ನವದೆಹಲಿ: ಹೆಂಡತಿ ಪ್ರತ್ಯೇಕವಾಗಿ ವಾಸಿಸುತ್ತಿರುವಾಗ ಜೀವನಾಂಶ ಭತ್ಯೆ ಕೇಳಿದಾಗ, ಗಂಡಂದಿರು ಆರ್ಥಿಕ ಕುಸಿತದಲ್ಲಿದ್ದೇವೆ ಅಥವಾ ಬಡವರಾಗಿದ್ದೇವೆ ಎನ್ನುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆಂಧ್ರಪ್ರದೇಶ ಹೈಕೋರ್ಟ್ ಜಾರಿಗೊಳಿಸಿದ ಆದೇಶದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಹೈದರಾಬಾದ್ ವೈದ್ಯರಿಗೆ ಸುಪ್ರೀಂಕೋರ್ಟ್ ಈ ಪ್ರತಿಕ್ರಿಯೆಯನ್ನು ನೀಡಿದೆ. ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯನಿಗೆ ಹೀಗೆ ಹೇಳಿರುವ ಸರ್ವೋಚ್ಚ ನ್ಯಾಯಾಲಯ, ಪತ್ನಿ ಜೀವನ ಭತ್ಯೆ  ಬೇಡಿಕೆಯಿರುವ ಕಾರಣ ಕೆಲಸ ಬಿಡಬೇಡಿ ಎಂದು ಸಲಹೆ ನೀಡಿದೆ.


COMMERCIAL BREAK
SCROLL TO CONTINUE READING

ಆಂಧ್ರಪ್ರದೇಶ ಹೈಕೋರ್ಟ್ ಜಾರಿಗೊಳಿಸಿದ ಆದೇಶದ ಬಗ್ಗೆ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ಪರಿಶೀಲಿಸಿದ ಜಸ್ಟಿಸ್ ಡಿವೈ ಚಂದ್ರಚೂಡ್ ಮತ್ತು ಜಸ್ಟಿಸ್ ಹೇಮಂತ್ ಗುಪ್ತಾ ಅವರ ಪೀಠವು ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಕೋರ್ಟ್ ಆದೇಶದಂತೆ ಅವರಿಂದ(ವೈದ್ಯ) ಬೇರೆ ವಾಸಿಸುತ್ತಿರುವ ಪತ್ನಿಗೆ ಜೀವನ ಭತ್ಯೆಯಾಗಿ 15,000 ರೂ. ಗಳನ್ನು ತಿಂಗಳಿಗೆ ನೀಡುವಂತೆ ಸೂಚಿಸಿತು.


ಜಸ್ಟಿಸ್ ಡಿವೈ ಚಂದ್ರಚೂಡ್ ಮತ್ತು ಜಸ್ಟಿಸ್ ಹೇಮಂತ್ ಗುಪ್ತಾ ಪೀಠವು, 'ಈಗಿನ ಜೀವನ ಶೈಲಿಯಲ್ಲಿ ಕೇವಲ 15,000 ರೂ. ಮಗುವನ್ನು ಬೆಳೆಸುವುದು ಸಾಧ್ಯವೇ' ಎಂದು ಪ್ರಶ್ನಿಸಿತು.  ಈ ದಿನಗಳಲ್ಲಿ, ಹೆಂಡತಿಯರ ಜೀವನಾಂಶ ಬೇಡಿಕೆ ವಿಷಯ ಬಂದಾಗ, ಗಂಡಂದಿರು ಅವರ ಹಣಕಾಸಿನ ಪರಿಸ್ಥಿತಿ ಬಗ್ಗೆ ಉಲ್ಲೇಖಿಸುತ್ತಾರೆ ಅಥವಾ ತಾವೇ ಬಡವರಾಗಿರುವುದಾಗಿ ಹೇಳುತ್ತಿದ್ದಾರೆ. ತಾವು ಇದಕ್ಕಾಗಿಯೇ ಕೆಲಸ ಬಿಡಬೇಡಿ, ಕಾರಣ ನಿಮ್ಮ ಪತ್ನಿಯಿಂದ ಜೀವನ ಭತ್ಯೆಯ ಬೇಡಿಕೆಯಿದೆ ಎಂದು ತಿಳಿಸಿದೆ.


ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಮಧ್ಯಂತರ ನೆರವು ನಿಗದಿಪಡಿಸಿದ ಮೊತ್ತವು ತುಂಬಾ ಅಧಿಕವಾಗಿದೆ ಮತ್ತು ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.


ಈ ಬಗ್ಗೆ ಪ್ರತಿಕ್ರಿಯಿಸಿದ ಪೀಠವು, ಅರ್ಜಿದಾರರು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ ಮತ್ತು ಇದು ಮಧ್ಯಂತರ ಆದೇಶವಾಗಿದ್ದು, ಇದರಲ್ಲಿ ಮಧ್ಯಪ್ರವೇಶಿಸಲು ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತು.