`ದೇಶದ ಒಕ್ಕೂಟ ವ್ಯವಸ್ಥೆ ಉಳಿಯಬೇಕಾದರೆ ಕೇಂದ್ರದಲ್ಲಿ I.N.D.I.A ಬಣ ಅಧಿಕಾರಕ್ಕೆ ಬರಬೇಕು`-ಸಿಎಂ ಸ್ಟಾಲಿನ್
ಬಿಜೆಪಿ ಸರ್ಕಾರವು ರಾಜ್ಯಗಳಲ್ಲಿ ಶಿಕ್ಷಣದ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಪ್ರತಿಯೊಂದು ರಾಜ್ಯವು ವಿಶಿಷ್ಟವಾದ ಸಂಸ್ಕೃತಿ, ಸಂಪ್ರದಾಯಗಳು, ಕಲ್ಪನೆಗಳನ್ನು ಹೊಂದಿದೆ. ಆದರೆ ಬಿಜೆಪಿ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದೆಲ್ಲವನ್ನೂ ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಚೆನ್ನೈ: ರಾಜ್ಯಗಳ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಬೇಕಾದರೆ ವಿರೋಧ ಪಕ್ಷದ I.N.D.I.A ಬಣವು ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ, ಹಾಗಾಗಿ ಜನರು ಇದಕ್ಕಾಗಿ ಸಿದ್ದರಾಗಬೇಕಾಗಿದೆ ಎಂದು ತಮಿಳುನಾಡಿನ ಸಿಎಂ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ಅವರ ಈ ಹೇಳಿಕೆ ತಮ್ಮ ಪಾಡ್‌ಕ್ಯಾಸ್ಟ್‌ನ ಸ್ಪೀಕಿಂಗ್ ಫಾರ್ ಇಂಡಿಯಾದ ಮೂರನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತವಾಗಿದೆ.
ಇದೆ ವೇಳೆ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ "ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ನಂತರ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ" ಎಂದು ಆರೋಪಿಸಿದರು.
"ಸಂವಿಧಾನದಲ್ಲಿ ಭಾರತ ಎಂದರೆ ಅದೊಂದು ರಾಜ್ಯಗಳ ಒಕ್ಕೂಟ ಎನ್ನುವುದನ್ನು ಅವರು ಇಷ್ಟಪಡುವುದಿಲ್ಲ, ಅವರು ರಾಜ್ಯಗಳನ್ನು ನಾಶ ಮಾಡಲು ಅಥವಾ ಅವುಗಳನ್ನು ಪುರಸಭೆಗಳ ಸ್ಥಾನಮಾನಕ್ಕೆ ಇಳಿಸಲು ಬಯಸುತ್ತಾರೆ ಎಂದು ಸ್ಟಾಲಿನ್ ಟೀಕಾಪ್ರಹಾರ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರವು ಏಕೀಕೃತ ನಾಯಕತ್ವ ಮತ್ತು ಏಕೀಕೃತ ಅಧಿಕಾರವನ್ನು ಹೊಂದಿರುವ ಪ್ರಧಾನಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವಾಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತಿದೆ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ ಎಂದು ಅವರು ಹೇಳಿದರು.
“ಬಿಜೆಪಿ ಸರ್ಕಾರವು ರಾಜ್ಯಗಳಲ್ಲಿ ಶಿಕ್ಷಣದ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಪ್ರತಿಯೊಂದು ರಾಜ್ಯವು ವಿಶಿಷ್ಟವಾದ ಸಂಸ್ಕೃತಿ, ಸಂಪ್ರದಾಯಗಳು, ಕಲ್ಪನೆಗಳನ್ನು ಹೊಂದಿದೆ ಆದರೆ ಬಿಜೆಪಿ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದೆಲ್ಲವನ್ನೂ ನಾಶಮಾಡಲು ಪ್ರಯತ್ನಿಸುತ್ತಿದೆ. ಈಗ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ಬಿಜೆಪಿಯ ಪ್ರಯತ್ನವನ್ನು ವಿವರಿಸಬೇಕೆಂದರೆ ಅದಕ್ಕೆ ನನ್ನ ಪಾಡ್‌ಕ್ಯಾಸ್ಟ್‌ನ 10 ಸಂಚಿಕೆಗಳು ಬೇಕಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯ ಸ್ವಾಯತ್ತತೆ ಮಾತ್ರ ಕೇಂದ್ರ ಸರ್ಕಾರದ ದಾಳಿಯಿಂದ ರಾಜ್ಯಗಳನ್ನು ರಕ್ಷಿಸುತ್ತದೆ ಎಂದು ಪುನರುಚ್ಚರಿಸಿದ ಸಿಎಂ ಸ್ಟಾಲಿನ್, ಈ ಹಿಂದೆ ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ನ್ಯಾಯಮೂರ್ತಿ ಪಿ.ವಿ ರಾಜಮನ್ನಾರ್ ನೇತೃತ್ವದ ಸಮಿತಿಯನ್ನು ರಚಿಸಿದ್ದರು.ಈ ಸಮಿತಿಯ ನಿರ್ಣಯವು ಜನರೊಂದಿಗೆ ನಿಕಟವಾಗಿ ಕೆಲಸ ಮಾಡುವ ರಾಜ್ಯ ಸರ್ಕಾರಗಳ ಸ್ವತಂತ್ರ ಕಾರ್ಯನಿರ್ವಹಣೆಯನ್ನು ಪ್ರತಿಪಾದಿಸುತ್ತದೆ. ಆದ್ದರಿಂದ ರಾಜಮನ್ನಾರ್ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಬೇಕು ಮತ್ತು ರಾಜ್ಯ ಸ್ವಾಯತ್ತತೆ ಮತ್ತು ಕೇಂದ್ರದಲ್ಲಿ ಫೆಡರಲ್ ಸರ್ಕಾರವನ್ನು ಖಚಿತಪಡಿಸಿಕೊಳ್ಳಲು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂದು ಸ್ಟಾಲಿನ್ ಕೇಂದ್ರವನ್ನು ಒತ್ತಾಯಿಸಿದರು.
"ಇವು ಪ್ರಮುಖ ವಿಷಯಗಳು ಮತ್ತು ನಾವು ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಲು ಉದ್ದೇಶಿಸಿದ್ದೇವೆ" ಎಂದು ಹೇಳಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಮಾತುಗಳನ್ನು ನೆನಪಿಸಿಕೊಂಡ ಸ್ಟಾಲಿನ್, ರಾಜ್ಯ ಸ್ವಾಯತ್ತತೆ ಮತ್ತು ಕೇಂದ್ರದಲ್ಲಿ ಫೆಡರಲ್ ಸರ್ಕಾರದ ಕಲ್ಪನೆಯು ಡಿಎಂಕೆಯ ಪ್ರಮುಖ ಘೋಷಣೆಯಾಗಿದೆ ಇದಕ್ಕೆ ಈ ಹಿಂದೆ ನ್ಯಾಶನಲ್ ಕಾನ್ಫರೆನ್ಸ್‌ನ ಶೇಕ್ ಅಬ್ದುಲ್ಲಾ ಮತ್ತು ಸಿಪಿಐ-ಎಂನ ಜ್ಯೋತಿ ಬಸು ರಂತಹ ನಾಯಕರು ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು ಎಂದು ಅವರು ಹೇಳಿದರು.
ಆದಾಗ್ಯೂ, ಬಿಜೆಪಿ ಸರ್ಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬಯಸಿದಂತೆ ಸರ್ವಾಧಿಕಾರಿ ಸರ್ಕಾರವನ್ನು ರಚಿಸಲು ಮುಂದಾಗಿದೆ ಮತ್ತು ಅದು ರಾಜ್ಯಗಳನ್ನು ಗೌರವಿಸಲು ಮತ್ತು ಸಂವಿಧಾನದ ಪ್ರಕಾರ ಸರ್ಕಾರ ನಡೆಸಲು ಸಿದ್ಧವಾಗಿಲ್ಲ ಎಂದು ಸ್ಟಾಲಿನ್ ಆರೋಪಿಸಿದರು. ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುವ ಸಂದರ್ಭದಲ್ಲಿಯೂ ಕೂಡ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರಲು ಸಮರ್ಥವಾಗಿವೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ಗೌರವ ನೀಡುವ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದರೆ ಎಲ್ಲಾ ರಾಜ್ಯಗಳು ಅಭಿವೃದ್ಧಿ ಹೊಂದುತ್ತವೆ ಎಂದು ಸ್ಟಾಲಿನ್ ತಿಳಿಸಿದರು.
ವಿರೋಧ ಪಕ್ಷದ I.N.D.I.A ಬಣವು ರಾಜ್ಯಗಳ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಬೇಕಾದರೆ ಈ ಬಣವು ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ, ಹಾಗಾಗಿ ಜನರು ಇದಕ್ಕಾಗಿ ಸಿದ್ದರಾಗಬೇಕಾಗಿದೆ. ಅವರು ಅವರು ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಮಿನಿ ಲೋಕಸಭೆ ಚುನಾವಣೆ ಎಂದು ಪರಿಗಣಿಸಬೇಕು ಮತ್ತು ಅದರಂತೆ ಮತ ಚಲಾಯಿಸಬೇಕು.ಭಾರತವನ್ನು I.N.D.I.A ಗೆ ಹಸ್ತಾಂತರಿಸಬೇಕು, ಆ ಮೂಲಕ ರಾಜ್ಯಗಳನ್ನು ರಕ್ಷಿಸುವುದರ ಜೊತೆಗೆ ಭಾರತವನ್ನು ನಾವು ರಕ್ಷಿಸೋಣ ಎಂದು ಸಿಎಂ ಸ್ಟಾಲಿನ್ ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.