ನವದೆಹಲಿ: ಇದು ಮಣಿಶಂಕರ್ ಅಯ್ಯರ್ ಪ್ರಧಾನಿ ಮೋದಿಯವರಿಗೆ 'ನೀಚ್' ಎಂದು ಕರೆದಿರುವ ಬಗ್ಗೆ ಅವರು ಕೊಟ್ಟಿರುವ ಸಮರ್ಥನೆ.


COMMERCIAL BREAK
SCROLL TO CONTINUE READING

ಈ ಹಿಂದೆ ಮಣಿಶಂಕರ ಅಯ್ಯರ್ 2014 ರ ಲೋಕಸಭೆಯ ಚುನಾವಣೆಯಲ್ಲಿ ಮೋದಿಯನ್ನು ಚಾಯ್ ವಾಲಾ ಎಂದು ಕರೆದಿದ್ದು  ಬಹಳ ಸುದ್ದಿ ಮಾಡಿತ್ತು. ಅಲ್ಲದೆ ಆ ಹೇಳಿಕೆಯನ್ನೇ ಬಿಜೆಪಿಯು ಚುನಾವಣಾ ಪ್ರಚಾರದಲ್ಲಿ ಚಾಯ್ ಪೆ ಚರ್ಚಾ ಅಂತ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಈಗ ಅದೇ ರೀತಿಯಾಗಿ ಮತ್ತೆ ಮೋದಿಯವರನ್ನು  ಗುಜರಾತ ಚುನಾವಣಾ ಹಿನ್ನಲೆಯಲ್ಲಿ 'ನೀಚ್' ಎಂದು ಕರೆಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಜಗರ ತಂದಿದ್ದಾರೆ.
 
ಈ ಹೇಳಿಕೆಗೆ ತಕ್ಷಣ ಟ್ವಿಟರ್ ಮೂಲಕ  ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ "ಬಿಜೆಪಿ ಮತ್ತು ಮೋದಿ ನಿರಂತರವಾಗಿ ತಮ್ಮ ಅಸಂವಿಧಾನಿಕ ಭಾಷೆಯಿಂದ ಕಾಂಗ್ರೆಸ್ಸ್ ಪಕ್ಷವನ್ನು ಟೀಕಿಸುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಭಿನ್ನವಾದ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ.ಆದ್ದರಿಂದ ಮಣಿಶಂಕರರವರು ಪ್ರಧಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಭಾಷೆ ಸರಿಯಲ್ಲ ಅದಕ್ಕೆ ಅವರು ಪ್ರಧಾನಮಂತ್ರಿಗಳ ಕ್ಷಮೆಯನ್ನು ಕೇಳಬೇಕು ಆದೇಶಿಸಿದ್ದಾರೆ. 



ಆದರೆ ಪ್ರಧಾನಿಗಳಿಗೆ ಕರೆದಿರುವ 'ನೀಚ್' ಪದ ಬಳಕೆಗೆ ಸ್ಪಷ್ಟನೆ ನೀಡಿರುವ ಮಣಿಶಂಕರ್ ಅಯ್ಯರ್ "ನಾನು 'ನೀಚ್' ಎನ್ನುವುದನ್ನು ಇಂಗ್ಲಿಷಿನ ಅರ್ಥದಲ್ಲಿ  ಅರ್ಥೈಸಿ ಹೇಳಿರುವುದು, ನನ್ನ ಮಾತೃ ಭಾಷೆ ಹಿಂದಿ ಅಲ್ಲದ ಕಾರಣ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.ಒಂದು ವೇಳೆ ಅದು ಹಿಂದಿಯಲ್ಲಿ ಭಿನ್ನ ಅರ್ಥ ನಿಡುವಂತಿದ್ದರೆ ಅದಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.


ಅಯ್ಯರ್ ರವರ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಪ್ರಧಾನಿ ಮೋದಿ "ಕಾಂಗ್ರೆಸ್ ನಾಯಕರು ಬಳಸುವ ಭಾಷೆ ಪ್ರಜಾಪ್ರಭುತ್ವದಲ್ಲಿ ಸ್ವೀಕಾರ್ಹವಲ್ಲ ಎಂದರು. ಒಬ್ಬ ಕಾಂಗ್ರೆಸಿನ ನಾಯಕ  ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ, ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಮಾಜಿ ಕೇಂದ್ರ ಮಂತ್ರಿಗಳಾಗಿದ್ದಾರೆ. ಅವರು ಹೇಳುವ ಈ ನೀಚ್ ಎನ್ನುವ ಅರ್ಥ ಅವರ ಮೊಗಲ್ ದರ್ಬಾರದ ನೀತಿಯನ್ನು ಎತ್ತಿ ತೋರಿಸುತ್ತದೆ" ಎಂದರು.