ಜೈಪುರ್: ಕೇಂದ್ರ ಸಚಿವ ರಾಮದಾಸ್ ಅಥಾವಳೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ತಮಗೆ ಸಮಸ್ಯೆಯಾಗಿಲ್ಲ ಏಕೆಂದರೆ ತಾವು ಸಚಿವರು ಎಂದು ಶನಿವಾರ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ಸಚಿವರಾಗಿದ್ದರಿಂದ ಏರುತ್ತಿರುವ ಇಂಧನ ಬೆಲೆಗಳು ತಮಗೆ  ಸಮಸ್ಯೆಯಾಗಿಲ್ಲ ಎಂದು ಅಥವಾಲೆ ಹೇಳಿದ್ದಾರೆ " ಇದೆ ಸಂದರ್ಭದಲ್ಲಿ ತಾವು ಪಡೆಯುವ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಿದ್ದಾರೆ.ಏರುತ್ತಿರುವ ಬೆಲೆ ಏರಿಕೆ ತಮಗೆ ಸಮಸ್ಯೆ ಉಂಟಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು "ನನ್ನ ಸಚಿವ ಹುದ್ದೆ ಕಳೆದುಕೊಂಡರೆ ನನಗೆ ಈ ಸಮಸ್ಯೆ ಉಂಟಾಗುತ್ತಿತ್ತು" ಎಂದು ಹೇಳಿದರು. ಆದರೆ ಇದರಿಂದ ಜನಸಾಮಾನ್ಯರು ಮೇಲೆ  ಹೆಚ್ಚು ಪರಿಣಾಮ ಬೀರುತ್ತಿದೆ  ಎಂದು ಮಂತ್ರಿ ಒಪ್ಪಿಕೊಂಡಿದ್ದಾರೆ.


"ಜನರು ಏರುತ್ತಿರುವ ಇಂಧನ ಬೆಲೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ಅವುಗಳನ್ನು ಕಡಿಮೆಗೊಳಿಸಲು ಸರಕಾರದ ಬದ್ದವಾಗಿದೆ" ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕೇಂದ್ರ ಸಚಿವರು ತಿಳಿಸಿದರು.ರಾಜ್ಯಗಳು ತೆರಿಗೆಯನ್ನು ಕಡಿತಗೊಳಿಸಿದಲ್ಲಿ ಇಂಧನದ ಬೆಲೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ ಸಚಿವರು,ಈ ವಿಷಯದ ಬಗ್ಗೆ ಕೇಂದ್ರವು ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.