ನವದೆಹಲಿ: ಇಂದು ಸುಪ್ರಿಂಕೋರ್ಟ್ ಲವ್ ಜಿಹಾದ್ ಎನ್ನಲಾಗುತ್ತಿರುವ ಹಾಡಿಯಾ ಪ್ರಕರಣವನ್ನು  ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯವು ಇಂದು ನಡೆದ ವಿಚಾರಣೆಯ ಸಂಧರ್ಭದಲ್ಲಿ  ಹಾಡಿಯಾ ತನಗೆ ಸ್ವಾತಂತ್ರ ಬೇಕು ಎಂದು ಸರ್ವೋಚ್ಚ ನ್ಯಾಯಾಲಯವನ್ನು  ವಿನಂತಿಸಿಕೊಂಡಿದ್ದಾಳೆ.
 
ವಿಚಾರಣೆಯ ಸಂಧರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳಾದ  ದೀಪಕ್ ಮಿಶ್ರಾ ಹಾಡಿಯಾಗೆ ಸರ್ಕಾರದ ವೆಚ್ಚದಲ್ಲಿಯೇ ತಾನು ಅಧ್ಯಯನ ಮಾಡಲು ಇಚ್ಚಿಸುತ್ತಿಯಾ ಎಂದು ಕೇಳಿದಾಗ ನನ್ನ ಪತಿ ನನ್ನನ್ನು ಸಲಹುತ್ತಿರುವಾಗ ಅದರ ಅವಶ್ಯಕತೆ ಇಲ್ಲವೆಂದರಲ್ಲದೆ ನನಗೆ ಸ್ವತಂತ್ರ ಬೇಕಾಗಿದೆ ಎಂದು ಈ ಸಂಧರ್ಭದಲ್ಲಿ ಕೋರ್ಟ್ ನ್ನು ವಿನಂತಿಸಿಕೊಂಡರು.


COMMERCIAL BREAK
SCROLL TO CONTINUE READING

ಹಾಡಿಯಾಳ ಇಚ್ಚೆಯಂತೆ ವ್ಯಾಸಂಗ ಮುಂದುವರೆಸುವ ವಿಚಾರವಾಗಿ ನ್ಯಾಯಾಲಯವು ಅವಳನ್ನು ತಮಿಳುನಾಡಿನ ಸೇಲಂಗೆ ಉನ್ನತ ಶಿಕ್ಷಣಕ್ಕಾಗಿ ಕಲಿಸಲು ಆದೇಶ ನೀಡಿದೆ, ಅಲ್ಲದೆ ಕೇರಳ ಪೋಲಿಸ್ಗೆ ಹಾಡಿಯಾಗೆ ರಕ್ಷಣೆಯನ್ನು ಅವಳು ಸೇಲಂ ತಲುಪುವವರೆಗೂ ರಕ್ಷಣೆ ನೀಡಬೇಕೆಂದು ಆಜ್ಞೆ ನೀಡಿದೆ.
ಸೇಲಂನಲ್ಲಿನ  ಹೋಮಿಯೋಪತಿ ಕಾಲೇಜನ ಡೀನನ್ನು ಅಲ್ಲಿನ ಪೋಷಕರೆಂದು ನೇಮಕ ಮಾಡಿರುವ ನ್ಯಾಯಾಲಯವು, ಒಂದು ವೇಳೆ ಯಾವುದೇ ರೀತಿಯ ತೊಂದರೆ ಉಂಟಾದರೆ ಅವರನ್ನು ಸಂಪರ್ಕಿಸುವ ಅವಕಾಶವನ್ನು ಕೋರ್ಟ್ ನೀಡಿದೆ. ಇನ್ನು ಕಾಲೇಜ್ ಮತ್ತು ವಿಶ್ವವಿದ್ಯಾಲಯಕ್ಕೆ ಮತ್ತೆ ಹಾಡಿಯಾಗೆ ಮರು ಪ್ರವೇಶಾತಿ ಕಲ್ಪಿಸಬೇಕೆಂದು ಕೂಡಾ ಅದು ನಿರ್ದೇಶನದಲ್ಲಿ ತಿಳಿಸಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಹಾಡಿಯಾ ತಾನು ತನ್ನ ಪತಿ ಶಫಿ ಜಹಾನ್ ಜೊತೆ ಹೋಗಬೇಕೆಂದು ಅವಳು ಕೋರ್ಟ ನ್ನು ವಿನಂತಿಸಿಕೊಂಡಿದ್ದಾಳೆ.