ನವದೆಹಲಿ: 2019 ರ ಲೋಕಸಭೆಗೂ ಮುನ್ನ ಬಿಜೆಪಿಗೆ ಬಿಹಾರದಲ್ಲಿ ಭಾರಿ ಹಿನ್ನಡೆಯಾಗಿದೆ. ಬಿಜೆಪಿ ನೀಡಿದ್ದ 20-20 ಸೀಟು ಹಂಚಿಕೆ ಸೂತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮೈತ್ರಿಪಕ್ಷದ ನಾಯಕ ಆರ್ಎಲ್ಎಸ್ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ""ನಾನು ಕ್ರಿಕೆಟ್ ಆಡುತ್ತಿಲ್ಲ ಮತ್ತು ಈ 20-20 ಸೂತ್ರವನ್ನು ನನಗೆ ಅರ್ಥವಾಗುವುದಿಲ್ಲ. ಬದಲಾಗಿ, ನಾನು 'ಗಿಲ್ಲಿ ದಂಡ' ಆಡಲು ಇಷ್ಟಪಡುತ್ತೇನೆ. " ಎಂದು ವ್ಯಂಗವಾಡಿದ್ದಾರೆ. ಆ ಮೂಲಕ ಬಿಜೆಪಿ ನೀಡಿರುವ ಸೂತ್ರವನ್ನು ತಿರಸ್ಕರಿಸಿದ್ದಾರೆ.


COMMERCIAL BREAK
SCROLL TO CONTINUE READING

ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಶ್ವಾಹಾ ಅವರು "ನನ್ನ ಜೀವನದಲ್ಲಿ ನಾನು 20-20 ಕ್ರಿಕೆಟ್ ಆಡಲಿಲ್ಲ ಮತ್ತು ಇದೀಗ ಅದನ್ನು ಆಡಲು ಆಸಕ್ತಿ ಇಲ್ಲ, ಬದಲಿಗೆ ನಾನು 'ಗಿಲ್ಲಿ ದಂಡಾ' ಆಡಲು ಇಷ್ಟಪಡುತ್ತೇನೆ ಎಂದು ಅವರು ಹೇಳಿದರು.ಚಿನ್ನಿ ದಾಂಡು ಎಂದರೆ ತಾವು ಹಡಗಿಗೆ ಜಿಗಿಯುವುದೇ ಎಂದಾಗ  ನಕ್ಕು ಅವರು  "ಕೆಲವು ದಿನಗಳವರೆಗೆ ಕಾದು ನೋಡಿ ಎಲ್ಲ ಚಿತ್ರಣ ದೊರೆಯಲಿದೆ ಎಂದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೀಟು ಹಂಚಿಕೆ ವಿಚಾರವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.


ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 20-20 ಸ್ಥಾನ ಹಂಚಿಕೆ ಯೋಜನೆ ಪ್ರಕಾರ, ಬಿಜೆಪಿ 20 ಸ್ಥಾನಗಳನ್ನು ಗೆಲ್ಲುತ್ತದೆ. ನಿತೀಶ್ ಕುಮಾರ್ ಅವರ ಜೆಡಿ (ಯು) ಗೆ 12, ರಾಮ್ ವಿಲಾಸ್ ಪಾಸ್ವಾನ್ ಎಲ್ಜೆಪಿಯ 6, ಮತ್ತು ಕುಶ್ವಾಹಾ ಆರ್ಎಲ್ಎಸ್ಪಿಗೆ ಕೇವಲ 2 ಸ್ಥಾನಗಳನ್ನು ಮಿಸಲಿಡಲಾಗಿದೆ.