ನವದೆಹಲಿ: ಮೀಟೂ ಆರೋಪದಲ್ಲಿ ನಾನಾ ಪಟೇಕರ್ ಹೆಸರು ಬಂದಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ರಾಜ್ ಠಾಕ್ರೆ ನಾನಾ ಪಟೇಕರ್ ಅಸಭ್ಯ ಅಂತ ಗೊತ್ತು ಅವರು ರೀತಿಯ ಕ್ರೇಜಿ ಕೆಲಸಗಳನ್ನು ಮಾಡುತ್ತಿರುತ್ತಾರೆ, ಆದರೆ ಅವರು ಈ ಮೀಟೂದಂತಹ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ತಮಗೆ ಸಂಶಯವಿದೆ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

"ನಾನಾ ಪಾಟೇಕರ್ ನನಗೆ ತಿಳಿದ ಹಾಗೆ ಅವರು ಅಸಭ್ಯರು ಒಮ್ಮೊಮ್ಮೆ ಅವರು ಕ್ರೇಜಿ ಕೆಲಸಗಳನ್ನು ಮಾಡುತ್ತಾರೆ ಆದರೆ ಅಂತಹ ಕೆಲಸವನ್ನು ಮಾಡಬಹುದೆಂದು ನಾನು ಭಾವಿಸುವುದಿಲ್ಲ. ನ್ಯಾಯಾಲಯವು ಇದನ್ನು ವಿಚಾರಣೆ ಮಾಡುತ್ತಿದೆ. ಆದರೆ ಇದರಲ್ಲಿ ಮಾಧ್ಯಮದಲ್ಲಿ ಮಾಡುವುದೇನಿದೆ ? ಮೀಟೂ ಗಂಭೀರ ವಿಷಯವಾಗಿದ್ದು ಆದ್ದರಿಂದ ಟ್ವಿಟ್ಟರ್ನಲ್ಲಿ ಇದರ ಬಗ್ಗೆ ಚರ್ಚೆ ಸರಿಯಾಗಿಲ್ಲ, "ಎಮ್ಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಿಳಿಸಿದರು. 


ಇನ್ನು ಮುಂದುವರೆದು ಪೆಟ್ರೋಲ್ ದರ, ರೂಪಾಯಿ ಮೌಲ್ಯ ಕುಸಿತ ಮತ್ತು ನಿರುದ್ಯೋಗ ಇಂತಹ ಸಮಸ್ಯೆಗಳಿಂದ ಬೇರೆಡೆ ಗಮನ ಸೆಳೆಯಲು ಮೀಟೂ ಚಳುವಳಿಗೆ ಇನ್ನಷ್ಟು ಉತ್ತೇಜನ ಕೊಟ್ಟಂತಾಗಿದೆ. ಒಂದು ವೇಳೆ ಯಾವುದೇ ಮಹಿಳೆ ಸಮಸ್ಯೆ ಎದುರಿಸಿದ್ದಲ್ಲಿ ಎಂಎನ್ಎಸ್  ನ್ನು ಸಂಪರ್ಕಿಸಬಹುದು ಆದರೆ 10 ವರ್ಷಗಳ ನಂತರವಲ್ಲ ಎಂದು ಅವರು ತಿಳಿಸಿದ್ದಾರೆ.