ನವದೆಹಲಿ:  ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.



COMMERCIAL BREAK
SCROLL TO CONTINUE READING

ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ತಂಡವು ರೋಹಿತ್ ಶರ್ಮಾ ಭರ್ಜರಿ ಅರ್ಧ ಶತಕ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್ ನಿಂದಾಗಿ ಉತ್ತಮ ಆರಂಭ ಕಂಡಿದೆ. ಪಾಕಿಸ್ತಾನದಿಂದ ರನ್ ಔಟ್ ಜೀವದಾನ ಪಡೆದ ರೋಹಿತ್ ಶರ್ಮಾ ಸಮರ್ಪಕವಾಗಿ ಬಳಸಿಕೊಂಡರು.



ಸದ್ಯ ಬಂದಿರುವ ವರದಿಗಳ ಪ್ರಕಾರ ಭಾರತ ತಂಡವು 17.3 ಓವರ್ ಗಳಲ್ಲಿ  ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿದೆ.ಲೋಕೇಶ್ ರಾಹುಲ್  37 ರನ್ ಗಳಿಸಿದರೆ ರೋಹಿತ್ ಶರ್ಮಾ 60 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ.