ನವದೆಹಲಿ: ಶಿವಸೇನಾ ನಾಯಕರ ಬಂಡಾಯದ ನಂತರ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಪತನಗೊಂಡ ಕೆಲವು ದಿನಗಳ ನಂತರ, ಸಂಜಯ್ ರಾವತ್ ಅವರು ತಮಗೂ ಕೂಡ ಗೌಹಾತಿಯಲ್ಲಿರುವ ಏಕನಾಥ್ ಶಿಂಧೆ ಹಾಗೂ ಇತರ ಬಂಡಾಯ ಶಾಸಕರನ್ನು ಸೇರಲು ಆಫರ್ ನೀಡಲಾಗಿತ್ತು ಎಂದು ಅವರು ಹೇಳಿದರು.


COMMERCIAL BREAK
SCROLL TO CONTINUE READING

ಆದರೆ ತಾವು ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರನ್ನು ಅನುಸರಿಸುತ್ತಿರುವುದರಿಂದ ಈ ಪ್ರಸ್ತಾಪ ತಿರಸ್ಕರಿಸಲಾಯಿತು ಎಂದು ರಾವತ್ ತಿಳಿಸಿದರು.ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದರು.


ಈ ಹಿನ್ನೆಲೆಯಲ್ಲಿ ಸರ್ಕಾರವು ಅಲ್ಪಮತಕ್ಕೆ ಕುಸಿದಿದ್ದರಿಂದ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.ಈಗ ನೂತನ ಸರ್ಕಾರಕ್ಕೆ ಸೋಮವಾರದಂದು ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕೇಳಲಾಗಿದೆ.


ಇದನ್ನೂ ಓದಿ : HCL Recruitment 2022 : HCL ನಲ್ಲಿ 290 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ : ಪರೀಕ್ಷೆಯಿಲ್ಲದೆ ಆಯ್ಕೆ!


ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, "ನನಗೂ ಗುವಾಹಟಿಗೆ ಆಫರ್ ಬಂದಿತ್ತು, ಆದರೆ ನಾನು ಬಾಳಾಸಾಹೇಬ್ ಠಾಕ್ರೆ ಅವರನ್ನು ಅನುಸರಿಸುತ್ತೇನೆ ಆದ್ದರಿಂದಾಗಿ ನಾನು ಅಲ್ಲಿಗೆ ಹೋಗಲಿಲ್ಲ, ಸತ್ಯ ನಿಮ್ಮ ಕಡೆ ಇರುವಾಗ ಭಯ ಏಕೆ?" ಎಂದು ಅವರು ಪ್ರತಿಕ್ರಿಯಿಸಿದರು.ಮುಂಬೈ ಮತ್ತು ಮಹಾರಾಷ್ಟ್ರದಿಂದ ಶಿವಸೇನೆಯನ್ನು ನಾಶ ಮಾಡಲು ಬಿಜೆಪಿ ಬಯಸಿದೆ.ಆದರೆ ಅದು ಆಗಲಿಲ್ಲ ಎಂದು ಅವರು ಹೇಳಿದರು.


ಇದೆ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಅವರಿಗೆ ಸಮನ್ಸ್ ಜಾರಿ ಮಾಡಿರುವ ಕುರಿತು ಮಾತನಾಡಿದ ಸಂಜಯ್ ರಾವತ್, ಒಬ್ಬ ಜವಾಬ್ದಾರಿಯುತ ನಾಗರಿಕ ಮತ್ತು ಸಂಸದನಾಗಿ, ತನಿಖಾ ಸಂಸ್ಥೆ (ಇಡಿ) ನನಗೆ ಸಮನ್ಸ್ ನೀಡಿದರೆ ಹಾಜರಾಗುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.


ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಶುಕ್ರವಾರ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸುಮಾರು 10 ಗಂಟೆಗಳ ಕಾಲ ಪ್ರಶ್ನಿಸಿದೆ.ಮುಂಬೈನ ಪತ್ರಾ ಚಾಲ್‌ನ ಮರು ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.


ಇದನ್ನೂ ಓದಿ : ಈ ದಿನಾಂಕದಂದು CBSE 10 ಮತ್ತು 12ನೇ ತರಗತಿ ಫಲಿತಾಂಶ.. !


ಮಹಾರಾಷ್ಟ್ರದಲ್ಲಿ ಅಂದಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಸೋಮವಾರ ನಡೆದ ಮೊದಲ ಸಮನ್ಸ್‌ಗೆ ಹಾಜರಾಗಲು ವಿಫಲವಾದ ನಂತರ ಜುಲೈ 1 ರ ಮೊದಲು ಹಾಜರಾಗುವಂತೆ ಪ್ರಕರಣದಲ್ಲಿ ಎರಡನೇ ಸಮನ್ಸ್ ನೀಡಿದ ನಂತರ ಅವರು ಶುಕ್ರವಾರ ಕೇಂದ್ರದ ಏಜೆನ್ಸಿಯ ಮುಂದೆ ಹಾಜರಾಗಿದ್ದರು.


ಸಂಜಯ್ ರಾವತ್ ಮಂಗಳವಾರದಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದಾಗ್ಯೂ, ಅವರ ವಕೀಲರು ತನಿಖಾ ಸಂಸ್ಥೆಯ ಮುಂದೆ ದಾಖಲೆಗಳನ್ನು ಸಲ್ಲಿಸಲು 13-14 ದಿನಗಳ ಕಾಲಾವಕಾಶವನ್ನು ಕೋರಿದ್ದರು ಆದರೆ ಮನವಿಯನ್ನು ಏಜೆನ್ಸಿ ನಿರಾಕರಿಸಿತು.


ಈ ವರ್ಷದ ಏಪ್ರಿಲ್‌ನಲ್ಲಿ, ಸಂಜಯ್ ರಾವುತ್ ಅವರ ಪತ್ನಿ ವರ್ಷಾ ಅವರ ಬಳಿಯಿದ್ದ ದಾದರ್‌ನಲ್ಲಿರುವ ಫ್ಲ್ಯಾಟ್ ಮತ್ತು ಸ್ವಪ್ನಾ ಪಾಟ್ಕರ್ ಅವರೊಂದಿಗೆ ಜಂಟಿಯಾಗಿ ಹೊಂದಿದ್ದ ಅಲಿಬಾಗ್ ಬಳಿಯ ಕಿಹಿಮ್‌ನಲ್ಲಿರುವ ಎಂಟು ಜಮೀನು ಸೇರಿದಂತೆ ₹ 11.15 ಕೋಟಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಇಡಿ ಜಪ್ತಿ ಮಾಡಿತ್ತು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.