ನವದೆಹಲಿ: ಪಾಯಿಖಾನೆ ಚೌಕಿದಾರ್ ನಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ವಾರ್ದಾ ದಲ್ಲಿ  ಬಿಜೆಪಿ-ಶಿವಸೇನಾದ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ ತಮಗೆ ಶೌಚಾಲಯಗಳ ಚೌಕಿದಾರ್ ನಾಗಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು. ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕರೊಬ್ಬರು ಪ್ರಧಾನಿಯನ್ನು ಶೌಚಾಲಯಗಳ ಚೌಕಿದಾರ್ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸುತ್ತಾ ಹೀಗೆ ಹೇಳಿದರು.


"ನಾನು ಶೌಚಾಲಯಗಳ ಚೌಕಿದಾರ್ ನಾಗಿದ್ದೇನೆ ಎನ್ನುವ ಹೇಳಿಕೆಯನ್ನು ನಾನು ಹೊಗಳಿಕೆಯ ಭಾಗವಾಗಿ ತೆಗೆದುಕೊಳ್ಳುತ್ತೇನೆ.ಏಕೆಂದರೆ ನಾನು ಈ ದೇಶದಲ್ಲಿನ ಹಲವು ಮಹಿಳೆಯರು ಮತ್ತು ಬಾಲಕಿಯರಿಗೆ ರಕ್ಷಣೆ ಒದಗಿಸಿದ್ದೇನೆ" ಎಂದು ಪ್ರಧಾನಿ ಮೋದಿ  ಹೇಳಿದರು.


ಇದೇ ವೇಳೆ ಇಸ್ರೋ ವಿಜ್ಞಾನಿಗಳ ಸಾಧನೆ ಬಗ್ಗೆ ಶ್ಲಾಘಿಸುತ್ತಾ ಭಾಷಣ ಆರಂಭಿಸಿದ ಮೋದಿ "ನೀವು(ಕಾಂಗ್ರೆಸ್)ನನ್ನನ್ನು ಶೌಚಾಲಯಗಳ ಚೌಕಿದಾರ್ ಎಂದು ನನ್ನನ್ನು ಹೀಗಳೆಯಬಹುದು.ಆದರೆ ಇದನ್ನು ನಾನು ಹೊಗಳಿಕೆಯ ಭಾಗವಾಗಿ ಸ್ವೀಕರಿಸುತ್ತೇನೆ ಎಂದರು.ಶರದ್ ಪವಾರ್ ರನ್ನು ವ್ಯಂಗ್ಯವಾಡಿದ ಮೋದಿ" ಅವರು ಎಂದಾದರೂ ಒಂದು ದಿನ ಪ್ರಧಾನಿಯಾಗಬೇಕೆಂದು ಕನಸು ಕಂಡಿದ್ದರು. ಆದರೆ ಈಗ ಅವರು ಚುನಾವಣೆಯಲ್ಲಿ ಸ್ಪರ್ಧಿಸದೆ ರಾಜ್ಯಸಭೆಗೆ ತೃಪ್ತಿಪಟ್ಟಿದ್ದಾರೆ ಎಂದು ಹೇಳಿದರು.