ಅಮರಾವತಿ: ಪ್ರಧಾನಿಯಾಗಲು ತಮಗೆ ಇಚ್ಛೆಯಿಲ್ಲ ಆದರೆ ಈ ದೇಶದ ಸೇವೆಯನ್ನು ಸೈನಿಕನಂತೆ ಮಾಡುವೆ ಎಂದು  ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ತಿಳಿಸಿದರು.


COMMERCIAL BREAK
SCROLL TO CONTINUE READING

ಶುಕ್ರವಾರದಂದು ಸುದ್ದಿಗಾರರೊಂದಿಗೆ  ಮಾತನಾಡಿದ ಅವರು "ನಾನು ಏನು ಮಾಡಬೇಕು, ಹೇಗೆ ಮಾಡಬೇಕು ಯಾವಾಗ ಮಾಡಬೇಕೆಂದು ಗೊತ್ತು, ನನಗೆ ಬೇಕಾಗಿರುವುದು ಒಳ್ಳೆಯ ಆಡಳಿತವಷ್ಟೇ ಎಂದರು.  ಎಲ್ಲಾ ನಾಯಕರು ತಮ್ಮ ರಾಜ್ಯಗಳನ್ನು ಬಲಪಡಿಸಬೇಕು. ಅದು ಮಮತಾ ಬ್ಯಾನರ್ಜಿ, ಕೆ.ಚಂದ್ರಶೇಖರ ರಾವ್ ಅಥವಾ ಮತ್ಯಾರೋ ಆಗಿರಬಹುದು ಆದರೆ ನಾನು ಮಾತ್ರ ಈ ದೇಶದ ಸೈನಿಕನಂತೆ ಕೆಲಸ ಮಾಡುತ್ತೇನೆ.


ನಾನು ಒಕ್ಕೂಟ ಸರ್ಕಾರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರೂ ಕೂಡ ಪ್ರಧಾನ ಮಂತ್ರಿಯಾಗುವ ಯಾವುದೇ ಇಚ್ಛೆ ನನಗಿಲ್ಲ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ನಾಯ್ಡು  ಕರ್ನಾಟಕದಲ್ಲಿ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಅನುಸರಿಸಿದ ತಂತ್ರದ ಬಗ್ಗೆ ಕಿಡಿಕಾರಿದರು.


"ಪ್ರಧಾನಿ ಮೋದಿ ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಾರೆ, ಆದರೆ ಕರ್ನಾಟಕದಲ್ಲಿ, ಅವರು ಎಲ್ಲಾ ಕಾನೂನು ಬಾಹಿರ ವಿಧಾನಗಳ ಮೂಲಕ ಎಂಎಲ್ಎಗಳನ್ನು ಖರೀದಿಸಲು ಪ್ರಯತ್ನಿಸಿದರು ಎಂದು ನಾಯ್ಡು ತಿಳಿಸಿದರು