ನವದೆಹಲಿ: 'ನಮ್ಮ ಯುವಕರನ್ನು ಡ್ರಗ್ಸ್‌ಗೆ ತಳ್ಳಿದ ತಪ್ಪಿತಸ್ಥರನ್ನು ಬಿಡುವುದಿಲ್ಲ, ಡ್ರಗ್ಸ್ ಮಾಫಿಯಾ ವಿರುದ್ಧದ ವರದಿಯನ್ನು ತೆರೆಯುವುದರೊಂದಿಗೆ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ಎಲ್ಲಾ ದೊಡ್ಡ ಶಾರ್ಕ್‌ಗಳನ್ನು ಬಹಿರಂಗಪಡಿಸುವುದಾಗಿ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಾರ್ವಜನಿಕರ ಜೀವನದಿಂದ ಭ್ರಷ್ಟಾಚಾರವನ್ನು ತೊಡೆದುಹಾಕಲು ತಮ್ಮ ಸರ್ಕಾರದ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಿದ ಸಿಎಂ ಚನ್ನಿ ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ದೃಢಸಂಕಲ್ಪದೊಂದಿಗೆ ಅದರ ಜನರ ಕಲ್ಯಾಣಕ್ಕಾಗಿ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.


ಇದನ್ನೂ ಓದಿ: ನೂರು ಕೋಟಿ ವಸೂಲಿ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ


ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಚನ್ನಿ,ಎಸ್‌ಎಡಿ ಸರಕಾರ ರಾಜ್ಯದ ಹಿತಾಸಕ್ತಿ ಕಡೆಗಣಿಸಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾತ್ರ ಆದ್ಯತೆ ನೀಡಿದೆ.ಶಿರೋಮಣಿ ಅಕಾಲಿದಳ ರಾಜಕೀಯದ ಕೊಳಕು ಆಟದಲ್ಲಿ ತೊಡಗಿದ್ದಕ್ಕಾಗಿ ಬಿಜೆಪಿಯೊಂದಿಗೆ ಸಿಂಕ್ ಆಗಿದೆ ಎಂದು ಅವರು ಆರೋಪಿಸಿದರು, ಆ ಮೂಲಕ ಜಾತಿ ಮತ್ತು ಧರ್ಮದ ಕಾರ್ಡ್ ಆಡುವ ಮೂಲಕ ದ್ವೇಷವನ್ನು ಹುಟ್ಟುಹಾಕಿದ್ದಾರೆ ಎಂದು ಅವರು ಕಿಡಿ ಕಾರಿದರು.


ಇನ್ನೊಂದೆಡೆಗೆ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಚನ್ನಿ 'ಇತ್ತೀಚಿನ ದಿನಗಳಲ್ಲಿ ರಾಜಕೀಯಕ್ಕಾಗಿ ಹಲವಾರು ಸ್ವಯಂ-ಶೈಲಿಯ "ಆಮ್  ಆದ್ಮಿಯಾಗಿ" ಹೊರಹೊಮ್ಮಿದ್ದಾರೆ ಮತ್ತು ಅವರು ಜನರ ಮೂಲಭೂತ ಸಮಸ್ಯೆಗಳು ಮತ್ತು ಅಗತ್ಯಗಳೊಂದಿಗೆ ದೂರದಿಂದಲೂ ಸಂಪರ್ಕ ಹೊಂದಿಲ್ಲ ಎಂದು ಹೇಳಿದರು.


ಇದನ್ನೂ ಓದಿ-ಪಡಿತರಾದಾರರಿಗೆ ಬಿಗ್ ಶಾಕ್ : ಇಂದಿನಿಂದ ಉಚಿತ ಪಡಿತರ ಯೋಜನೆ ಬಂದ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ