ನವದೆಹಲಿ: ಗಂಗಾದಲ್ಲಿ ಮುಳುಗಿ ಏಳುವುದು ವ್ಯಕ್ತಿಯ ಪಾಪವನ್ನು ವಿಮುಕ್ತಿಗೊಳಿಸುತ್ತದೆ ಎಂದು ನಂಬಲಾಗಿದೆ. ಆದರೆ ಇದು ಇನ್ನೊಂದೆಡೆಗೆ ತೀವ್ರ ರೀತಿಯಲ್ಲಿ ಆರೋಗ್ಯದ  ಮೇಲೆ ಅಪಾಯವನ್ನು ಸಹ ಉಂಟು ಮಾಡಬಹುದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ. 


COMMERCIAL BREAK
SCROLL TO CONTINUE READING

ಗಂಗಾನದಿಯಲ್ಲಿ ಅದರಲ್ಲೂ ವಿಶೇಷವಾಗಿ ಹರಿದ್ವಾರ ಮತ್ತು ಉನನೊ ನಡುವಿನ  ನೀರಿನ ಗುಣಮಟ್ಟದ ಬಗ್ಗೆ  ಎನ್ಜಿಟಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ. "ಸಿಗರೆಟ್ ಪ್ಯಾಕಗಳು ಆರೋಗ್ಯಕ್ಕೆ ಹಾನಿಕಾರ ಉಂಟು ಮಾಡುತ್ತವೆ ಎನ್ನುವ ಎಚ್ಚರಿಕೆಯನ್ನು ಗಂಗಾನದಿ ವಿಚಾರದಲ್ಲಿ ಏಕೆ ನೀಡುತ್ತಿಲ್ಲ?" ಎಂದು ಕೇಂದ್ರ ಸರ್ಕಾರಕ್ಕೆ ಚಿಮಾರಿ ಹಾಕಿದೆ. ಹರಿದ್ವಾರ ಮತ್ತು ಉನ್ನಾನೋ ನಡುವಿನ ನದಿಯ ನೀರು ಕುಡಿಯಲು ಮತ್ತು ಸ್ನಾನ ಮಾಡಲು ಯೋಗ್ಯವಲ್ಲ ಎಂದು ಹೇಳಲಾಗಿದೆ.


ಎನ್ಜಿಟಿ ಈಗ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾಕ್ಕೆ ನದಿಯ ಉದ್ದಕ್ಕೂ ಪ್ರತಿ 100 ಕಿಲೋಮೀಟರ್ಗಳಲ್ಲಿ ಇರುವ  ನೀರಿನ ಗುಣಮಟ್ಟದ ಬಗ್ಗೆ ಮಾಹಿತಿ ಫಲಕಗಳನ್ನು ಹಾಕಲು ನಿರ್ದೇಶಿಸಿದೆ. ಆ ಫಲಕಗಳಲ್ಲಿ ಅದು ಕುಡಿಯಲು ಅಥವಾ ಸ್ನಾನಕ್ಕಾಗಿ ಯೋಗ್ಯವಿದೆಯೇ ಎನ್ನುವುದರ ಕುರಿತಾಗಿ ಸ್ಪಷ್ಟವಾಗಿ ಬರೆದಿರಬೇಕು ಎಂದು ತಿಳಿಸಿದೆ.


ಇದಕ್ಕೂ ಮುಂಚೆ, ಗಂಗಾವನ್ನು ಸ್ವಚ್ಛಗೊಳಿಸಲು ಸರಕಾರ ಕಳೆದ ಎರಡು ವರ್ಷಗಳಲ್ಲಿ ಸುಮಾರು 7 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಆದರೂ ಕೂಡ ಇದು ಗಂಭೀರ ಪರಿಸರದ ಸಮಸ್ಯೆಯಾಗಿದೆ ಎಂದು ಎನ್ಜಿಟಿ ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿತ್ತು .ಪವಿತ್ರ ನದಿಯೆಂದು ಹೇಳಲಾಗಿದ್ದ ಗಂಗಾ ನದಿಯ ನೀರಿನ ಗುಣಮಟ್ಟ ಕಲುಷಿತ ಗೊಳ್ಳುತ್ತಿರುವುದರ ಬಗ್ಗೆ ಎನ್ಜಿಟಿ ಕಳವಳ ವ್ಯಕ್ತಪಡಿಸಿದೆ.