ನವದೆಹಲಿ:  ತಾವು ಮತ್ತು ರಜನಿಕಾಂತ್ ಅವರು ವಿಭಿನ್ನ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿದ್ದೇವೆ, ಆದರೆ ಯಾವಾಗಲೂ ಪರಸ್ಪರ ಗೌರವಿಸುತ್ತೇವೆ ಎಂದು ಕಮಲ್ ಹಾಸನ್ ಶುಕ್ರವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

'ಒಂದು ಸಮಯದಲ್ಲಿ ನಮ್ಮಿಬ್ಬರಿಗೂ ಒಳ್ಳೆಯದಾಗಲಿದೆ ಎಂದು ನಂಬಿದ್ದರಿಂದ ಒಬ್ಬರನ್ನೊಬ್ಬರು ಗೌರವಿಸಲು ನಿರ್ಧರಿಸಿದೆವು. ಇಂದು, ನಾವು ಒಬ್ಬರಿಗೊಬ್ಬರು ಗೌರವಿಸುವುದನ್ನು, ಟೀಕಿಸುವುದನ್ನು ಮತ್ತು ಅನುಮೋದಿಸುವುದನ್ನು ಮುಂದುವರಿಸುತ್ತೇವೆ ಎಂದು ಕಮಲ್ ಹಾಸನ್ ತಮ್ಮ ಪ್ರೊಡಕ್ಷನ್ ಹೌಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.


ಇದೇ ವೇಳೆ ತಮ್ಮ ಗುರು ಬಾಲಚಂದರ್ ಬಗ್ಗೆ ಮಾತನಾಡಿದ ಹಾಸನ್, ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ಪ್ರತಿಮೆ ಸ್ಥಾಪಿಸಿರುವ ಬಗ್ಗೆ ನನಗೆ ಖುಷಿಯಾಗಿದೆ, ಅವರು (ಬಾಲಚಂದರ್)  ಸಿನೆಮಾ ಜಗತ್ತಿನಲ್ಲಿ ಪ್ರವೇಶಿಸಿದ ಮೊದಲ ವರ್ಷದಲ್ಲೇ ಐಕಾನ್ ಆಗಿದ್ದರು ಎಂದು ಹಾಸನ್ ಸುದ್ದಿಗಾರರಿಗೆ ತಿಳಿಸಿದರು.


ಬಾಲಚಂದರ್ ಅವರು ಒಂಬತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1987 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಮತ್ತು ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.