ನವದೆಹಲಿ: ಏಪ್ರಿಲ್ 1 ರಂದು ಛತ್ತೀಸ್ ಗಡ್ ದ ಮುಖ್ಯಮಂತ್ರಿ ಭುಪೇಶ್ ಬಾಘೇಲ್ ತಮ್ಮ ವಿಭಿನ್ನವಾದ ಟ್ವೀಟ್ ನಿಂದ ಗಮನ ಸೆಳೆದಿದ್ದಾರೆ.ಈ ಟ್ವೀಟ್ ನಲ್ಲಿ ಅವರು ಪ್ರಧಾನಿ ಮೋದಿಗೆ  ಕನ್ನಡಿಯೊಂದನ್ನು ಗಿಫ್ಟ್ ಗಾಗಿ ಬುಕ್ ಮಾಡಿದ್ದಾರೆ"



COMMERCIAL BREAK
SCROLL TO CONTINUE READING

" ನಾನು ನಿಮಗೆ ಈ ಕನ್ನಡಿಯನ್ನು ನಿಮಗೆ ಗಿಫ್ಟ್ ಗಾಗಿ ಕಳುಹಿಸುತ್ತಿದ್ದೇನೆ.ಆದ್ದರಿಂದ ಲೋಕ ಕಲ್ಯಾಣ ಮಾರ್ಗ್ ದಲ್ಲಿರುವ ನಿಮ್ಮ ಮನೆಯಲ್ಲಿ ನೀವು ಹಾದುಹೋಗುವ ಜಾಗದಲ್ಲಿರಿಸಿ. ಆಗ ನೀವು ಯಾವಾಗಲು ನಿಮ್ಮ ಮುಖವನ್ನು ಇದರಲ್ಲಿ ನೋಡಿಕೊಳ್ಳುವ ಮೂಲಕ ನಿಮ್ಮ ನಿಜವಾದ ಮುಖವನ್ನು ಗುರುತಿಸಿಕೊಳ್ಳಬಹುದು" ಎಂದು ಬಾಘೇಲ್ ಟ್ವೀಟ್ ಮಾಡಿದ್ದಾರೆ.



ಇನ್ನು ಮುಂದುವರೆದು ನೀವು ಕನ್ನಡಿಯನ್ನೇ ಬಳಸಿಲ್ಲವೆಂದು ಕಾಣುತ್ತದೆ,ಬಹುಶ ಅದನ್ನು ಕಸದಬುಟ್ಟಿಗೆ ಎಸೆದಿರಬೇಕು.ಆದರೂ ನೀವು ಕನ್ನಡಿಯನ್ನು ಕಡೆಗಣಿಸಲು ಸಾಧ್ಯವಿಲ್ಲ.ಈ ದೇಶದ 125 ಕೋಟಿ ಜನರು ನಿಮಗೆ ಕನ್ನಡಿಯನ್ನು ತೋರಿಸುತ್ತಾರೆ. ಆದ್ದರಿಂದ ಅದಕ್ಕೆ ನೀವು ಸಿದ್ದರಾಗಿದ್ದಿರಾ ಮೋದಿಜಿ? ಎಂದು ಟ್ವೀಟ್ ಮಾಡಿದ್ದಾರೆ.