ನವದೆಹಲಿ: ಭೂ ಖರೀದಿ ಅಕ್ರಮ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದ ತನಿಖೆಯನ್ನು ಎದುರಿಸುತ್ತಿರುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ, ಉದ್ಯಮಿ ರಾಬರ್ಟ್‌ ವಾದ್ರಾ ಅವರು ತಾವು ನ್ಯಾಯೋಚಿತ ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ರಾಜಕೀಯ ಬ್ಲ್ಯಾಕ್ ಮೇಲ್ ಗಳಿಗಾಗಿ ನನ್ನ ಹೆಸರು ಬಳಕೆಯಾಗುವುದು ನನಗೆ ಇಷ್ಟವಿಲ್ಲ, ನನ್ನ ವಿರುದ್ಧದ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿದ್ದಾಗಿವೆ. ಈಗಾಗಲೇ ಎಲ್ಲಾ ನೋಟಿಸ್‌ಗಳಿಗೂ ನಾವು ಉತ್ತರಿಸಿದ್ದೇವೆ. ಹಾಗಾಗಿ ನಡೆಯುವ ತನಿಖಾ ಪ್ರಕ್ರಿಯೆ ಕಾನೂನು ಪ್ರಕಾರ ನ್ಯಾಯ ಸಮ್ಮತವಾಗಿರಬೇಕು ಎಂದು ರಾಬರ್ಟ್ ವಾದ್ರಾ ತಿಳಿಸಿದ್ದಾರೆ.


ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನ್ನ ಕುಟುಂಬ ಒತ್ತಡದಲ್ಲಿದೆ. ಈಗಾಗಲೇ ಮನೆ ಮೇಲೆ ಸಾಕಷ್ಟು ದಾಳಿಗಳು ನಡೆದಿವೆ. ಹಾಗಾಗಿ ನ್ಯಾಯಸಮ್ಮತವಾಗಿ ತನಿಖೆ ಎದುರಿಸುತ್ತೇನೆ. ದೇಶಬಿಟ್ಟು ಓಡಿಹೋಗುವುದಿಲ್ಲ ಎಂದು ಹೇಳಿದ್ದಾರೆ.