ಹಳೆ ಲೈಂಗಿಕ ಪ್ರಕರಣದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯಬೇಕೆ?
ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯ ಹಳೆಯದಾಗಿದ್ದಾರೆ ಅಂತಹ ಪ್ರಕರಣದಲ್ಲಿ ಕಾನೂನು ಕ್ರಮ ಜರುಗಿಸುವುದು ಹೇಗೆ ಎನ್ನುವುದರ ಕುರಿತಾದ ಕೆಲವು ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ನವದೆಹಲಿ: ಈಗ ದೇಶಾದ್ಯಂತ ಮಿಡಿಯಾ, ರಾಜಕೀಯ, ಸಿನಿಮಾ ವಲಯಗಳಲ್ಲಿ ಮೀಟೂ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ.ಅಲ್ಲದೆ ಈಗ ಬಹುತೇಕರು ಕಾನೂನು ಕ್ರಮವನ್ನು ಸಹ ತೆಗೆದುಕೊಳ್ಳುತ್ತಿದ್ದಾರೆ. ಹಾಗಾದರೆ ಒಂದು ವೇಳೆ ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯ ಹಳೆಯದಾಗಿದ್ದಾರೆ ಅಂತಹ ಪ್ರಕರಣದಲ್ಲಿ ಕಾನೂನು ಕ್ರಮ ಜರುಗಿಸುವುದು ಹೇಗೆ ಎನ್ನುವುದರ ಕುರಿತಾದ ಕೆಲವು ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ನೀವು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದರೆ ನೀವು ಏನು ಮಾಡುತ್ತೀರಿ?
-2013 ರ ಕೆಲಸದ ವೇಳೆಯಲ್ಲಿ ಲೈಂಗಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ, ಪ್ರತಿಯೊಂದು ಸಂಸ್ಥೆಯು 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಅಂತಹ ಎಲ್ಲ ಕಚೇರಿಯಲ್ಲಿ ಆಂತರಿಕ ದೂರು ಸಮಿತಿಯನ್ನು (ಐಸಿಸಿ) ರಚಿಸಬೇಕು .ಇದು ಲೈಂಗಿಕ ಕಿರುಕುಳದ ವಿವಿಧ ಅಂಶಗಳನ್ನು ವಿವರಿಸುತ್ತದೆ. ಅಲ್ಲದೆ ಯಾವುದೇ ರೀತಿಯ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಮಹಿಳೆಯು ಇಲ್ಲಿ ದೂರು ಸಲ್ಲಿಸಬಹುದು.
ಲೈಂಗಿಕ ಕಿರುಕುಳದಲ್ಲಿ ಒಳಗೊಂಡಿರುವ ಅಂಶಗಳು ಯಾವವು ?
-ಅಸಭ್ಯವಾದ ಹೇಳಿಕೆಗಳು, ಅಹಿತಕರ ಸ್ಪರ್ಶ, ಸನ್ನೆ ಅಥವಾ ಲೈಂಗಿಕ ಕಿರುಕುಳವನ್ನುಂಟು ಮಾಡುವ ಇನ್ನ್ಯಾವುದೇ ಅಂಶಗಳು
ನೀವು ಹಿಂದಿನ ಕೆಲಸದ ಸ್ಥಳದಲ್ಲಿ ಕಿರುಕುಳ ಅನುಭವಿಸಿದ್ದರೆ ಮತ್ತು ನೀವು ಅಥವಾ ಆ ಸ್ಥಳದಲ್ಲಿ ಕಿರುಕುಳ ನೀಡಿದ ವ್ಯಕ್ತಿ ಈಗ ಕಾರ್ಯನಿರ್ವಹಿಸದೆ ಇದ್ದಲ್ಲಿ ನೀವು ಏನು ಮಾಡುತ್ತೀರಿ?
-ಲೈಂಗಿಕ ಕಿರುಕುಳದ ಘಟನೆನಡೆದು ಮೂರು ತಿಂಗಳುಗಳಾಗಿದ್ದಾಗ ಆ ಕಿರುಕುಳದ ವಿರುದ್ಧ ಕ್ರಿಮಿನಲ್ ದೂರು ಸಲ್ಲಿಸಬಹುದು. ಮೂರಕ್ಕಿಂತ ಕಡಿಮೆ ತಿಂಗಳುಗಳಾಗಿದ್ದರೆ ಅಂತಹ ಸಂದರ್ಭದಲ್ಲಿ ಮಹಿಳೆಯರು ಸಂಬಂಧಪಟ್ಟ ಆಂತರಿಕ ದೂರು ಸಮಿತಿಗೆ ದೂರು ನೀಡಬಹುದು.
ನಿಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ವಿಚಾರವಾಗಿ ನಿಮ್ಮಲ್ಲಿ ಸಾಕ್ಷ್ಯಾಧಾರಗಳಿಲ್ಲವಾದರೆ, ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲವೆ?
-ನೀವು ಇನ್ನೂ ಪ್ರಕರಣವನ್ನು ದಾಖಲಿಸಬಹುದು. ಕ್ರಿಮಿನಲ್ ದೂರು ಸಲ್ಲಿಸಿದಲ್ಲಿ ತನಿಖಾಧಿಕಾರಿಯು ಸಾಕ್ಷಿಯನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಾರೆ. ಇಲ್ಲದಿದ್ದರೆ, ಪುರಾವೆಗಳ ಕೊರತೆಯಿಂದಾಗಿ ನ್ಯಾಯಾಲಯದಲ್ಲಿ ಅದನ್ನು ಸಾಬೀತುಪಡಿಸಲು ಕಷ್ಟವಾಗುತ್ತದೆ.
ನೀವು ದೂರು ಸಲ್ಲಿಸಿದ ನಂತರ ಕಿರುಕುಳದ ಆರೋಪವನ್ನು ಹೊಂದಿದ ವ್ಯಕ್ತಿಯನ್ನು ಹೇಗೆ ನಿಭಾಯಿಸುತ್ತಿರಿ?
- ದೂರು ಸಲ್ಲಿಸಿದ ನಂತರ ಕೂಡಾ ನಿರಂತರ ಕಿರುಕುಳ ಮುಂದುವರೆದರೆ ಅದನ್ನು ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತರಬಹುದು ಮತ್ತು ಅವರಿಗೆ ಆ ವಿಚಾರವಾಗಿ ನೋಟಿಸ್ ನೀಡುವುದು
ನೀವು ಲೈಂಗಿಕವಾಗಿ ಕಿರುಕುಳ ಅನುಭವಿಸಿದ್ದರೆ ಏನು ಮಾಡುತ್ತೀರಿ?
-ನೀವು ಲೈಂಗಿಕವಾಗಿ ಕಿರುಕುಳ ಅನುಭವಿಸಿದ್ದಾರೆ , ದೂರು ದಾಖಲಿಸಿ ಮತ್ತು ಇನ್ನಷ್ಟು ಕಿರುಕುಳ ಅಥವಾ ಬೆದರಿಕೆಯಿಂದ ರಕ್ಷಣೆ ನೀಡುವ ಅಧಿಕಾರಿಗಳನ್ನು ಸಂಪರ್ಕಿಸಿ. ಅಲ್ಲದೆ ನಿಮಗೆ ಯಾವ ಮಾರ್ಗೋಪಾಯಗಳು ಮತ್ತು ಪರಿಹಾರಗಳು ಲಭ್ಯವಿದೆ ಎಂದು ಕಾನೂನು ಸಲಹೆಗಾರರ ಸಹಾಯ ಪಡೆಯಿರಿ.
ನೀವು ವಕೀಲರನ್ನು ಯಾವಾಗ ಸಂಪರ್ಕಿಸಬೇಕು?
-ಸಾಧ್ಯವಾದಷ್ಟು ಬೇಗ ಸಂಪರ್ಕಿಸಬೇಕು
ನೀವು ಪೊಲೀಸರನ್ನು ಹೇಗೆ ಸಂಪರ್ಕಿಸಬೇಕು?
-ಒಂದು ವೇಳೆ ಆಂತರಿಕ ದೂರು ಸಮಿತಿ ರೀತಿಯ ಸಂಸ್ಥೆ ಇಲ್ಲದಿದ್ದರೆ ಸಾಧ್ಯವಾದಷ್ಟು ಬೇಗ ದೂರು ಸಲ್ಲಿಸಬೇಕು
ಈಗ ಹಳೆಯ ಲೈಂಗಿಕ ಕಿರುಕುಳದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕಿರುಕುಳದ ಅನುಭವಿಸುತ್ತಿರುವ ವ್ಯಕ್ತಿ ದೂರು ದಾಖಲಿಸಬಹುದೇ?
-ಸಾಧ್ಯವಾದಷ್ಟು ಬೇಗ ಎಫ್ಐಆರ್ ನ್ನು ದಾಖಲಿಸಬೇಕು. ಒಂದು ವೇಳೆ ಎಫ್ಐಆರ್ ದಾಖಲಿಸುವಲ್ಲಿ ವಿಳಂಬವಾದಲ್ಲಿ , ಮ್ಯಾಜಿಸ್ಟ್ರೇಟ್ಗೆ ಮೂಲಕ ಖಾಸಗಿ ದೂರು ಸಲ್ಲಿಸಬಹುದು, ಆಗ ಅವರು ಎಫ್ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬಹುದು.