ಹಿ.ಮಾ. ವಿಧಾನಸಭೆ ಚುನಾವಣೆ : ವಿಜಯದ ಉತ್ತುಂಗದಲ್ಲಿ ಬಿಜೆಪಿ, ಎಲ್ಲರ ಚಿತ್ತ ಮುಂದಿನ ಮುಖ್ಯಮಂತ್ರಿಯತ್ತ
ಇನ್ನೂ ಕೇವಲ 17 ಸ್ಥಾನ ಗೆದ್ದು, 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ಗೆ ಹಿಮಾಚಲ ಪ್ರದೇಶದಲ್ಲಿ ಪರಾಭಾವ ಹೊಂದುವ ಮುನ್ಸೂಚನೆ ದೊರೆತಿದ್ದು, ಮುಖಭಂಗವಾದಂತಾಗಿದೆ.
ಶಿಮ್ಲಾ / ನವದೆಹಲಿ : ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ.
ಪ್ರಸ್ತುತ ಬಿಜೆಪಿ 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನೂ ಪ್ರತಿಸ್ಪರ್ಧಿ ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಪಕ್ಷದ ಪ್ರಮುಖ ನಾಯಕರಾದ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಂ ಕುಮಾರ್ ಧುಮಾಲ್ ಮತ್ತು ಪಕ್ಷದ ರಾಜಾಧ್ಯಕ್ಷ ಸತ್ಫಾಲ್ ಸಿಂಗ್ ಸತ್ತಿ ತಮ್ಮ ಕ್ಷೇತ್ರಗಳಲ್ಲಿ ಪರಾಭವಗೊಂಡಿರುವುದರಿಂದ ಮುಂದಿನ ಮುಖ್ಯ ಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಜನತೆಯಲ್ಲಿದೆ.
ಇದೇ ಸಂದರ್ಭದಲ್ಲಿ ಮಾತನಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, "ಹಿಮಾಚಲ ಪ್ರದೇಶದ ಚುನಾವಣೆಗಳು ಸ್ಪರ್ಧೆಯಂತೆಯೇ ಅನಿಸಿಲ್ಲ, ಜೊ ಜೀತಾ ವಹೀ ಸಿಕಂದರ್" ಎಂದಿದ್ದಾರೆ.
ಹಿಮಾಚಲದಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂಬ ಸೂಚನೆ ದೊರೆಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ವಿಜಯದ ಚಿಹ್ನೆಯನ್ನು ತೋರಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನೂ ಕೇವಲ 17 ಸ್ಥಾನ ಗೆದ್ದು, 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ಗೆ ಹಿಮಾಚಲ ಪ್ರದೇಶದಲ್ಲಿ ಪರಾಭಾವ ಹೊಂದುವ ಮುನ್ಸೂಚನೆ ದೊರೆತಿದ್ದು, ಮುಖಭಂಗವಾದಂತಾಗಿದೆ.
ಬೆಳಗಿನ ಮತದಾನ ಎಣಿಕೆಯಲ್ಲಿ ಬಿಜೆಪಿಯ ಮುಂಚೂಣಿಯಲ್ಲಿತ್ತು. ಆದರೆ ಕಾಂಗ್ರೆಸ್ ಶೀಘ್ರದಲ್ಲೇ ಅಂತರವನ್ನು ಕಾಯ್ದುಕೊಂಡಿತು. ನಂತರ, ಬಿಜೆಪಿಯು ಮತ್ತೆ ಮುನ್ನಡೆ ಸಾಧಿಸುವ ಮೂಲಕ ಬೆಳಿಗ್ಗೆ ೧೦ ಗಂಟೆಯ ಹೊತ್ತಿಗೆ ಪಕ್ಷ ಶೇ.50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತು.
ಈ ರಾಜ್ಯದ ಮತದಾರರು ಪ್ರತಿ ಚುನಾವಣೆಯಲ್ಲಿ ವಿವಿಧ ಪಕ್ಷಗಳನ್ನು ಗೆಲ್ಲಿಸುವ ಪರಿಪಾಠ ಹೊಂದಿದ್ದಾರೆ. 68 ಕ್ಷೇತ್ರಗಳ ಮತಎಣಿಕೆಯು 48 ಮತ ಕೇಂದ್ರಗಳಲ್ಲಿ ಪ್ರಾರಂಭವಾದ ಎಣಿಕೆಯಲ್ಲಿ ಆರಂಭದಲ್ಲಿ ಬಿಜೆಪಿ 26 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ವಿಜಯದ ಪತಾಕೆ ಹಾರಿಸಲು ಸಿದ್ಧವಾಗಿದೆ.
ಒಟ್ಟು 19 ಮಹಿಳಾ ಅಭ್ಯರ್ಥಿಗಳನ್ನೂ ಒಳಗೊಂಡಂತೆ 337 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದರು.