ನವದೆಹಲಿ: ಬಿಜೆಪಿ ಪಕ್ಷವು ಒಂದು ವೇಳೆ 2019 ಲೋಕಸಭೆ ಚುನಾವಣೆಯಲ್ಲಿ ಗೆದ್ದದ್ದೆ ಆದಲ್ಲಿ ಅದು 'ಹಿಂದೂ ಪಾಕಿಸ್ತಾನ' ರಚನೆಗೆ ಕಾರಣವಾಗಲಿದೆ ಎಂದು ಶಶಿ ತರೂರ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ತಿರುವನಂತಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಂತೆಯೇ, ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸದಂತಹ ರಾಷ್ಟ್ರವೊಂದಕ್ಕೆ ದಾರಿ ಮಾಡಿಕೊಡುವ ಹೊಸ ಸಂವಿಧಾನವನ್ನು ಬಿಜೆಪಿ ಬರೆಯಲಿದೆ ಎಂದು ಹೇಳಿದರು.



"ಅವರು (ಬಿಜೆಪಿ) ಲೋಕಸಭೆಯಲ್ಲಿ ಮತ್ತೆ ಗೆದ್ದರೆ  ನಮ್ಮ ಪ್ರಜಾಪ್ರಭುತ್ವದ ಸಂವಿಧಾನವು ನಾವು ಅರ್ಥಮಾಡಿಕೊಂಡಂತೆ ಉಳಿಯುವುದಿಲ್ಲ, ಕಾರಣ ಅವರು ಭಾರತದ ಸಂವಿಧಾನವನ್ನು ನಾಶಪಡಿಸಬೇಕಾದ ಎಲ್ಲ ಅಂಶಗಳನ್ನು ಹೊಂದಿರುತ್ತಾರೆ ಅಲ್ಲದೆ ಅದರ ಬದಲಾಗಿ ಹೊಸ ಸಂವಿಧಾನವನ್ನು ಕೂಡ ರಚಿಸಲು ಅವರು ಸಿದ್ದರಿದ್ದಾರೆ " ಎಂದು ಅವರು ಹೇಳಿದರು.


"ಹೊಸ ಸಂವಿಧಾನವು ರಾಷ್ಟ್ರವನ್ನು ಹಿಂದೂ ರಾಷ್ಟ್ರಗಳ ತತ್ವಗಳಡಿಯಲ್ಲಿ ರೂಪಿಸುವಂತಹದ್ದು, ಅಲ್ಲದೆ  ಅದು ಅಲ್ಪಸಂಖ್ಯಾತರ ಸಮಾನತೆಯನ್ನು ತೆಗೆದುಹಾಕುತ್ತದೆ, ಆ ಮೂಲಕ ಇದು ಹಿಂದೂ ಪಾಕಿಸ್ತಾನದ ರಚನೆಗೆ ಕಾರಣವಾಗಲಿದೆ" ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, ತರೂರ್ ಅವರ ಹೇಳಿಕೆಗೆ  ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೋರಬೇಕೆಂದು ಬಿಜೆಪಿ ಒತ್ತಾಯಿಸಿದೆ.


ಎನ್ಸಿಐಗೆ ಮಾತನಾಡಿದ ಬಿಜೆಪಿ ವಕ್ತಾರ ಸಾಂಬಿತ್ ಪತ್ರಾ, "ಶಶಿ ತರೂರ್ ಅವರ ಹೇಳಿಕೆ ಬಗ್ಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು, ಪಾಕಿಸ್ತಾನದ ರಚನೆ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ಜವಾಬ್ದಾರಿ" ಎಂದು ತಿಳಿಸಿದ್ದಾರೆ