗಳನ್ನು ಒಮ್ಮೆ ಮಾತ್ರ ಸ್ವೀಕರಿಸಲಾಗುತ್ತದೆ.