ನವದೆಹಲಿ: 9000 ಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಉದ್ಯಮಿ ವಿಜಯ್ ಮಲ್ಯ ಭಾರತದಿಂದ ಇಂಗ್ಲೆಂಡ್ ಗೆ ಹೊರಡುವ ಮೊದಲು ಹಣಕಾಸು ಸಚಿವ ಅರುಣ್ ಜೈಟ್ಲಿ ಜೊತೆ ತಮ್ಮ ಕೇಸಿಗೆ ಮುಕ್ತಿ ಹಾಡಲು ಹಲವು ಬಾರಿ ತಾವು ಆಫರ್ ಕುರಿತಾಗಿ ಮಾತುಕತೆ ನಡೆಸಿದ್ದಾಗಿ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಮಲ್ಯ ಅವರ ಹೇಳಿಕೆ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ.ಅಲ್ಲದೆ ಈಗ ಕಾಂಗ್ರೆಸ್ ಸಹಿತ ಇತರ ಪಕ್ಷಗಳು ಮಲ್ಯರ ಹೇಳಿಕೆ ಸರ್ಕಾರದಲ್ಲಿ ಉದ್ಯಮಪತಿಗಳು ಮತ್ತು ಸರ್ಕಾರದ ನಡುವಿರುವ ಭ್ರಷ್ಟಾಚಾರಕ್ಕೆ ನಿದರ್ಶನವೆಂದು ಕಿಡಿಕಾರಿವೆ. 



"ನನಗೆ ಜಿನಿವಾದಲ್ಲಿ ಪೂರ್ವ ನಿರ್ಧರಿತ ಸಭೆ ಇದ್ದಿದ್ದರಿಂದ ನಾನು ಭಾರತದಿಂದ ಹೊರಟೆ, ನಾನು ಹೊರಡುವ ಮೊದಲು ಬ್ಯಾಂಕ್ ವಿಚಾರವಾಗಿರುವ ನನ್ನ ಪ್ರಕರಣಗಳಿಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ಹಣಕಾಸು ಸಚಿವರನ್ನು ಭೇಟಿ ಮಾಡಿ ಪದೆ ಪದೆ ನಾನು ಆಫರ್ ಬಗ್ಗೆ ಹೇಳಿದೆ..ಎನ್ನುವುದು ಸತ್ಯ" ಎಂದು ಮಲ್ಯ ಲಂಡನ್ ನಲ್ಲಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಗಡೆ ಸುದ್ದಿಗಾರರಿಗೆ ತಿಳಿಸಿದರು.


ಇನ್ನು ಮುಂದುವರೆದು ಕರ್ನಾಟಕದ ಹೈಕೋರ್ಟ್ ನಲ್ಲಿ ಕೇಸ್ ಗಳಿಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ಸಮಗ್ರ ಆಫರ್ ನೀಡಲಾಗಿದೆ ಆ ಮೂಲಕ ಎಲ್ಲರು ಕೂಡ ಈ ಆಫ಼ರ್ ಪಡೆಯಬಹುದು ಎಂದು ಮಲ್ಯ ತಿಳಿಸಿದ್ದಾರೆ ಎನ್ನಲಾಗಿದೆ.