ಜೈಪುರ : 1.90 ಕೋಟಿ ವಿಮೆಯ ಹಣ ಪಡೆಯುವ ಉದ್ದೇಶದಿಂದ ಪತಿಯೇ ಪತ್ನಿಯನ್ನು ಹತ್ಯೆಗೈಯಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.  ಪತ್ನಿಯನ್ನು ರಸ್ತೆ ಅಪಘಾತದಲ್ಲಿ ಹತ್ಯೆ ಮಾಡಿಸಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಹತ್ಯೆಯಾದ ಮಹಿಳೆಯ ಪತಿ, ಎಸ್‌ಯುವಿ ಮಾಲೀಕ ರಾಕೇಶ್ ಸಿಂಗ್  ಮತ್ತು ಇನ್ನೊಬ್ಬ ವ್ಯಕ್ತಿ ಸೋನು ಎಂಬವರನ್ನು ಬಂಧಿಸಲಾಗಿದೆ.   ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು,  ಶೋಧ ಕಾರ್ಯ ನಡೆಯುತ್ತಿದೆ. 


COMMERCIAL BREAK
SCROLL TO CONTINUE READING

ಅಕ್ಟೋಬರ್ 5 ರಂದು ನಡೆದಿತ್ತು ಘಟನೆ : 
ಶಾಲು ಎಂಬ ಮಹಿಳೆ ತನ್ನ ಪತಿಯ ಮಾತು ಕೇಳಿಕೊಂಡು ಅಕ್ಟೋಬರ್ 5 ರಂದು ಮುಂಜಾನೆ 4:45 ರ ಸುಮಾರಿಗೆ ತನ್ನ ಸಹೋದರನ ಜೊತೆ ದೇವಸ್ಥಾನಕ್ಕೆ ತೆರಳಿದ್ದರು.  ಇಬ್ಬರೂ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಎಸ್‌ಯುವಿ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಹಿಳೆಯ ಸಹೋದರನಿಗೂ ಗಂಭೀರ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇದು ಮೇಲ್ನೋಟಕ್ಕೆ ರಸ್ತೆ ಅಪಘಾತದಂತೆಯೇ ಕಾಣುತ್ತಿತ್ತು. ಹಾಗಾಗಿ ಶಾಲು ಮನೆಯವರು ಕೂಡಾ ಇಬ್ಬರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸುಮ್ಮನಾಗಿದ್ದರು. ಆದರೆ ಪೊಲೀಸರಿಗೆ ಅನುಮಾನ ಕಾಡಿತ್ತು. ಅನುಮಾನದ ಜಾಡು ಹಿಡಿದ ಪೋಲಿಸರು ತನಿಖೆಗೆ ಇಳಿದಿದ್ದರು. 


ಇದನ್ನೂ ಓದಿ : New Rules: ನಾಳೆಯಿಂದ ಬೆಂಗಳೂರು ಸೇರಿದಂತೆ 3 ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಮುಖವೇ ನಿಮ್ಮ ಗುರುತು


 ಮೃತ ಮಹಿಳೆ ಶಾಲು ಹೆಸರಿನಲ್ಲಿ ವಿಮೆ ಮಾಡಲಾಗಿತ್ತು :
ಶಾಲು ಅವರ ಪತಿ ಮಹೇಶ್ ಚಂದ್, ಪತ್ನಿಯ ಹೆಸರಿನಲ್ಲಿ ವಿಮೆ ಮಾಡಿಸಿದ್ದರು. ಇದರ ಪ್ರಕಾರ, ಸ್ವಾಭಾವಿಕ ಸಾವಿ ಸಂಭವಿಸಿದ್ದಲ್ಲಿ ಕುಟುಂಬಕ್ಕೆ 1 ಕೋಟಿ ರೂ. ಮತ್ತು ಅಪಘಾತದಿಂದ ಸಾವನ್ನಪ್ಪಿದರೆ 1.90 ಕೋಟಿ ರೂ.  ಸಿಗುವುದಾಗಿ ಉಲ್ಲೇಖಿಸಲಾಗಿತ್ತು. 2015ರಲ್ಲಿ ಮಹೇಶ್ ಮತ್ತು ಶಾಲು ವಿವಾಹವಾಗಿದ್ದು, ಅವರಿಗೆ ಒಬ್ಬ ಮಗಳಿದ್ದಾಳೆ. ಮದುವೆಯಾದ ಎರಡು ವರ್ಷಗಳ ನಂತರ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ವೈವಾಹಿಕ ಜೀವನ ಸರಿಯಿಲ್ಲದ ಕಾರಣ, ಶಾಲು ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದಳು. ಅಲ್ಲದೆ, 2019ರಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿದ್ದರು.


ಈ ಮಧ್ಯೆ, ಶಾಲು ಹೆಸರಿನಲ್ಲಿ ವಿಮೆ ಮಾಡಿಸಿ ಅವರನ್ನು ಹತ್ಯೆ ಮಾಡುವ ಸಂಚನ್ನು ಪಮತ್ತೆ ಮಾತು ಆರಂಭಿಸಿದ್ದ. ಅಲ್ಲದೆ ತನಗೊಂದು ಆಸೆಯ ತನ್ನ ಆಸೆ ಈಡೇರಬೇಕಾದರೆ ಸತತ 11 ದಿನ ಹನುಮಾನ್ ದೇವಸ್ಥಾನಕ್ಕೆ ಬೈಕ್‌ನಲ್ಲಿ  ತೆರಳುವಂತೆ ಸೂಚಿಸಿದ್ದ. ಅಲ್ಲದೆ, ತನ್ನ ಆಸೆ ಈಡೇರಿದ ಬಳಿಕ ಶಾಲುವನ್ನು ಮತ್ತೆ ತನ್ನ ಜೊತೆ ಕರೆದುಕೊಂಡು ಹೋಗುವುದಾಗಿ ಆಸೆ ತೋರಿಸಿದ್ದ. ಇದರಿಂದಾಗಿ ಶಾಲು ತನ್ನ ಸಹೋದರ ಜೊತೆಗೆ ಬೈಕ್ ನಲ್ಲಿ ಹನುಮಾನ್ ಮಂದಿರಕ್ಕೆ ತೆರಳಿದ್ದರು.   


 ಇದನ್ನೂ ಓದಿ : KVS Recruitment 2022 : KVS ನಲ್ಲಿ 13404 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಹುದ್ದೆಗಳಿಗೆ ಅರ್ಜಿ 


ಕೊಲೆಗೆ  ಸುಪಾರಿ ನೀಡಿದ್ದ ಪಾಪಿ ಪತಿ : 
ಕಪತ್ನಿಯ ಕೊಲೆ ಬಗ್ಗೆ ಸಂಚು ರೂಪಿಸಿದ್ದ ಪತಿ, ಕ್ರಿಮಿನಲ್ ಹಿನ್ನೆಲೆಯುಳ್ಳ ಮುಖೇಶ್ ಸಿಂಗ್ ರಾಥೋಡ್ ಎಂಬ ವ್ಯಕ್ತಿಗೆ ಕೊಲೆಯ ಸುಪಾರಿ ನೀಡುತ್ತಾನೆ.ಪತ್ನಿಯನ್ನು ರಸ್ತೆ ಅಪಘಾತದಲ್ಲಿಯೇ  ಸಾಯಿಸುವಂತೆ ಸೂಚನೆ  ನೀಡುತ್ತಾನೆ. ಈ ಸುಪಾರಿಯ ಅನುಸಾರ ರಸ್ತೆ ಅಪಘಾತದಲ್ಲಿ ಶಾಲು ಅವರ ಕೊಲೆ ನಡೆದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.