ಫರ್ಸ್ಟ್ ನೈಟಲ್ಲೇ ನವವಿವಾಹಿತೆ ಮೇಲೆ ಪತಿ, ಭಾವನಿಂದ ಗ್ಯಾಂಗ್ ರೇಪ್!
ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ದುಷ್ಕರ್ಮಿಗಳು ಅತ್ಯಾಚಾರವೆಸಗಿದ ಪ್ರಕರಣದ ಬೆನ್ನಲೇ ಈ ಘಟನೆ ನಡೆದಿದೆ.
ಮುಜಾಫರನಗರ: ಮದುವೆಯಾದ ಮೊದಲ ರಾತ್ರಿಯೇ ಪತ್ನಿ ಮೇಲೆ ಪತಿ ಹಾಗೂ ಆತನ ತಮ್ಮ ಸೇರಿ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಜಾಫರನಗರದ ಹೊರವಲಯದಲ್ಲಿರುವ ಹಳ್ಳಿಯೊಂದರಲ್ಲಿ ಮಾರ್ಚ್ 6 ರಂದು ಈ ಘಟನೆ ನಡೆದಿದ್ದು, ಮದ್ಯಪಾನದ ಅಮಲಿನಲ್ಲಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ 26 ವರ್ಷದ ಸಂತ್ರಸ್ತೆಯ ಸಹೋದರ, ಮದುವೆಗೆ ಮುಂಚಿನಿಂದಲೂ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದರು. ಮದುವೆಗಾಗಿ ತಾವು 7 ಲಕ್ಷ ರೂ.ಗಳನ್ನೂ ಖರ್ಚು ಮಾಡಿರುವುದಾಗಿ ಹೇಳಿದ್ದಾನೆ. ಈ ಬಗ್ಗೆ ಆರೋಪಿ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ದುಷ್ಕರ್ಮಿಗಳು ಅತ್ಯಾಚಾರವೆಸಗಿದ ಪ್ರಕರಣದ ಬೆನ್ನಲೇ ಈ ಘಟನೆ ನಡೆದಿದೆ.