ಮುಖ್ಯಮಂತ್ರಿಯಾಗಲು ಎಂದಿಗೂ ಬಯಸಿಲ್ಲ, ಆದರೆ ಬದಲಾವಣೆ ಬಯಸಿರುವೆ- ರಜನಿಕಾಂತ್
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಮುಖ್ಯಮಂತ್ರಿಯಾಗಲು ಎಂದಿಗೂ ಆಶಿಸಲಿಲ್ಲ, ಆದರೆ ತಾವು ಬದಲಾವಣೆಯನ್ನು ಮಾತ್ರ ಬಯಸಿರುವುದಾಗಿ ಎಂದು ಹೇಳಿದ್ದಾರೆ. ಈಗ ಅವರ ಹೇಳಿಕೆಗಳು ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಂದಿವೆ.
ನವದೆಹಲಿ: ಸೂಪರ್‌ಸ್ಟಾರ್ ರಜನಿಕಾಂತ್ ಅವರು ಮುಖ್ಯಮಂತ್ರಿಯಾಗಲು ಎಂದಿಗೂ ಆಶಿಸಲಿಲ್ಲ, ಆದರೆ ತಾವು ಬದಲಾವಣೆಯನ್ನು ಮಾತ್ರ ಬಯಸಿರುವುದಾಗಿ ಎಂದು ಹೇಳಿದ್ದಾರೆ. ಈಗ ಅವರ ಹೇಳಿಕೆಗಳು ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಂದಿವೆ.
ರಜನಿಕಾಂತ್ ತಮ್ಮ ಪ್ರಸ್ತಾವನೆಯಲ್ಲಿ ವಿದ್ಯಾವಂತ ಮತ್ತು ಸಹಾನುಭೂತಿಯ ಯುವಕನನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು. "ನಾನು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಎಂದಿಗೂ ಯೋಚಿಸಿಲ್ಲ. ನನಗೆ ರಾಜಕೀಯದಲ್ಲಿ ಬದಲಾವಣೆ ಮಾತ್ರ ಬೇಕು...ರಾಜಕೀಯ ಮತ್ತು ಸರ್ಕಾರದಲ್ಲಿ ಬದಲಾವಣೆ ಈಗ ಆಗದಿದ್ದರೆ ಅದು ಎಂದಿಗೂ ಆಗುವುದಿಲ್ಲ" ಎಂದು ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಮ್ಮ ರಾಜಕೀಯದಲ್ಲಿ ಇಬ್ಬರು ಪ್ರಬಲರು ಇದ್ದರು, ಒಬ್ಬರು ಜಯಲಲಿತಾ ಮತ್ತು ಒಬ್ಬರು ಕಲೈನಾರ್ (ಎಂ ಕರುಣಾನಿಧಿ). ಜನರು ಅವರಿಗೆ ಮತ ಹಾಕಿದರು ಆದರೆ ಈಗ ನಿರ್ವಾತವಿದೆ. ಈಗ, ಬದಲಾವಣೆಯನ್ನು ತರಲು ನಾವು ಹೊಸ ಆಂದೋಲನವನ್ನು ರಚಿಸಬೇಕಾಗಿದೆ" ಎಂದು ಅವರು ಹೇಳಿದರು. "ಪಕ್ಷಕ್ಕೆ ವಿವಿಧ ಮುಖ್ಯಸ್ಥರು ಮತ್ತು ಅದರ ನೇತೃತ್ವದ ಸರ್ಕಾರ ಇರುತ್ತದೆ" ಎಂದು ಅವರು ಹೇಳಿದರು.
ಕಳೆದ ವಾರ, ಅವರು ತಮ್ಮ ರಜಿನಿ ಮಕ್ಕಲ್ ಮಂದಿರಂ (ರಜನಿ ಪೀಪಲ್ಸ್ ಫೋರಂ) ನ ಜಿಲ್ಲಾ ಕಾರ್ಯದರ್ಶಿಗಳನ್ನು ಭೇಟಿಯಾದ ನಂತರ ಒಂದು ವಿಷಯದ ಬಗ್ಗೆ ನಿರಾಶೆಗೊಂಡಿರುವುದಾಗಿ ರಜನಿ ಹೇಳಿದ್ದರು, 'ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ವೈಯಕ್ತಿಕವಾಗಿ, ನಾನು ಒಂದು ವಿಷಯದ ಬಗ್ಗೆ ನಿರಾಶೆಗೊಂಡಿದ್ದೇನೆ. ಸಮಯ ಬಂದಾಗ ನಾನು ಹೇಳುತ್ತೇನೆ" ಎಂದು ಹೇಳಿದರು.
2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ಪಕ್ಷವನ್ನು ಪ್ರಾರಂಭಿಸುವುದಾಗಿಹೇಳಿದ್ದರಿಂದ ಈಗ ಅವರ ಹೇಳಿಕೆ ಮಹತ್ವ ಪಡೆದಿದೆ. 2021 ರ ಚುನಾವಣೆ ಕರುಣಾನಿಧಿ ಮತ್ತು ಜಯಲಲಿತಾರಂತಹ ನಾಯಕರುಗಲಿಲ್ಲದೆ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ.ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಇ ಪಳನಿಸ್ವಾಮಿ ಅವರ ನಾಯಕತ್ವಕ್ಕೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ರಜನಿಕಾಂತ್ ಮತ್ತು ನಟ-ರಾಜಕಾರಣಿ ಕಮಲ್ ಹಾಸನ್ ಇಬ್ಬರೂ ರಾಜಕೀಯವಾಗಿ ಒಟ್ಟಾಗಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು, ಅವರು ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಒಂದು ಬಗೆಯ ಬ್ಲಾಕ್‌ಬಸ್ಟರ್ ಆಗಿ ಪರಿವರ್ತಿಸಬಹುದೆಂಬ ಊಹಾಪೋಹಗಳಿಗೆ ನಾಂದಿ ಹಾಡಿದರು.
1996 ರಲ್ಲಿ, 'ಜಯಲಲಿತಾ ಚುನಾವಣೆಯಲ್ಲಿ ಗೆದ್ದರೆ ದೇವರಿಗೆ ಸಹ ತಮಿಳುನಾಡನ್ನು ಉಳಿಸಲು ಸಾಧ್ಯವಿಲ್ಲ" ಎಂಬ ರಜನಿಕಾಂತ್ ಅವರ ಹೇಳಿಕೆಯು ಡಿಎಂಕೆ ಮೈತ್ರಿಕೂಟವನ್ನು ವಿಧಾನಸಭಾ ಚುನಾವಣೆಯನ್ನು ಮುನ್ನಡೆಸಲು ಅನುವು ಮಾಡಿಕೊಟ್ಟಿತು.
ಈಗ ಇನ್ನೊಂದೆಡೆ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಕೂಡ ಚುನಾವಣೆ ಗೆಲುವಿಗೆ ಆಕ್ರಮಣಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ಯುವ ಮೂಲಕ ಮತ್ತು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಗೆಲುವು ಸಾಧಿಸುವ ಮೂಲಕ ಅವರು ಕಾರ್ಯಕಾರಿ ಪಕ್ಷದ ಮುಖ್ಯಸ್ಥರಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ.