IAS Success Story: UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕ ಜನರ ಕನಸಾಗಿದೆ. ಆದರೆ ಕೆಲವೇ ಜನರು ಈ ಕನಸನ್ನು ನನಸಾಗಿಸಿಕೊಳ್ಳಲು ಸಮರ್ಥರಾಗಿದ್ದಾರೆ. UPSC ಪರೀಕ್ಷೆಯು ನಮ್ಮ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾಗಲು, ಅಭ್ಯರ್ಥಿಗಳು ಹಗಲಿರುಳು ಶ್ರಮಿಸಬೇಕು. ಅಂತಹ ಕಠಿಣ ಪರಿಶ್ರಮ ಮತ್ತು ಸ್ಫೂರ್ತಿದಾಯಕ ಕಥೆಯೆಂದರೆ ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಅವರು ವೈದ್ಯಕೀಯ ವೃತ್ತಿಯನ್ನು ತೊರೆದು ನಾಗರಿಕ ಸೇವೆಗಳಿಗೆ ಸೇರಲು ನಿರ್ಧರಿಸಿದ್ದು. 2009 ರಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು IAS ಅಧಿಕಾರಿಯಾದರು. ಆದಾಗ್ಯೂ, ಅವರು ಐಎಎಸ್ ಆದ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಯಾರೋ ಮಾಡಿದ ಅಪಹಾಸ್ಯದಿಂದಾಗಿ ಐಎಎಸ್ ಆಗಲು ನಿರ್ಧರಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಫೋನ್ ಬಳಕೆದಾರರಿಗೆ ಶಾಕ್ ನೀಡಿದ ಫೇಸ್‌ಬುಕ್‌! ಈ ವೈಶಿಷ್ಟ್ಯ ಇದ್ದಕ್ಕಿದ್ದಂತೆ ಕಣ್ಮರೆ


ಪ್ರಿಯಾಂಕಾ ಶುಕ್ಲಾ ಅವರು ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಓದಿದ್ದಾರೆ. ಆದರೆ ಪ್ರಿಯಾಂಕಾ ಅವರ ಇಡೀ ಕುಟುಂಬವು ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಅವರ ತಂದೆ ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕಲೆಕ್ಟರ್ ಆಗಿ ತಮ್ಮ ಮನೆಯ ಮುಂದೆ ಪ್ರಿಯಾಂಕಾ ಅವರ ಹೆಸರಿನ ನಾಮಫಲಕವನ್ನು ಮುದ್ರಿಸುವುದು ತನ್ನ ತಂದೆಯ ಕನಸಾಗಿತ್ತು ಎಂದು ಪ್ರಿಯಾಂಕಾ ಹೇಳಿದ್ದಾರೆ.


ಪ್ರಿಯಾಂಕಾ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ದಾಖಲಾದರು. ಎಂಬಿಬಿಎಸ್ ಪದವಿ ಪಡೆದ ನಂತರ ಲಖನೌದಲ್ಲಿಯೇ ಅಭ್ಯಾಸ ಆರಂಭಿಸಿದರು. ಪ್ರಿಯಾಂಕಾ ಡಾಕ್ಟರ್ ಆದ ಬಳಿಕ ತುಂಬಾ ಸಂತೋಷಪಟ್ಟರು. 


ಒಮ್ಮೆ ಪ್ರಿಯಾಂಕಾ ತಪಾಸಣೆ ಮಾಡಲು ಕೊಳಚೆ ಪ್ರದೇಶಕ್ಕೆ ಹೋಗಿದ್ದರು. ತನಿಖೆಯ ವೇಳೆ ಮಹಿಳೆಯೊಬ್ಬರು ಕೊಳಕು ನೀರು ಕುಡಿಯುತ್ತಿದ್ದು, ಮಗುವಿಗೆ ಆಹಾರ ನೀಡುತ್ತಿರುವುದನ್ನು ಪ್ರಿಯಾಂಕಾ ನೋಡಿದ್ದಾರೆ. ಪ್ರಿಯಾಂಕಾ ಮಹಿಳೆಗೆ ಕೊಳಕು ನೀರು ಕುಡಿಯದಂತೆ ನಿರಾಕರಿಸಿದ್ದಾರೆ. ಅದಕ್ಕೆ ಮಹಿಳೆ ಹಿಂತಿರುಗಿ ಉತ್ತರಿಸಿದ್ದಾಳೆ. ನೀವೇನು ಕಲೆಕ್ಟರಾ? ಅಂತಾ. ಇದನ್ನು ಕೇಳಿದ ಪ್ರಿಯಾಂಕಾ ದಿಗ್ಭ್ರಮೆಗೊಂಡಿದ್ದಾರೆ. ನಂತರ ಅವರು ಕಲೆಕ್ಟರ್ ಆಗಲು ನಿರ್ಧರಿಸಿದರಂತೆ.


ಇದನ್ನೂ ಓದಿ: ರಾ ರಾ ರಕ್ಕಮ್ಮ ಸಾಂಗ್‌ಗೆ ಭರ್ಜರಿ ಸ್ಟೆಪ್ ಹಾಕಿದ ನಟಿ ಆಶಿಕಾ ರಂಗನಾಥ್


ಪ್ರಿಯಾಂಕಾ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಆದಾಗ್ಯೂ, ತಮ್ಮ ಪ್ರಯತ್ನ ಮಾತ್ರ ಬಿಡಲಿಲ್ಲ. ಅಂತಿಮವಾಗಿ 2009 ರಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಐಎಎಸ್ ಅಧಿಕಾರಿಯಾದ ನಂತರ, ಜನರ ಜೀವನವನ್ನು ಬದಲಾಯಿಸುವ ಗುರಿಯನ್ನು ಪ್ರಿಯಾಂಕಾ ಹೊಂದಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.