ನವದೆಹಲಿ: ಬಹುಜನ ಸಮಾಜ ಪಕ್ಷದ ಶಾಸಕಿ ರಮಾಬಾಯಿ ಸಿಂಗ್ ತಾನು ಎಲ್ಲ ಸಚಿವರ ಬಾಪ್ ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ತನಗೆ ಮತ್ತು ಇತರ ಬಿಎಸ್ಪಿ ಶಾಸಕರಿಗೆ ಮಂತ್ರಿಗಿರಿ ನೀಡದೆ ಹೋದಲ್ಲಿ ಕರ್ನಾಟಕದ ರೀತಿಯ ರಾಜಕೀಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮಧ್ಯಪ್ರದೇಶದ ದಮೋಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಸಚಿವರಾಗದಿದ್ದರೂ ಕೂಡ ತಾವು ಉತ್ತಮ ಕೆಲಸ ಮಾಡುವುದಾಗಿ ಹೇಳಿದ್ದಲ್ಲದೆ ಎಲ್ಲ ಸಚಿವರ ಬಾಪ್ ಎಂದು ಹೇಳಿದರು.ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತಕ್ಕೆ ಕೊರತೆ ಬಂದ ಹಿನ್ನಲೆಯಲ್ಲಿ ಬಿಎಸ್ಪಿ ಸಹಾಯದಿಂದ ಅದು ಸರ್ಕಾರ ರಚನೆ ಮಾಡಿತ್ತು.ಈಗ ಸೂಕ್ತ ಸ್ಥಾನಮಾನ ನೀಡದಿರುವ ಹಿನ್ನಲೆಯಲ್ಲಿ ಬಿಎಸ್ಪಿ ಶಾಸಕರು ಅಸಮಾಧಾನಗೊಂಡಿದ್ದಾರೆ.



ಮಧ್ಯಪ್ರದೇಶದಲ್ಲಿ ರಮಾಬಾಯಿ ಸಿಂಗ್ ಮತ್ತು ಸಂಜೀವ್ ಸಿಂಗ್ ಖುಷ್ವಾ ಇಬ್ಬರು ಬಿಎಸ್ಪಿ ಶಾಸಕರು ಮಧ್ಯಪ್ರದೇಶದಲ್ಲಿ  ಕಾಂಗ್ರೆಸ್  ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ