CM Uddhav Thackeray Resign : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಸಿದ್ಧ ಉದ್ಧವ್ ಠಾಕ್ರೆ!
ಈ ಕುರಿತು ಫೇಸ್‌ಬುಕ್ ಲೈವ್ ಬಂದು ಮರಾಠಿ ಭಾಷೆಯಲ್ಲಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ನನಗೆ ಅಧಿಕಾರದ ದುರಾಸೆ ಇಲ್ಲ. ಒಂದು ವೇಳೆ ನಾನು ಶಾಸಕರ ವಿಶ್ವಾಸ ಕಳೆದುಕೊಂಡಿದ್ದರೆ ಈ ಕುರ್ಚಿಗೆ ನಾನು ಅರ್ಹನಲ್ಲ ಎಂದರು ಹೇಳಿದರು.
CM Uddhav Thackeray facebook LIVE : ಶಿವ ಸೇನೆ ನಾಯಕರು ನನ್ನ ಮೇಲೆ ಕೋಪಗೊಂಡರೆ, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಈ ಕುರಿತು ಫೇಸ್‌ಬುಕ್ ಲೈವ್ ಬಂದು ಮರಾಠಿ ಭಾಷೆಯಲ್ಲಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ನನಗೆ ಅಧಿಕಾರದ ದುರಾಸೆ ಇಲ್ಲ. ಒಂದು ವೇಳೆ ನಾನು ಶಾಸಕರ ವಿಶ್ವಾಸ ಕಳೆದುಕೊಂಡಿದ್ದರೆ ಈ ಕುರ್ಚಿಗೆ ನಾನು ಅರ್ಹನಲ್ಲ ಎಂದರು.
ಇದನ್ನೂ ಓದಿ : Maharashtra Political Crisis: ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸಿಎಂ ಉದ್ಧವ್ ಠಾಕ್ರೆಗೆ ಕೋವಿಡ್ ದೃಢ
'ಮತ್ತೆ ಶಿವಸೇನೆಯ ನಾಯಕನಿಗೆ ಸಿಎಂ ಪಟ್ಟ'
ಅಷ್ಟೇ ಅಲ್ಲ, ಶಿವಸೇನೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಸಿದ್ಧ. ಶಿವಸೇನೆ ನಾಯಕರು ಮಾತ್ರ ಸಿಎಂ ಆಗಿದ್ದಾರೆ ಎಂದೂ ಹೇಳಿದರು. ಅವರು ಶಿವಸೇನೆಯವರು ಯಾವುದೇ ನಾಯಕನನ್ನ ಮುಖ್ಯಮಂತ್ರಿಯನ್ನು ಸ್ವೀಕರಿಸುತ್ತಾರೆ ಎಂದರು.
'ಫೇಸ್‌ಬುಕ್ ಲೈವ್ ಬಂದು ಮಾಹಿತಿ ನೀಡಿದ ಸಿಎಂ ಠಾಕ್ರೆ'
ಫೇಸ್‌ಬುಕ್ ಲೈವ್‌ನಲ್ಲಿ ಸಿಎಂ ಉದ್ಧವ್ ಠಾಕ್ರೆ, ನಮ್ಮ ಪಕ್ಷದ ಶಾಸಕರೊಬ್ಬರು ಮುಂದಿನ ಸಿಎಂ ಆದ್ರೆ ಮಾತ್ರ ರಾಜೀನಾಮೆ ನೀಡುವುದಾಗಿ ಗುಪ್ತ ಸಂದೇಶವನ್ನೂ ನೀಡಿದ್ದಾರೆ. ಮುಂದಿನ ಸಿಎಂ ಅಭ್ಯರ್ಥಿ ಏಕನಾಥ್ ಶಿಂಧೆ ಎಂಬ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ ಶಿವಸೇನೆ ನಾಯಕರು ನನಗೆ ದ್ರೋಹ ಬಗೆಯಬಾರದು ಎಂದು ಸ್ಪಷ್ಟವಾಗಿ ತಿಳಿಸಿದರು. ಯಾರಿಗಾದರೂ ದೂರು ಇದ್ದರೆ ನನ್ನೊಂದಿಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
'ಬಾಳಾಸಾಹೇಬ್ ಠಾಕ್ರೆಯವರ ತತ್ವಗಳೊಂದಿಗೆ ಶಿವಸೇನೆ'
ಇಂದಿಗೂ ನಮ್ಮ ಪಕ್ಷ ಬಾಳಾಸಾಹೇಬ್ ಠಾಕ್ರೆ ಅವರದ್ದೇ. ಇಂದಿಗೂ ನಾವು ಹಿಂದುತ್ವದ ವಿಚಾರದಲ್ಲಿ ದೃಢವಾಗಿದ್ದೇವೆ. ಅಲ್ಲದೇ ವಿಧಾನಸಭೆಯಲ್ಲಿ ಹಿಂದುತ್ವದ ವಿಚಾರವನ್ನು ಪ್ರಸ್ತಾಪಿಸಿದ ಮೊದಲ ವ್ಯಕ್ತಿ ನಾನೇ ಎಂದು ಹೇಳಿದರು. ಸಿಎಂ ಠಾಕ್ರೆ ಈ ಲೈವ್‌ನಲ್ಲಿ ಭಾಟಿ ಕೋಪಗೊಂಡಿದ್ದರು.
ಇದನ್ನೂ ಓದಿ : Maharashtra Political Crisis : ಉದ್ಧವ್ ಠಾಕ್ರೆ ಇಂದು ಸಂಜೆಯೊಳಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ!?
ಶರದ್ ಪವಾರ್ ಕೈಯಲ್ಲಿ ಅಧಿಕಾರದ ರಿಮೋಟ್ ಕಂಟ್ರೋಲ್
ಕಳೆದ ಎರಡೂವರೆ ವರ್ಷಗಳ ಸರ್ಕಾರದಲ್ಲಿ ಶಿವಸೇನೆ ಶಾಸಕರು ತಮ್ಮ ನಾಯಕ ಸಿಎಂ ಆದ ನಂತರವೂ ಮಿತ್ರಪಕ್ಷಗಳೇ ಅಧಿಕಾರ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಿಎಂ ಉದ್ಧವ್ ಆಗಿರಬಹುದು ಆದರೆ ಅಧಿಕಾರದ ರಿಮೋಟ್ ಕಂಟ್ರೋಲ್ ಶರದ್ ಪವಾರ್ ಕೈಯಲ್ಲಿದೆ ಎಂದು ಆಗಾಗ ಒತ್ತಿ ಒತ್ತಿ ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.