`ಮಾನವೀಯತೆ ನನ್ನ ಧರ್ಮ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ನನ್ನ ಜಾತಿ`: ಸಿಎಂ ಜಗನ್ ಮೋಹನ್ ರೆಡ್ಡಿ
ನಾವು ಕೊಟ್ಟ ಮಾತುಗಳಿಗೆ ಬದ್ಧರಾಗಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ ಹೆಮ್ಮೆ ನನಗಿದೆ; ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ
ಗುಂಟೂರು (ಆಂಧ್ರಪ್ರದೇಶ): ತಮ್ಮ ನಂಬಿಕೆಯನ್ನು ಪ್ರಶ್ನಿಸುವವರಿಗೆ ತಿರುಗೇಟು ನೀಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ "ಮಾನವೀಯತೆ" ನನ್ನ ಧರ್ಮ ಮತ್ತು ನೀಡಿದ ಭರವಸೆಗಳನ್ನು ಈಡೇರಿಸುವುದೇ ಅವರ "ಜಾತಿ" ಎಂದು ತಿಳಿಸಿದ್ದಾರೆ.
"ನಾವು ವಿವಿಧ ಆರೋಪಗಳ ನಡುವೆ ಸರ್ಕಾರವನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದ ಆಂಧ್ರ ಪ್ರದೇಶ(Andhra Pradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ(Jagan mohan Reddy) ನನ್ನ ಜಾತಿ ಮತ್ತು ಧರ್ಮದ ಬಗ್ಗೆಯೂ ಚರ್ಚಿಸಲಾಗಿದೆ, ಇದು ನನಗೆ ನೋವು ತಂದಿದೆ. ಆದರೆ ಮಾನವೀಯತೆ ನನ್ನ ಧರ್ಮ ಮತ್ತು ಕೊಟ್ಟ ಮಾತು ಉಳಿಸಿಕೊಳ್ಳುವುದು ನನ್ನ ಜಾತಿ" ಎಂದು ವೈಎಸ್ಆರ್ ಪೋಸ್ಟ್ ಪ್ರಾರಂಭದಲ್ಲಿ ಆಪರೇಟಿವ್ ಸಸ್ಟೆನೆನ್ಸ್ (ವೈಎಸ್ಆರ್ ಆರೋಗ್ಯಶ್ರೀ ಆಸರ) ಯೋಜನೆ ಸಭೆಯಲ್ಲಿ ಮಾತನಾಡಿದ ರೆಡ್ಡಿ ಹೇಳಿದರು.
ನಾವು ಕೊಟ್ಟ ಮಾತುಗಳಿಗೆ ಬದ್ಧರಾಗಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ ಹೆಮ್ಮೆ ನನಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ವಿರೋಧ ಪಕ್ಷಗಳು `ನಕಾರಾತ್ಮಕತೆ' ಹರಡುತ್ತಿದ್ದರೂ ಅವರ ಕಲ್ಯಾಣ ಕಾರ್ಯಸೂಚಿಯೊಂದಿಗೆ ಮುಂದುವರಿಯುವುದಾಗಿ ಪ್ರತಿಜ್ಞೆ ಮಾಡಿದರು. "ನಾನು ನಿಮ್ಮ (ನಾಗರಿಕರ) ಆಶೀರ್ವಾದದೊಂದಿಗೆ ಬಲವಾಗಿ ನಿಲ್ಲುತ್ತೇನೆ ಮತ್ತು ನನ್ನ ವಿರುದ್ಧ ಯಾವುದೇ ಆರೋಪಗಳು ಬಂದರೂ ನಾನು ಎದುರಿಸಲು ಸಿದ್ದನಿದ್ದೇನೆ" ಎಂದು ಜಗನ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
"ವೈಎಸ್ಆರ್ಸಿಪಿ ನೇತೃತ್ವದ ಸರ್ಕಾರವು ತೆಲುಗು ಭಾಷೆಯ ಬದಲಿಗೆ ಇಂಗ್ಲಿಷ್ ಅನ್ನು ಉತ್ತೇಜಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು ಮತ್ತು ಎರಡೂ ಭಾಷೆಗಳನ್ನು ರಾಜ್ಯದಲ್ಲಿ ಉತ್ತೇಜಿಸಬೇಕು ಎಂದು ಒತ್ತಾಯಿಸಿತ್ತು. ರೆಡ್ಡಿ ಸರ್ಕಾರಕ್ಕೆ ಮಾತೃಭಾಷೆ ತೆಲುಗಿನ ಮಹತ್ವವನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಆಂಧ್ರಪ್ರದೇಶದ ಬಿಜೆಪಿ ಘಟಕದ ವಕ್ತಾರ ಲಂಕಾ ದಿನಕರನ್ ಎಎನ್‌ಐಗೆ ತಿಳಿಸಿದ್ದರು.
(With ANI Inputs)