ನವದೆಹಲಿ: ಮಹಾತ್ಮಾ ಗಾಂಧಿ ಹಂತಕ ಗೋಡ್ಸೆಯನ್ನು ಪ್ರಶಂಸಿಸಿದ ಐಎಎಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗೆ ಆಗ್ರಹಿಸಿದ್ದಾರೆ.



COMMERCIAL BREAK
SCROLL TO CONTINUE READING

ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಂದೀಪ್ ಸಿಂಗ್ ಸುರ್ಜೆವಾಲಾ, "ಮೊದಲು ಬಿಜೆಪಿ ಪ್ರಜ್ಞಾ ಸಿಂಗ್ ಠಾಕೂರ್, ನಂತರ ಶಾಸಕಿ ಉಷಾ ಠಾಕೂರ್ ಮತ್ತು ಈಗ ಮಹಾರಾಷ್ಟ್ರ ಐಎಎಸ್ ಅಧಿಕಾರಿ ನಿಧಿ ಚೌಧರಿ ಅವರು ಗಾಂಧಿ ಹಂತಕ ಗೋಡ್ಸೆಯನ್ನು ಪ್ರಶಂಸಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಕ್ಷಣ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.


ಮುಂಬೈ ಮಹಿಳಾ ಐಎಎಸ್ ಅಧಿಕಾರಿ ವಿಶ್ವದಾದ್ಯಂತದ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಹಾಗೂ ಭಾರತೀಯ ನೋಟಿನಲ್ಲಿರುವ ಫೋಟೋಗಳನ್ನು ತೆಗೆದುಹಾಕಬೇಕು ಎಂದು ಟ್ವೀಟ್ ಮಾಡಿದ್ದಾರೆ. ಈ ವಿವಾದದ ನಂತರ ಬಿಎಂಸಿ ಉಪ ಮುನಿಸಿಪಲ್ ಕಮಿಷನರ್ ಆಗಿ ನಿಧಿ ಚೌಧರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು ತಮ್ಮ ಟ್ವೀಟ್ ನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದರು.


 "150 ನೇ ಜನ್ಮದಿನಾಚರಣೆ ನಡೆಯುತ್ತಿದೆ, ಈಗ ನೋಟಿನಿಂದ ಅವರ ಮುಖವನ್ನು ತೆಗೆದು ಹಾಕಬೇಕು ಅದೇ ರೀತಿಯಾಗಿ ಅವರ ಹೆಸರಿನಲ್ಲಿರುವ ರಸ್ತೆಗಳು, ಸಂಸ್ಥೆಗಳನ್ನು  ಮರುನಾಮಕರಣ ಮಾಡಬೇಕು ಆಗ ನಮ್ಮೆಲ್ಲರಿಗೂ ನಿಜವಾದ ಗೌರವವಾಗಲಿದೆ .30.01.1948ಕ್ಕೆ ಧನ್ಯವಾದಗಳು ಗೊಡ್ಸೆ" ಎಂದು ಐಎಎಸ್ ಅಧಿಕಾರಿ ನಿಧಿ ಚೌಧರಿ ಟ್ವೀಟ್ ಮಾಡಿದ್ದರು.ಈ ವಿವಾದತ್ಮಾಕ ಟ್ವೀಟ್ ನ್ನು ಅವರು ಈಗ ಅಳಿಸಿ ಹಾಕಿದ್ದಾರೆ.