ಪಡಿತರದಾರರಿಗೆ ವಂಚಿಸುವ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದು - ಸಚಿವ ಕೆ. ಗೋಪಾಲಯ್ಯ
ರಾಜ್ಯದಲ್ಲಿ ಒಟ್ಟು 20.58 ಲಕ್ಷ ಎಪಿಎಲ್ ಕಾರ್ಡುದಾರರು ಇದ್ದಾರೆ. ಬಿ.ಪಿ.ಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರಿಗೂ ಸಹ ತಿಂಗಳಿಗೆ 10 ಕೆ.ಜಿ ಯಂತೆ 3 ತಿಂಗಳು ಉಚಿತ ಅಕ್ಕಿಯನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದೆ- ಸಚಿವ ಕೆ. ಗೋಪಾಲಯ್ಯ
ಬೆಂಗಳೂರು : ಪಡಿತರ ಚೀಟಿ (Ration Card)ದಾರರಿಗೆ ಕಳಪೆ ದವಸ ಧಾನ್ಯ ನೀಡಿದರೆ ಅಥವಾ ಹಣ ಪಡೆದು ಪಡಿತರ (Ration) ನೀಡುವುದು ಕಂಡು ಬಂದರೆ ಹಾಗೂ ಯಾವುದೇ ರೀತಿಯ ವಂಚನೆ ಮಾಡಿದರೆ ಅಂಥ ಅಂಗಡಿಗಳ ಲೈಸೆನ್ಸ್ ರದ್ದು ಮಾಡಿ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಚಿಕ ಕೆ. ಗೋಪಾಲಯ್ಯ ರಾಜ್ಯದಲ್ಲಿ ಒಟ್ಟು 20.58 ಲಕ್ಷ ಎಪಿಎಲ್ ಕಾರ್ಡುದಾರರು ಇದ್ದಾರೆ. ಬಿ.ಪಿ.ಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರಿಗೂ ಸಹ ತಿಂಗಳಿಗೆ 10 ಕೆ.ಜಿ ಯಂತೆ 3 ತಿಂಗಳು ಉಚಿತ ಅಕ್ಕಿಯನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಏ. 20ರ ಬಳಿಕ ಷರತ್ತುಗಳೊಂದಿಗೆ ನಿರ್ಮಾಣ ಕಾಮಗಾರಿಗಳ ಆರಂಭಕ್ಕೆ ಅನುಮತಿ - ಸಚಿವ ಜಗದೀಶ ಶೆಟ್ಟರ್
ರಾಜ್ಯದಲ್ಲಿ ಮೆಕ್ಕೆ ಜೋಳ ಮತ್ತು ಭತ್ತ ಖರೀದಿಗೆ ಸಹ ಚಾಲನೆ ನೀಡಿದ್ದೇವೆ. ರಾಜ್ಯದ ಶೇ.91ರಷ್ಟು ಪಡಿತರ ಅಂಗಡಿಗಳಲ್ಲಿ ಅಗತ್ಯ ಆಹಾರ ಧಾನ್ಯ ಪೂರೈಕೆ ಮಾಡಿದ್ದೇವೆ. ಬಿಪಿಎಲ್ ಗೆ ಅರ್ಜಿ ಸಲ್ಲಿಸಿರುವ ಮಂದಿಗೂ ಎಪ್ರಿಲ್ 18ರಿಂದ ಜೂನ್ ತನಕ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ನೀಡಲಾಗುವುದು ಹಾಗೂ ಪಡಿತರ ಪಡೆಯಲು ಪಡಿತರ ಚೀಟಿ ಕಡ್ಡಾಯವಿಲ್ಲ, ಅರ್ಜಿ ಸಲ್ಲಿಸಿರುವ ದಾಖಲೆ ತೋರಿಸಿ ಪಡಿತರ ಪಡೆಯಬಹುದು ಎಂದು ಮಾಹಿತಿ ಒದಗಿಸಿದರು.
ಮೇ 1ರಿಂದ ಎಲ್ಲ ಪಡಿತರ ಅಂಗಡಿಗಳಲ್ಲಿ 10ಕೆಜಿ ಅಕ್ಕಿ , 1ಕೆಜಿ ತೊಗರಿ ಬೇಳೆ ವಿತರಣೆ ಮಾಡಲಾಗುತ್ತದೆ. ಉಜ್ವಲ ಮತ್ತು ಸಿಎಂ ಅನಿಲ ಭಾಗ್ಯ ಯೋಜನೆಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗುತ್ತದೆ. ಸರಕಾರದ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ 16 ಪ್ರಕರಣ ಕಂಡು ಬಂದಿದೆ. 59 ಲಕ್ಷ ರೂ. ಮೌಲ್ಯದ ಪಡಿತರವನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ.
ಪಾಸ್‍ಗಳ ದುರ್ಬಳಕೆ ಮೇಲೆ ತೀವ್ರ ನಿಗಾಕ್ಕೆ ಸೂಚನೆ
ಸರಕಾರಿ ಪಡಿತರ ಅಂಗಡಿಗಳನ್ನು ಹೊರತುಪಡಿಸಿ ಇತರೆ ಅಂಗಡಿಗಳಲ್ಲೂ ದಿನಸಿಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವಂತಿಲ್ಲ. ಎಲ್ಲರೂ ಕಡ್ಡಾಯವಾಗಿ ದರಪಟ್ಟಿ ಪ್ರದರ್ಶನ ಮಾಡಬೇಕು ಎಂದು ಖಾಸಗಿ ವರ್ತಕರಿಗೆ ಸೂಚಿಸಿದರು.