ನವದೆಹಲಿ: ನಟ ಹಾಗೂ ರಾಜಕಾರಣಿ ಅದೃಷ್ಟವಶಾತ್ ತಮ್ಮ ಹೆಸರು ಮೀಟೂ ಚಳುವಳಿಯಲ್ಲಿ ಬರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಇದೇ ವೇಳೆ ಸ್ಪಷ್ಟಪಡಿಸಿದ ಅವರು ಮೀಟೂ ಚಳುವಳಿಯನ್ನು ವ್ಯಂಗ್ಯ ಮಾಡುತ್ತಿಲ್ಲ ಆದ್ದರಿಂದ ತಮ್ಮ ಹೇಳಿಕೆಯನ್ನು ಸರಿಯಾದ ವಿಡಂಬನೆಯಲ್ಲಿ ತೆಗೆದುಕೊಳ್ಳಬೇಕೆಂದು ತಿಳಿಸಿದರು. 


COMMERCIAL BREAK
SCROLL TO CONTINUE READING

ಮುಂಬೈನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು "ಇದು ಮೀಟೂ ಕಾಲಾವಧಿ, ಪ್ರತಿಯೊಬ್ಬ ಯಶಸ್ವಿ ವೈಪಲ್ಯ ಪುರುಷನ ಹಿಂದೆ ಮಹಿಳೆಯಿದ್ದಾಳೆ ಎನ್ನುವುದಕ್ಕೆ ಯಾವುದೇ ಸಂಕೋಚ ಮತ್ತು ಅನುಮಾನವಿಲ್ಲ ಎಂದು ತಿಳಿಸಿದರು. ಈ ಚಳವಳಿಯಲ್ಲಿ ಹೆಚ್ಚಾಗಿ ನಾನು ಮಹಿಳೆಯರನ್ನೇ ನೋಡಿದೆ" ಎಂದು ತಿಳಿಸಿದರು.


ಇನ್ನು ಮುಂದುವರೆದು "ಈ ದಿನಗಳಲ್ಲಿ ನಾನು ನಿಜಕ್ಕೂ ಅದೃಷ್ಟವಶಾತ್  ಎಂದು ಹೇಳಬಹುದು, ಏಕೆಂದರೆ ನನ್ನ ಹೆಸರು ಮೀಟೂ ಚಳುವಳಿಯಲ್ಲಿ ಬರಲಿಲ್ಲ ಎಂದು ಅವರು ತಿಳಿಸಿದರು. ಇದೆ ವೇಳೆ ಮಹಿಳೆಯರ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿನ್ಹಾ, ಅವರ ಧೈರ್ಯಕ್ಕೆ ಸೆಲ್ಯೂಟ್ ಹೊಡೆಯಬೇಕು ಎಂದು ತಿಳಿಸಿದರು.