ರಾಮಮಂದಿರಕ್ಕೆ ಕಾಂಗ್ರೆಸ್ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ: ನರೇಂದ್ರ ಮೋದಿ
Lok Sabha Election 2024: ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಗಣನೀಯ ಸಾಧನೆ ಮಾಡಿದೆ. ನೀವೆಲ್ಲಾ ನಮಗೆ ಬಹುಮತದ ಸರ್ಕಾರ ನೀಡಿದ ಕಾರಣ SC/ST, ಒಬಿಸಿ ಮೀಸಲಾತಿಯನ್ನು ಮತಬ್ಯಾಂಕ್‌ಗಾಗಿ ಬೇರೆಯವರಿಗೆ ನೀಡುವುದರಿಂದ ತಡೆಯಲಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Lok Sabha Election 2024: ಕಾಂಗ್ರೆಸ್ ಪಕ್ಷವು ಮತ್ತೆ ರಾಮಮಂದಿರ ತಂಟೆಗೆ ಹೋಗಬಾರದು ಎಂದರೆ NDAಗೆ 400 ಕ್ಷೇತ್ರಗಳನ್ನು ಕೊಡಿ ಎಂದು ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ʼಬಿಜೆಪಿ ನೇತೃತ್ವದ NDA ಮೈತ್ರಿಕೂಟವನ್ನು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡಲು ಹಲವು ಕಾರಣಗಳಿವೆ. ನೀವು ಬಹುಮತ ನೀಡಿದ ಕಾರಣಕ್ಕಾಗಿಯೇ ನಾವು 370ನೇ ವಿಧಿಯನ್ನು ರದ್ದುಗೊಳಿಸಲು ಸಾಧ್ಯವಾಯಿತು. ಹೀಗಾಗಿ ಕಾಂಗ್ರೆಸ್ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಬಾರದು, ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಮಸೀದಿ ಬೀಗ ಜಡಿಯಬಾರದು, ನಮ್ಮ ದೇಶದ ದ್ವೀಪಗಳನ್ನು ಬೇರೆ ದೇಶಗಳಿಗೆ ನೀಡಬಾರದು, ಒಬಿಸಿ ಮೀಸಲಾತಿಯನ್ನು ಕಿತ್ತು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಬಾರದೆಂಬ ಕಾರಣಕ್ಕಾಗಿ ನೀವು ಬಿಜೆಪಿಗೆ ಬಹುಮತ ನೀಡಿ ಅಂತಾ ಮೋದಿ ಮನವಿ ಮಾಡಿದರು.
ಬಿಜೆಪಿ ಸದಸ್ಯ ಕೋನಂಕಿ ತಿಲಕ್ ವಿರುದ್ಧ ಕೇಸ್
ಭಾರತದ ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಪ್ರಸ್ತಾಪಿಸಿ, ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ʼಕಾಂಗ್ರೆಸ್ ಪರಿವಾರಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನ ಆಗಿಬರುವುದಿಲ್ಲ. ಅವರು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ವಿರೋಧಿಸುತ್ತಾರೆ. ಇದೇ ಕಾರಣಕ್ಕೆ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ತುಂಬಾ ಕಡಿಮೆಯಿದೆ ಎಂಬುದಾಗಿ ಕಾಂಗ್ರೆಸ್ ಹೇಳುತ್ತದೆ. ಕಾಂಗ್ರೆಸ್‌ಗೆ ಸಂವಿಧಾನಕ್ಕಿಂತ ಕುಟುಂಬದ ಮೇಲೆಯೇ ಹೆಚ್ಚು ಪ್ರೀತಿ ಅಂತಾ ಕಿಡಿಕಾರಿದರು.
ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಗಣನೀಯ ಸಾಧನೆ ಮಾಡಿದೆ. ನೀವೆಲ್ಲಾ ನಮಗೆ ಬಹುಮತದ ಸರ್ಕಾರ ನೀಡಿದ ಕಾರಣ SC/ST, ಒಬಿಸಿ ಮೀಸಲಾತಿಯನ್ನು ಮತಬ್ಯಾಂಕ್‌ಗಾಗಿ ಬೇರೆಯವರಿಗೆ ನೀಡುವುದರಿಂದ ತಡೆಯಲಾಯಿತು. ಇದೇ ಕಾರಣಕ್ಕೆ ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲು ಸಾಧ್ಯವಾಯಿತು. ಕಾಂಗ್ರೆಸ್‌ನವರು ಒಬಿಸಿ, SC/ST ಮೀಸಲಾತಿಯನ್ನು ಮತಬ್ಯಾಂಕ್‌ಗೆ ನೀಡುವುದಿಲ್ಲವೆಂದು ಬರೆದುಕೊಡಿ ಅಂತಾ ಸವಾಲು ಹಾಕಿದ್ದೇನೆ ಎಂದು ಮೋದಿ ತಿಳಿಸಿದರು.
ಇದನ್ನೂ ಓದಿ: ಕೈ-ಕಮಲ ಕಾರ್ಯಕರ್ತರ ನಡುವೆ ಕಲ್ಲು ತೂರಾಟ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.