IAF Plane Crash : ತೆಲಂಗಾಣದಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದೆ. ದುರ್ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಬೆಳಗ್ಗೆ 8.55ಕ್ಕೆ ಈ ಅವಘಡ ಸಂಭವಿಸಿದೆ. ಅಪಘಾತದ ಬಗ್ಗೆ ಭಾರತೀಯ ವಾಯುಪಡೆ ಮಾಹಿತಿ ನೀಡಿದೆ. ಇಂದು ಬೆಳಗ್ಗೆ ಪಿಸಿ 7 ಎಂಕೆ II ವಿಮಾನವು ವಾಡಿಕೆಯ ತರಬೇತಿ ವೇಳೆ ಅಪಘಾತಕ್ಕೀಡಾಗಿದೆ ಎಂದು ವಾಯುಪಡೆ ತಿಳಿಸಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್ ಗಳು ಗಂಭೀರವಾಗಿ ಗಾಯಗೊಂಡಿದ್ದು, ನಂತರ ಮೃತಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ವಿಮಾನದಲ್ಲಿ 2 ಪೈಲಟ್‌ಗಳಿದ್ದರು :
ಬೆಳಗ್ಗೆ 8.55ರ ಸುಮಾರಿಗೆ ವಿಮಾನ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ದಿಂಡುಗಲ್‌ನ ಏರ್ ಫೋರ್ಸ್ ಅಕಾಡೆಮಿ ತರಬೇತಿ ವೇಳೆ ಈ ಅವಘಡ ಸಂಭವಿಸಿದೆ. ಸತ್ತವರಲ್ಲಿ ಒಬ್ಬ ಇನ್ಸ್ಟ್ರಕ್ಟರ್  ಮತ್ತು ಕೆಡೆಟ್ ಸೇರಿದ್ದಾರೆ. ಪೊಲೀಸರ ಪ್ರಕಾರ, ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ವಿಮಾನದಲ್ಲಿ ಇಬ್ಬರು ಭಾರತೀಯ ವಾಯುಪಡೆ ಅಧಿಕಾರಿಗಳು ಇದ್ದರು. ಈ ಅಪಘಾತ ಸಂಭವಿಸಿದಾಗ ವಿಮಾನ ತೂಪ್ರಾನ್ ಪ್ರದೇಶದಲ್ಲಿತ್ತು. ಏರ್ ಫೋರ್ಸ್ ಅಕಾಡೆಮಿ ದುಂಡಿಗಲ್‌ನಿಂದ ವಿಮಾನ ಟೇಕಾಫ್ ಆಗಿತ್ತು.


ಇದನ್ನೂ ಓದಿ : ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್’ಗಢದಲ್ಲಿ ಕಾಂಗ್ರೆಸ್ ಹೀನಾಯ ಸೋಲು: ಈ ಜನಾದೇಶದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?


ಘಟನೆಗೆ ರಕ್ಷಣಾ ಸಚಿವರ ಸಂತಾಪ  : 
ಅಪಘಾತದ ಬಗ್ಗೆ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ಬೇಸರ ತಂದಿದೆ ಎಂದಿದ್ದಾರೆ. 


ಜೂನ್‌ನಲ್ಲಿಯೂ ಸಂಭವಿಸಿತ್ತು ಅಪಘಾತ  : 
ಇತ್ತೀಚೆಗೆ ವಾಯುಪಡೆಯ ವಿಮಾನಗಳ ಅಪಘಾತಗಳು ಹೆಚ್ಚಾಗುತ್ತಿವೆ. ಜೂನ್‌ನಲ್ಲಿ ಭಾರತೀಯ ವಾಯುಪಡೆಯ ಕಿರಣ್ ತರಬೇತಿ ವಿಮಾನವು ಕರ್ನಾಟಕದ ಚಾಮರಾಜನಗರದಲ್ಲಿ ಪತನಗೊಂಡಿತ್ತು. ಬಯಲುಸೀಮೆಯಲ್ಲಿ ಈ ಅವಘಡ ಸಂಭವಿಸಿದ್ದರಿಂದ  ಅನಾಹುತ ಸಂಭವಿಸಿರಲಿಲ್ಲ. ಪೈಲಟ್‌ಗೂ ಸಣ್ಣಪುಟ್ಟ ಗಾಯಗಳಾಗಿತ್ತು. 


ಇದನ್ನೂ ಓದಿ : Daily GK Quiz: ಭಾರತದಲ್ಲಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ?


ಈ ವರ್ಷದ ಮೇ ತಿಂಗಳಲ್ಲಿ, ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನವು ರಾಜಸ್ಥಾನದ ಹನುಮಾನ್‌ಗಢ್ ಬಳಿ ಪತನಗೊಂಡಿತ್ತು.  ಮಾರ್ಚ್‌ನಲ್ಲಿ ಇಬ್ಬರು ಟ್ರೈನಿ ಪೈಲಟ್‌ಗಳಿದ್ದ ವಿಮಾನ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.