ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಗೆ ನಾನಾಗಲೀ, ನನ್ನ ಪಕ್ಷದಿಂದ ಇತರರಾಗಲೀ ಸ್ಪರ್ಧಿಸುವುದಿಲ್ಲ ಎಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಲೋಕಸಭಾ ಚುನಾವಣಾಯಲ್ಲಿನ ಸ್ಪರ್ಧೆ ಬಗ್ಗೆ ಅಧಿಕೃತ ಹೇಳಿಕೆ ಹೊರಡಿಸಿರುವ ರಜನೀಕಾಂತ್ ಈ ಮೂಲಕ ರಾಜಕೀಯ ವಲಯದಲ್ಲಿ ಇದ್ದ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅಲ್ಲದೆ, ತಮ್ಮ ಟಾರ್ಗೆಟ್ ಏನಿದ್ದರೂ ತಮಿಳುನಾಡು ವಿಧಾನಸಭಾ ಚುನಾವಣೆಯೇ ಹೊರತು ಲೋಕಸಭಾ ಚುನಾವಣೆಯಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ.


ಅಷ್ಟೇ ಅಲ್ಲದೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಇತರ ಯಾವುದೇ ಪಕ್ಷಗಳಿಗೂ ಬೆಂಬಲ ನೀಡುವುದಿಲ್ಲ. ಹಾಗೆಯೇ ಪಕ್ಷದ ಕಾರ್ಯಕರ್ತರೂ ಸಹ ತಮ್ಮ ಭಾವಚಿತ್ರ, ಪಕ್ಷದ ಚಿಹ್ನೆ ಹಾಗೂ ಪೋಸ್ಟರ್ಗಳನ್ನು ಇತರ ಪಕ್ಷಗಳ ಪ್ರಚಾರ ಸಂದರ್ಭಗಳಲ್ಲಿ ಬಳಸಬಾರದು ಎಂದೂ ರಜನಿಕಾಂತ್ ಮನವಿ ಮಾಡಿದ್ದಾರೆ.


ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ತಮಿಳುನಾಡಿನಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಮತ್ತು ಅದಕ್ಕಾಗಿ ಶಾಶ್ವತ ಯೋಜನೆಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನ ನೀರಿನ ಸಮಸ್ಯೆಯನ್ನು ಯಾವ ಪಕ್ಷ ಬಗೆಹರಿಸುವ ಸಾಮರ್ಥ್ಯ ಹೊಂದಿದೆ ಎಂದು ಭಾವಿಸುತ್ತೀರೋ ಅಂತಹ ಪಕ್ಷಕ್ಕೆ ಜನತೆ ಮತ ಹಾಕುವಂತೆಯೂ ರಜನಿಕಾಂತ್ ಮನವಿ ಮಾಡಿದ್ದಾರೆ.