8ರ ಬಾಲಕನ ನರಬಲಿ..! ಸೂರ್ಯಗ್ರಹಣ, ಅಮಾವಾಸ್ಯೆ, ಮಂಗಳಮುಖಿ ಮಾಡಿದ್ದೇನು..?
ಹೈದರಾಬಾದ್‌ನ ಸನತ್ನಗರದ ಇಂಡಸ್ಟ್ರಿಯಲ್ ಎಸ್ಟೇಟ್‌ನ ಅಲ್ಲಾದುನ್ ಕೋಟಿಯಲ್ಲಿ ವಾಸಿಂ ಖಾನ್ ಎಂಬ ವ್ಯಕ್ತಿ ಗಾರ್ಮೆಂಟ್ಸ್ ಅಂಗಡಿ ನಡೆಸುತ್ತಿದ್ದಾರೆ. ಈತ ಚಿಟ್ಸ್ ವ್ಯಾಪಾರ ನಡೆಸುತ್ತಿದ್ದ ಫಿಜಾ ಖಾನ್ ಎಂಬ ಮಂಗಳಮುಖಿಗೆ ಹಣ ಹಾಕಿದ್ದಾನೆ. ಹಣದ ವಿಚಾರವಾಗಿ ವಾಸಿಂ ಖಾನ್ ಮತ್ತು ಫಿಜಾ ಖಾನ್ ನಡುವೆ ಜಗಳವಾಗಿತ್ತು. ಗುರುವಾರ ಇಬ್ಬರ ನಡುವೆ ಗಲಾಟೆ ನಡೆದಿತ್ತು.
Hyderabad Boy Murder : ಇಡೀ ಜಗತ್ತೇ ಆಧುನಿಕತೆಯತ್ತ ಸಾಗುತ್ತಿದ್ದರೂ ಸಹ ಮೂಢನಂಬಿಕೆಗಳ ಹೆಸರಿನಲ್ಲಿ ನರಬಲಿ, ಪ್ರಾಣಿಗಳ ಬಲಿ ಕೊಡುವುದು ಇಂದಿಗೂ ನಿಂತಿಲ್ಲ. ಕೆಲವು ದೂರದ ಹಳ್ಳಿಗಳಲ್ಲಿ ಇಂತಹ ಘಟನೆಗಳು ನಡೆಯುವುದನ್ನು ನೀವು ಕೇಳಿರಬಹುದು. ಆದ್ರೆ, ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ನರಬಲಿ ಸಂಚಲನ ಮೂಡಿಸುತ್ತಿದೆ. ಅಮಾವಾಸ್ಯೆಯಂದು 8 ವರ್ಷದ ಬಾಲಕನನ್ನು ಮಂಗಳಮುಖಿ ಕೊಂದಿರುವ ಸುದ್ದಿ ಇದೀಗ ಸಂಚಲನ ಸೃಷ್ಟಿಸುತ್ತಿದೆ.
ಈ ಘಟನೆ ಹೈದರಾಬಾದ್‌ನ ಸನತ್‌ನಗರದಲ್ಲಿ ನಡೆದಿದೆ. ಸನತ್‌ನಗರ ಇಂಡಸ್ಟ್ರಿಯಲ್ ಎಸ್ಟೇಟ್‌ನ ಅಲ್ಲಾದುನ್ ಕೋಟಿಯಲ್ಲಿ ವಾಸಿಂ ಖಾನ್ ಎಂಬ ವ್ಯಕ್ತಿ ಗಾರ್ಮೆಂಟ್ಸ್ ಅಂಗಡಿ ನಡೆಸುತ್ತಿದ್ದಾರೆ. ಈತ ಚಿಟ್ಸ್ ವ್ಯಾಪಾರ ನಡೆಸುತ್ತಿದ್ದ ಫಿಜಾ ಖಾನ್ ಎಂಬ ಮಂಗಳಮುಖಿಗೆ ಹಣ ಹಾಕಿದ್ದಾನೆ. ಹಣದ ವಿಚಾರವಾಗಿ ವಾಸಿಂ ಖಾನ್ ಮತ್ತು ಫಿಜಾ ಖಾನ್ ನಡುವೆ ಜಗಳವಾಗಿತ್ತು. ಗುರುವಾರ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಆ ದಿನ ಸಂಜೆ ವಾಸಿಂ ಖಾನ್ ಪುತ್ರ ಅಬ್ದುಲ್ ವಾಹಿದ್ (8) ನನ್ನು ನಾಲ್ವರು ಅಪಹರಿಸಿದ್ದರು. ಅವರು ಬಾಲಕನನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಫಿಜಾ ಖಾನ್ ಅವರ ಮನೆಯ ಕಡೆಗೆ ಹೋಗಿದ್ದರು.
ಇದನ್ನೂ ಓದಿ: ರೇಣುಕಾಚಾರ್ಯ ವಿರುದ್ಧ ʼಸಿಡಿ ಬಾಂಬ್ʼ ಸ್ಫೋಟಿಸಿದ ಮಾಜಿ ಶಾಸಕ..! ರಿಲೀಸ್ ಮಾಡ್ತಾರಂತೆ
ಮಗ ಕಾಣೆಯಾದಾಗ ವಾಸಿಂ ಖಾನ್ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಬಾಲಕನನ್ನು ಕೊಂದು ಜಿಂಕಲವಾಡ ಬಳಿಯ ಕಾಲುವೆಗೆ ಎಸೆದಿದ್ದಾನೆ ಎನ್ನಲಾಗಿದೆ. ಬಾಲಕನನ್ನು ಅಪಹರಿಸಿದ ಆರೋಪಿಗಳು ಕೊಂದು ಬಳಿಕ ಅಲ್ಲಿ ಇಲ್ಲಿ ಮೂಳೆ ಮುರಿದಿದ್ದಾರೆ. ಮೃತ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಮತ್ತು ಬಕೆಟ್‌ನಲ್ಲಿ ತುಂಬಿ ನಾಲಾದಲ್ಲಿ ಎಸೆದಿದ್ದಾರೆ. ಗುರುವಾರ ಮಧ್ಯರಾತ್ರಿ ಪೊಲೀಸರು ಅಲ್ಲಿಗೆ ಆಗಮಿಸಿ ಸ್ಥಳೀಯರ ಸಹಾಯದಿಂದ ಬಾಲಕನ ಶವಕ್ಕಾಗಿ ಹುಡುಕಾಟ ನಡೆಸಿದ್ದರು. ಅಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸಿಕ್ಕಿತು.
ಸಣ್ಣಪುಟ್ಟ ಹಣದ ವಿಚಾರವಾಗಿ ಬಾಲಕನ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲಾ ಐವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಮಂಗಳಮುಖಿ ಫಿಜಾ ಬಾಲಕನ ನರಬಲಿ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಫಿಜಾ ಖಾನ್ ಅವರ ಮನೆ ಧ್ವಂಸಗೊಂಡಿದೆ. ಗುರುವಾರದ ಅಮಾವಾಸ್ಯೆಯಂದು ಕೊಲೆ ಮಾಡಿರುವ ಸೂಚನೆಗಳಿವೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.