ನನಗೆ ಮೋದಿ ವಿರುದ್ಧ ಸ್ಪರ್ಧಿಸಲು ಇಷ್ಟ - ಶತ್ರುಘ್ನ ಸಿನ್ಹಾ
ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಸಂಸದ ಶತ್ರುಘ್ನ ಸಿನ್ಹಾ ಮೋದಿ ವಿರುದ್ದ ಸ್ಪರ್ಧಿಸಲು ಇಷ್ಟವೆಂದು ಹೇಳಿದ್ದಾರೆ.
ನವದೆಹಲಿ: ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಸಂಸದ ಶತ್ರುಘ್ನ ಸಿನ್ಹಾ ಮೋದಿ ವಿರುದ್ದ ಸ್ಪರ್ಧಿಸಲು ಇಷ್ಟವೆಂದು ಹೇಳಿದ್ದಾರೆ.
"ಪ್ರಧಾನಿ ಮೋದಿ ವಾರಣಾಸಿ ಜೊತೆಗೆ ಪಾಟ್ನಾ ಸಾಹೇಬ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಇದೆ...ಏನಾಯಿತು ಈಗ ಅದು ? ನನಗೆ ಆ ಕ್ಷೇತ್ರದಲ್ಲಿ ಎದುರಿಸಲು ಇಷ್ಟ ಎಂದು ಶತ್ರುಘ್ನ ಸಿನ್ಹಾ ಪಿಟಿಐಗೆ ಹೇಳಿದ್ದಾರೆ. ಅವರು ಈ ಹಿಂದೆ 2014 ರಲ್ಲಿ ಬಿಜೆಪಿ ಪಕ್ಷದ ಟಿಕೆಟ್ ದಿಂದ ಪಾಟ್ನಾ ಸಾಹೇಬ್ ನಲ್ಲಿ ಸಂಸದರಾಗಿ ಚುನಾಯಿತರಾಗಿದ್ದರು.ಆದರೆ ಮುಂದೆ ದಿನಗಳು ಕಳೆದಂತೆ ಪಕ್ಷದಲ್ಲಿದ್ದುಕೊಂಡೆ ಅವರು ಪ್ರಧಾನಿ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದರು.
ಅಚ್ಚರಿ ಎಂದರೆ ಅವರು ಪಕ್ಷದ ವಿರುದ್ಧ ಮಾತನಾಡಿದಾಗಲು ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಅಲ್ಲದೆ, ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜೀ ಅವರು ಆಯೋಜಿಸಿದ್ದ ಪ್ರತಿಪಕ್ಷಗಳ ರ್ಯಾಲಿ ಭಾಗವಹಿಸಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಆದರೆ ಈಗ ಬಿಜೆಪಿ ಪಾಟ್ನಾ ಸಾಹೇಬ್ ಕ್ಷೇತ್ರದಿಂದ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ರನ್ನು ಕಣಕ್ಕೆ ಇಳಿಸಿದೆ.ಅವರು ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ.