ನವದೆಹಲಿ: ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶುಕ್ರವಾರ ಜನವರಿ 4 ರಂದು ರೈತ ಸಂಘಗಳೊಂದಿಗಿನ ಮುಂದಿನ ಸಭೆಯಲ್ಲಿ ಸಕಾರಾತ್ಮಕ ಫಲಿತಾಂಶದ ಬಗ್ಗೆ ಭರವಸೆ ಹೊಂದಿದ್ದಾರೆ, ಆದರೆ ಏಳನೇ ಸುತ್ತಿನ ಮಾತುಕತೆಯಲ್ಲಿ ತಾರ್ಕಿಕ ಅಂತ್ಯ ಕಾಣಬಹುದೇ ಎನ್ನುವ ವಿಚಾರವನ್ನು ಅವರು ಸ್ಪಷ್ಟಪಡಿಸಲಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Farmer Protest : ಕೇಂದ್ರ ಸರ್ಕಾರ -ರೈತ ಸಂಘಟನೆಗಳ ಮಾತುಕತೆ ; ನಾಲ್ಕು ಬೇಡಿಕೆಗಳ ಪೈಕಿ ಎರಡನ್ನು ಈಡೇರಿಸಲು ಒಪ್ಪಿದ ಸರ್ಕಾರ


ಪಿಟಿಐಯೊಂದಿಗೆ ಮಾತನಾಡಿದ ಸಚಿವರು, 2020 ರ ಡಿಸೆಂಬರ್ 30 ರಂದು ನಡೆದ ಕೊನೆಯ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆದಿತ್ತು ಮತ್ತು ಮುಂದಿನ ಸಭೆಯಲ್ಲಿ ರೈತರ ಮತ್ತು ದೇಶದ ಕೃಷಿ ಕ್ಷೇತ್ರದ ಹಿತಾಸಕ್ತಿಗೆ ಸಕಾರಾತ್ಮಕ ಫಲಿತಾಂಶ ಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮತ್ತು ಪರ್ಯಾಯಗಳನ್ನು ಸೂಚಿಸುವ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸುವ ರೈತ ಸಂಘಗಳು ತಮ್ಮ ಬೇಡಿಕೆಗೆ ಅಂಟಿಕೊಂಡಿವೆ ಎಂದು ನರೇಂದ್ರ ಸಿಂಗ್ ತೋಮರ್ (Narendra Singh Tomar) ಹೇಳಿದರು.


ಇದನ್ನೂ ಓದಿ: Big Announcement: ಅನ್ನದಾತನ ಖಾತೆಗೆ 18 ಸಾವಿರ ಕೋಟಿ ರೂ. ವರ್ಗಾಯಿಸಲು ಮುಂದಾದ Modi Government


ಜನವರಿ 4 ರ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಸಚಿವರು' ನಾನು ಈಗ ಖಚಿತವಾಗಿ ಹೇಳಲಾರೆ.ನಾನು ಜ್ಯೋತಿಷಿ ಅಲ್ಲ.ಆದರೆ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವೆಲ್ಲವೂ ಕೂಡ ದೇಶದ ಹಾಗೂ ರೈತರ ಹಿತಾಸಕ್ತಿಗೆ ಪೂರಕವಾಗಿರಲಿದೆ ಎಂದು ಹೇಳಿದರು.


ಇದನ್ನೂ ಓದಿ: ಮೋದಿ 'ಮನ್ ಕಿ‌ ಬಾತ್' ಕಾರ್ಯಕ್ರಮದ ವೇಳೆ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲು ಕರೆ


ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ಒಂದು ತಿಂಗಳ ಕಾಲ ವಿವಿಧ ದೆಹಲಿ ಗಡಿಗಳಲ್ಲಿನ ಆಂದೋಲನವನ್ನು ಕೊನೆಗೊಳಿಸಲು ಸರ್ಕಾರ ಮತ್ತು ಸುಮಾರು 40 ಪ್ರತಿಭಟನಾ ಸಂಘಗಳ ನಡುವೆ ಆರು ಸುತ್ತಿನ ಮಾತುಕತೆ ವಿಫಲವಾಗಿದೆ.