ನವದೆಹಲಿ: ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಹಿಳೆಯ ಮೇಲಿನ ಅತ್ಯಾಚಾರದ ಪ್ರಕರಣದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿ ಮಹಿಳೆಯರು ನಡುವೆ ಮನಸ್ತಾಪ ಉಂಟಾದಾಗ ಅವರು ಈ ರೀತಿಯ ಪ್ರಕರಣ ದಾಖಲಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ. ಈಗ ಈ ಹೇಳಿಕೆಗೆ ಪ್ರತಿಪಕ್ಷಗಳು ಅವರಿಗೆ ಕಿಡಿ ಕಾರಿವೆ"


 ಮನೋಹರ ಲಾಲ್ ಖಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ "ಒಂದು ರಾಜ್ಯದ ಮುಖ್ಯಮಂತ್ರಿ ಈ ರೀತಿ ಯೋಚಿಸುತ್ತಿದ್ದರೆ, ಅಲ್ಲಿ ಬಾಲಕಿಯರು ಸುರಕ್ಷಿತವಾಗಿರಲು ಸಾಧ್ಯವೇ? ಸಿಎಂ ಅತ್ಯಾಚಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹರ್ಯಾಣದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಹೇಳಿಕೆಗಳಿಂದ ಅತ್ಯಾಚಾರಿಗಳು ಸಿಗುವುದಿಲ್ಲ ಆದರೆ ಬದಲಾಗಿ ಮುಕ್ತವಾಗಿ ಓಡಾಡುತ್ತಾರೆ" ಎಂದು ತಿಳಿಸಿದ್ದಾರೆ.



ಮನೋಹರ್ ಲಾಲ್ ಖಟ್ಟರ್  ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ "ಈ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ನಿಜಕ್ಕೂ ಕಳವಳಕಾರಿ ಸಂಗತಿ ಆದರೆ ಅತ್ಯಾಚಾರದ ಬಹುತೇಕ ಆರೋಪಗಳು ಒಮ್ಮತದ ಸಂಬಂಧಗಳಿಂದ ಬರುತ್ತಿವೆ,ಆದ್ದರಿಂದ ಅತ್ಯಾಚಾರದ ಶೇಕಡಾ 80 ರಿಂದ 90 ರಷ್ಟು ಪ್ರಕರಣಗಳಲ್ಲಿ ಹೆಚ್ಚಾಗಿ ಸಂತ್ರಸ್ತಮಹಿಳೆ ಮತ್ತು ಆರೋಪಿ ಪರಿಚಯವಿರುತ್ತಾರೆ.ಆದರೆ ಒಂದು ವೇಳೆ ಏನಾದರೂ ಅವರಬ್ಬಿರ ನಡುವೆ ವೈಮನಸ್ಯ ಬಂದಲ್ಲಿ ಈ ಅತ್ಯಾಚಾರದ ಅಸ್ತ್ರವನ್ನು ಬಳಸುತ್ತಾರೆ ಎಂದು ಮತ್ತು ಪೋಲಿಸ್ ಠಾಣೆಗೆ ಹೋಗಿ ದೂರು ದಾಖಲಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.


ಈ ಹಿಂದೆ ರೇವಾಡಿ ಜಿಲ್ಲೆಯೊಂದರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಈ ದೇಶದವನ್ನೇ ತಲ್ಲಣಿಸುವಂತೆ ಮಾಡಿತ್ತು.