ಜೋಧಪುರ್:ಪ್ರತಿಕಾರದ ಮೂಲಕ ಪಡೆದ ನ್ಯಾಯ ಅದರ ಮೂಲ ಚರಿತ್ರೆಯನ್ನು ಉಳಿಸಿಕೊಳ್ಳಲು ವಿಫಲವಾಗುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹೇಳಿದ್ದಾರೆ. ಸೇಡು ತೀರಿಸಿಕೊಳ್ಳುವುದು ಒಂದು ನ್ಯಾಯವಾದರೆ ಅದು ಖಂಡಿತ ನ್ಯಾಯವಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ವೇಳೆ ಯಾವುದೇ ಒಂದು ಘಟನೆಯನ್ನು ನೇರವಾಗಿ ಅವರು ಉಲ್ಲೇಖಿಸದಿದ್ದರೂ ಕೂಡ ಹೈದರಾಬಾದ್ ನಲ್ಲಿ ನಡೆದಿರುವ ಎನ್ಕೌಂಟರ್ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.


ರಾಜಸ್ಥಾನದ ಜೋಧಪುರ್ ನಲ್ಲಿ ಮಾತನಾಡಿರುವ ಅವರು "ದೇಶದಲ್ಲಿನ ಇತೀಚಿನ ಘಟನೆಗಳು ಹೊಸ ಚೈತನ್ಯದೊಂದಿಗೆ ಹಳೆ ಚರ್ಚೆಗಳಿಗೆ ಮತ್ತು ಜೀವಂತಗೊಳಿಸಿವೆ. ಇಂತಹ ಸಂದರ್ಭದಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ತನ್ನ ಸ್ಥಾನವನ್ನು ಪುನರ್ಪರಿಶೀಲಿಸಬೇಕು ಮತ್ತು ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಇರುವ ಸಡಿಲತೆಯ ಮನೋಭಾವನೆಯನ್ನು ಬದಲಾಯಿಸಬೇಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಅವರು ಹೇಳಿದ್ದಾರೆ.