ನವದೆಹಲಿ: ಬ್ಯಾಂಕ್ ನಲ್ಲಿ ಕೆಲಸ ಮಾಡುವ ನೌಕರರಿಗೆ ಇನ್ಮುಂದೆ ಹೆಚ್ಚುವರಿ ವೇತನದ ಲಾಭ ಸಿಗಲಿದೆ. ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ​​(ಐಬಿಎ) 2017 ಮತ್ತು 2022 ರ ನಡುವಿನ ಐದು ವರ್ಷಗಳ ಅವಧಿಗೆ ಶೇ.15 ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿದೆ. ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಈ ವೇತನ ಹೆಚ್ಚಳದಿಂದ ಬ್ಯಾಂಕಿಂಗ್ ಉದ್ಯಮಕ್ಕೆ ವಾರ್ಷಿಕವಾಗಿ 7,900 ಕೋಟಿ ರೂ. ಹೊರೆ ಬೀಳಲಿದೆ. UFBUಸಂಯೋಜಕ ಸಿ. ಎಚ್ ವೆಂಕಟಾಚಲಂ ಮತ್ತು ರಾಜ್ ಕಿರಣ್ ರಾಯ್ ಅವರ ನೇತೃತ್ವ ದಲ್ಲಿ ಐಬಿಎ ಪ್ರತಿನಿಧಿಗಳು ಮತ್ತು ಬ್ಯಾಂಕ್ ನೌಕರರ ಸಂಘದ ಪ್ರತಿನಿಧಿಗಳ ನಡುವೆ ಈ ಸಭೆ ನಡೆದಿದೆ. ಈ ವೇತನ ಪರಿಷ್ಕರಣೆಯ ಲಾಭ ದೇಶಾದ್ಯಂತ ಇರುವ ಸುಮಾರು  35 ಬ್ಯಾಂಕುಗಳ ಸುಮಾರು 8 ಲಕ್ಷ ನೌಕರರಿಗೆ ಇದರ ಲಾಭ ಸಿಗಲಿದೆ ಎಂದು ವೆಂಕಟಾಚಲಂ ಹೇಳಿದ್ದಾರೆ. 


ಐಬಿಎ ಮತ್ತು ಟ್ರೇಡ್ ಯೂನಿಯನ್ ನಡುವೆ ಪ್ರತಿ ಐದು ವರ್ಷಗಳಿಗೊಮ್ಮೆ ಸದಸ್ಯ ಬ್ಯಾಂಕುಗಳಲ್ಲಿನ 8 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಯ   ಮಾತುಕತೆ ನಡೆಸಲಾಗುತ್ತದೆ. ಇಬ್ಬರ ನಡುವೆ ಬಹಳ ವಿಳಂಬವಾದ ನಂತರ, ಮೂಲತಃ 2017 ರ ನವೆಂಬರ್‌ನಲ್ಲಿ ನಡೆಯಲಿರುವ ತಿದ್ದುಪಡಿಯ ಬಗ್ಗೆ ಒಮ್ಮತ ಮೂಡಿದೆ. 2012 ರಲ್ಲಿ ಐಬಿಎ ಸಿಬ್ಬಂದಿ ವೇತನವನ್ನು ಶೇಕಡಾ 15 ರಷ್ಟು ಹೆಚ್ಚಿಸಿತ್ತು. ಈ ಬಾರಿ (2017-2022), ಒಕ್ಕೂಟಗಳು ಮೂಲತಃ ಶೇ 20 ರಷ್ಟು ಹೆಚ್ಚಳಕ್ಕೆ ಒತ್ತಾಯಿಸಿದ್ದವು. ಆದರೆ, ಐಬಿಎ ಆರಂಭದಲ್ಲಿ ಶೇ 12.25 ರಷ್ಟಕ್ಕೆ ಮಾತ್ರ ಒಪ್ಪಿಗೆ ಸೂಚಿಸಿತ್ತು.


ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಉದ್ಯೋಗಿಗಳ ನಡುವಿನ ಸಂಬಳದ ಅಸಮಾನತೆಯು ದೀರ್ಘಕಾಲದ ಸಮಸ್ಯೆಯಾಗಿದ್ದು, ಉನ್ನತ ಕೇಂದ್ರೀಯ ಬ್ಯಾಂಕ ನೌಕರರಲ್ಲಿ ಭಾರಿ ಚರ್ಚೆಯೇ ಹುಟ್ಟುಹಾಕಿತ್ತು. ಆದರೂ, ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿ, ವೇತನ ಶ್ರೇಣಿಗಳನ್ನು ಪುನರ್ರಚಿಸಲು ಅಥವಾ ಸುಧಾರಿಸಲು ಸರ್ಕಾರ ಇನ್ನೂಯಾವುದೇ ಕೆಲಸ ಮಾಡಿಲ್ಲ. ಆಗಸ್ಟ್ 2016 ರಲ್ಲಿ ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಆರ್‌ಬಿಐ ಸೇರಿದಂತೆ ಪಿಎಸ್‌ಬಿಯ ಉನ್ನತ ಮಟ್ಟದ ನೌಕರರ ವೇತನ ಜಾಗತಿಕ ಮಾನದಂಡಕ್ಕಿಂತ ಕೆಳಗಿದೆ ಎಂದು ಹೇಳಿದ್ದಾಗ ಈ ವಿಷಯ ಭಾರಿ ಚರ್ಚೆಗೆ ಬಂದಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.