IAS ಟಾಪರ್ ಲೇಡಿ, ಟಾಪರ್ ಹುಡುಗನೊಂದಿಗೆ ಮದುವೆಯಾದಾಗ!
ನವದೆಹಲಿ: ಹೌದು,ಇಂತಹ ಸಂಗತಿ ಈಗ ನಡೆದಿದೆ, ಪ್ರೀತಿ ಎಲ್ಲಿ ಹುಟ್ಟಿ ಕೊಳ್ಳುತ್ತೆ ಹೇಗೆ ಹುಟ್ಟಿಕೊಳ್ಳುತ್ತೆ ಅನ್ನುವ ಅಂದಾಜುಕೂಡ ಸಿಗದೇ ಅದು ಕೊನೆಗೆ ಸಂಭವಿಸಿಬಿಡುತ್ತೆ. ಈಗ ಅಂತಹದೇ ಘಟನೆಯೊಂದು ಸಂಭವಿಸಿದೆ.
ನಿಮಗೆಲ್ಲರಿಗೂ ನೆನಪಿರಬಹುದು, ಅದು 2015 ಯುಪಿಎಸ್ಸಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾದಾಗ ಅದರಲ್ಲಿ ಟೀನಾ ಡಾಬಿ ಪ್ರಥಮ ರ್ಯಾಂಕ್ ಪಡೆದಿದ್ದರೆ, ಇನ್ನೋಬರು ಕಾಶ್ಮೀರದ ಅಥರ್ ಅಮೀರ್ ಖಾನ್ ದ್ವಿತೀಯ ರ್ಯಾಂಕ್ ಪಡೆದಿದ್ದರು. ಈಗ ಇಬ್ಬರು ಕಾಶ್ಮೀರದ ಪಹಲಘಾಂ ಕ್ಲಬ್ ನಲ್ಲಿ ಮದುವೆಯಾಗಿದ್ದಾರೆ.
ಟಿನಾ ದಾಬಿ ದೇಶದ ಪ್ರತಿಷ್ಟಿತ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸುವ ಮೂಲಕ ಮೊದಲಬಾರಿಗೆ ದಲಿತ ವರ್ಗಕ್ಕೆ ಸೇರಿದ ಮಹಿಳೆಯೊಬ್ಬಳು ಈ ಸಾಧನೆ ಮಾಡಿದ ಖ್ಯಾತಿ ಪಡೆದಿದ್ದರು. ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಗಳಿಸಿದ್ದ ಟೀನಾ ಈಗ ರಾಜಸ್ಥಾನ ಕೇಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೊಂದೆಡೆಗೆ ಕಾಶ್ಮೀರದ ಅಥರ್ ಅಮಿರ್ಖಾನ್ ಇಂಜನಿಯರ್ ಪದವಿ ಯನ್ನು ಪಡೆದು ಸಿವಿಲ್ಸ್ ಪರೀಕ್ಷೆಯಲ್ಲಿ 2 ನೇ ಸ್ಥಾನವನ್ನು ಪಡೆದಿದ್ದರು.