ನವದೆಹಲಿ : 2019 ರಲ್ಲಿ ಮೋದಿಯವರ ಹೆಸರಿನ ಮೇಲಿನ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್‌ನ ಗುಜರಾತ್ ನ್ಯಾಯಾಲಯವು ದೋಷಿ ಎಂದು ಘೋಷಿಸಿದ ನಂತರ ರಾಹುಲ್ ಗಾಂಧಿ ಅವರನ್ನು ಮಾರ್ಚ್ 24ರಂದು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಸೇನೆ ಮತ್ತು ವಾಯುಸೇನೆಗೆ ಸಂಬಂಧಿಸಿದ ಆರೋಪಗಳನ್ನು ಸಾಕ್ಷ್ಯಾಧಾರಗಳೊಂದಿಗೆ ಇಡುತ್ತಿದ್ದೇನೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಬಿಜೆಪಿಯವರು ಲೋಕಸಭೆಯಲ್ಲಿ ನನಗೆ ಮಾತನಾಡಲು ಬಿಡುತ್ತಿಲ್ಲ. ನನ್ನ ಮೇಲಿನ ಆರೋಪ ಸುಳ್ಳು. ರಾಷ್ಟ್ರದ ವಿರುದ್ಧದ ಶಕ್ತಿಗಳನ್ನು ಸೋಲಿಸುತ್ತೇನೆ. ನಾನು ಯಾವುದೇ ಬೆದರಿಕೆಗೆ ಹೆದರುವುದಿಲ್ಲ. ನಾನು ಮೋದಿ - ಅದಾನಿ ಸಂಬಂಧವನ್ನು ಪ್ರಶ್ನಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದರು.


COMMERCIAL BREAK
SCROLL TO CONTINUE READING

ರಾಷ್ಟ್ರದ ವಿರುದ್ಧದ ಶಕ್ತಿಗಳ ವಿರುದ್ಧ ಹೋರಾಡಿ ಸೋಲಿಸುತ್ತೇನೆ. ಬಿಜೆಪಿ ಸಚಿವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಸಂಸತ್ತಿನಲ್ಲಿ ನನ್ನ ಭಾಷಣವನ್ನುನೋಟಿಫಿಕೇಷನ್‌ನಿಂದ ಅಳಿಸಿದ್ದಾರೆ. ನನ್ನ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಜನರ ಬಳಿ ನ್ಯಾಯ ಕೇಳುತ್ತೇನೆ. ಅದಾನಿ ಗ್ರೂಪ್ ಹಲವಾರು ನಕಲಿ ಕಂಪನಿಗಳ ಮೂಲಕ ಹೂಡಿಕೆ ಮಾಡಿದೆ ಎಂದು ಹೇಳಿದರು.


ಇದನ್ನೂ ಓದಿ : ಹೊಸ ದಾಖಲೆ ಸೃಷ್ಟಿಸಿದ ಇಸ್ರೋ : 36 ಉಪಗ್ರಹಗಳ LMV-3 ರಾಕೆಟ್ ಯಶಸ್ವಿ ಉಡಾವಣೆ!


ನನ್ನ ಮೇಲೆ ಹಿಂಸಾಚಾರ ಎಸಗಿ ಜೈಲು ಸೇರಿದರೂ ಹೆದರುವುದಿಲ್ಲ. ನನ್ನ ಹೆಸರು ಸಾವರ್ಕರ್ ಅಲ್ಲ ಮತ್ತು ನಾನು ಎಂದಿಗೂ ಕ್ಷಮೆ ಕೇಳುವುದಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಸಂಸತ್ತಿನಲ್ಲಿ ಕೇಂದ್ರ ಸಚಿವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಸಂಸತ್ತಿನಲ್ಲಿ ಅದಾನಿ ವಿಚಾರದ ಬಗ್ಗೆ ಪ್ರಧಾನಿಯವರನ್ನು ಪ್ರಶ್ನಿಸಿದಾಗ ಸಮಸ್ಯೆ ಶುರುವಾಯಿತು ಎಂದರು.


ನಾನು ಸ್ವತಃ ಪ್ರಧಾನಿ ಮೋದಿಯವರಿಗೆ 3 ಪ್ರಶ್ನೆಗಳನ್ನು ಹಾಕಿದ್ದೇನೆ, ಅವುಗಳೆಂದರೆ: ಅದಾನಿ ಗ್ರೂಪ್‌ನಲ್ಲಿ 20,000 ಕೋಟಿ ಹೂಡಿಕೆ ಮಾಡಿದ ಕಂಪನಿಗಳು ಯಾರದ್ದು ಮತ್ತು ಅದು ಯಾರ ಹಣ? ಮೋದಿ ವಿದೇಶಕ್ಕೆ ಹೋದಾಗಲೂ ಅದಾನಿ ಗ್ರೂಪ್ ಕೈಗಾರಿಕಾ ಗುತ್ತಿಗೆ ಪಡೆದಿರುವುದನ್ನು ನಾನು ಛಾಯಾಚಿತ್ರದ ಪುರಾವೆಯೊಂದಿಗೆ ಪ್ರಕಟಿಸಿದೆ. ಅದಾನಿಗಾಗಿ ವಿಮಾನ ನಿಲ್ದಾಣದ ನಿಯಮಗಳನ್ನು ಬದಲಾಯಿಸಲಾಗಿದೆ. ಅದಾನಿ ಗ್ರೂಪ್ ಭ್ರಷ್ಟಾಚಾರ ಪ್ರಕರಣದಲ್ಲಿ ಚೀನಾದ ಪ್ರಜೆಯೊಬ್ಬರು ಭಾಗಿಯಾಗಿದ್ದಾರೆ ಎಂದರು.


ಇದನ್ನೂ ಓದಿ : ರಾಹುಲ್ ಗಾಂಧಿ ಅನರ್ಹತೆ : ಕಾಂಗ್ರೆಸ್'ನಿಂದ ದೇಶಾದ್ಯಂತ ಪ್ರತಿಭಟನೆ : ಪಕ್ಷದ ಟಾರ್ಗೆಟ್ ಏನು ಗೊತ್ತಾ?


ರಾಜಕೀಯ ನ್ಯಾಯ ನನ್ನ ರಕ್ತದಲ್ಲಿದೆ. ನನ್ನ ಮಾತು ಮೋದಿಗೆ ಭಯ ತಂದಿದೆ. ನನಗೆ ಬೆಂಬಲ ನೀಡಿದ ವಿರೋಧ ಪಕ್ಷಗಳಿಗೆ ಧನ್ಯವಾದಗಳು. ನಾನು ಅವರೊಂದಿಗೆ ಕೆಲಸ ಮಾಡುತ್ತೇನೆ. ನಾನು ದೇಶದ ಜನರ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿದ್ದೇನೆ. ನಾನು ಸಂಸತ್ತಿನ ಒಳಗಿರಲಿ ಅಥವಾ ಹೊರಗಿರಲಿ, ನನ್ನ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದರು.


ಮಾರ್ಚ್ 23 ರಂದು ಗುಜರಾತ್‌ನ ಸೂರತ್ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಪರಿಣಾಮವಾಗಿ, ಶಿಕ್ಷೆಯಾದ ದಿನದಿಂದ ಲೋಕಸಭೆಯ ಸದಸ್ಯನ ಸ್ಥಾನವನ್ನೂ ಅನರ್ಹಗೊಳಿಸಲಾಯಿತು.


2019ರಲ್ಲಿ ರಾಹುಲ್ ಗಾಂಧಿ ರ್ಯಾಲಿಯಲ್ಲಿ ಹೇಳಿಕೆ ನೀಡಿದ್ದರು. ಅದರಲ್ಲಿ ಮೋದಿ ಎಂಬ ಉಪನಾಮ ಹೊಂದಿರುವ ಅಷ್ಟೂ ಮಂದಿಗೆ ಕ್ರೈಂ ಜೊತೆ ಏಕೆ ಸಂಬಂಧವಿದೆ ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಪೂರ್ಣೇಶ್ ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.