ಭಾರತೀಯ ಏರ್ ಫೋರ್ಸ್ ತರಬೇತುದಾರ ವಿಮಾನ ಕಿರಣ್ ಶುಕ್ರವಾರ ತೆಲಂಗಾಣದಲ್ಲಿ ಸಿದ್ದಿಪೇಟೆಯಲ್ಲಿ ಅಪ್ಪಳಿಸಿದೆ. 


COMMERCIAL BREAK
SCROLL TO CONTINUE READING

ತೆಲಂಗಾಣದ ಹಕ್ಕಿಂಪೇಟ್ ಏರ್ ಪೋರ್ಸ್ ನಿಲ್ದಾಣದಿಂದ ಹೊರಟಿದ್ದ ಕಿರಣ್ ವಿಮಾನವು ಹಕೀಂಪೇಟ್ ನಿಂದ 50 ಕಿ.ಮೀ. ದೂರದಲ್ಲಿ ಮಧ್ಯಾಹ್ನ 2 ಗಂಟೆಗೆ ಪತನಗೊಂಡಿದೆ. 


ಯುದ್ಧದ ತರಬೇತಿಗೆ ಪಡೆಯುತ್ತಿದ್ದ ಮಹಿಳಾ ಕೆಡೆಟ್ ಆ ವಿಮಾನದಲ್ಲಿದ್ದರು. ಆದರೆ ಅವರ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. ಅಪಘಾತಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.


ಈ ಹಿಂದೆ, ಸೆಪ್ಟೆಂಬರ್ 28 ರಂದು ಐಎಎಫ್ ವಿಮಾನ ಕಿರಣ್ ತನ್ನ ದೈನಂದಿನ ತರಬೇತಿ ಕಾರ್ಯಾಚರಣೆಯಲ್ಲಿರುವಾಗ ಪತನಗೊಂಡಿತ್ತು. ಆ ವಿಮಾನವು ತನ್ನ ದೈನಂದಿನ ತರಬೇತಿಗಾಗಿ ಹೈದರಾಬಾದ್ನ ಹಕೀಂಪೇಟ್ ಏರ್ ಫೋರ್ಸ್ ಸ್ಟೇಷನ್ನಿಂದ ಹೊರರಿಟಿತ್ತಾದರು  ಅಂಕೆರೆಡ್ಡಿಪಲ್ಲಿ ಬಳಿ ಅಪ್ಪಳಿಸಿತ್ತು. ಆದರೆ, ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದರು. 


ಈ ವರ್ಷ ಏಪ್ರಿಲ್ನಲ್ಲಿ ಮಹಾರಾಷ್ಟ್ರದ ಗೊಂಡಿಯಾದಲ್ಲಿ ತರಬೇತಿ ವಿಮಾನವೊಂದು  ನದಿಗೆ ಅಪ್ಪಳಿಸಿದ ಕಾರಣ ಇಬ್ಬರು ಮೃತಪಟ್ಟಿದ್ದರು.