ಕೋಲ್ಕೊತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿನ ಪ್ರಧಾನಿ ಆಗುವ ಎಲ್ಲಾ ಅವಕಾಶಗಳೂ ಇವೆ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಇದೀಗ ಅದನ್ನು ಹಾಸ್ಯವಾಗಿ ಹೇಳಿದ್ದಾಗಿ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

"ಮಮತಾ ಬ್ಯಾನರ್ಜಿ ಅವರ ಹುಟ್ಟುಹಬ್ಬಕ್ಕೆ ಏನು ಹಾರೈಸುತ್ತೀರಿ ಎಂದು ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮಮತಾ ಬ್ಯಾನರ್ಜಿಯವರು ಪ್ರಧಾನಿಯಾದರೆ ಎಂದು ಮಾತು ಆರಂಭಿಸಿ ಮುಂದಿನ ಹೇಳಿಕೆ ನೀಡಿದ್ದೆ ಅಷ್ಟೇ. ಆದರೆ, ಮಮತಾ ಪ್ರಧಾನಿಯಾಗುವ ಸಾಧ್ಯತೆಯೇ ಇಲ್ಲ. ಇದನ್ನೆಲ್ಲಾ ಹಾಸ್ಯವಾಗಿ ಪರಿಗಣಿಸಬೇಕು" ಎಂದು ದಿಲೀಪ್ ಘೋಷ್ ಸ್ಪಷ್ಟಪಡಿಸಿದ್ದಾರೆ.



ಮಮತಾ ಬ್ಯಾನರ್ಜಿ ಅವರ ಹುಟ್ಟುಹಬ್ಬದ ಬಗ್ಗೆ ಮಾತನಾಡುತ್ತಾ, "ಬಿಜೆಪಿಯ ಬಂಗಾಳ ಘಟಕದಿಂದ ಯಾರಾದರೂ ಪ್ರಧಾನಿಯಾಗುವ ಸಾಧ್ಯತೆ ಇದೆಯೇ ಎಂದು ಸುದ್ದಿಗಾರರರು ಪ್ರಶ್ನಿಸಿದಾಗ, ಬಂಗಾಳಿಗಳ ಪೈಕಿ ಪ್ರಧಾನಿ ಹುದ್ದೆ ರೇಸ್‌ಗೆ ಮಮತಾ ಬ್ಯಾನರ್ಜಿ ಅವರೇ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಅವರು ಪ್ರಧಾನಿಯಾದರೆ ಬಂಗಾಳದಿಂದ ಆಯ್ಕೆಯಾದ ಮೊದಲ ಪ್ರಧಾನಿ ಹೆಗ್ಗಳಿಕೆಗೆ ಮಮತಾ ಪಾತ್ರರಾಗುತ್ತಾರೆ. ಪಶ್ಚಿಮ ಬಂಗಾಳದಿಂದ ಮೊದಲ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಆಯ್ಕೆಯಾಗಿದ್ದರು. ಈಗ ಪ್ರಧಾನ ಮಂತ್ರಿ ಸರದಿ... ಹಾಗಾಗಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆ ಇದೆ" ಎಂದು ದಿಲೀಪ್ ಘೋಷ್ ಭಾನುವಾರ ಹೇಳಿದ್ದರು.