ನವದೆಹಲಿ: ದೇಶಾದ್ಯಂತ ಮಾನವಹಕ್ಕು ಹೋರಾಟಗಾರರು ಬುದ್ದಿ ಜೀವಿಗಳನ್ನು ಬಂಧಿಸಿರುವ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇತಿಹಾಸಕಾರ ರಾಮಚಂದ್ರ ಗುಹಾ ಇಂದು ಗಾಂಧಿಜಿ ಬದುಕ್ಕಿದ್ದರೆ ಅವರನ್ನು ಬಂಧಿಸುತ್ತಿದ್ದರು ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಾನವಹಕ್ಕು ಹೋರಾಟಗಾರರ ಬಂಧನವನ್ನು,ಕ್ರೂರ,ಸರ್ವಾಧಿಕಾರಿ ಅಕ್ರಮ ಎಂದು  ವ್ಯಾಖ್ಯನಿಸಿರುವ ಗುಹಾ, ಈ ಬಂಧನಕ್ಕೆ ಪ್ರಸಕ್ತ ಸರ್ಕಾರದ ಕ್ರೋನಿ ಬಂಡವಾಳಶಾಹಿಗಳು ಕಾರಣ ಏಕೆಂದರೆ ಅವರು ಆದಿವಾಸಿ ಜಮೀನು ಮತ್ತು ಸಂಪನ್ಮೂಲಗಳ ಮೋಹಕ್ಕೆ ಒಳಗಾಗಿದ್ದಾರೆ. ಆದ್ದರಿಂದ  ಈಗ ಆದಿವಾಸಿಗಳನ್ನು ಪ್ರತಿನಿಧಿಸುವವರನ್ನು ಬಂಧಿಸಿದ್ದಾರೆ ಎಂದು  ತಿಳಿಸಿದ್ದಾರೆ. 



ದೇಶಾದ್ಯಂತ ಒಟ್ಟು ಒಂಬತ್ತು ಆಕ್ಟಿವಿಸ್ಟ್ ಗಳ ಮನೆಯ ಮೇಲೆ ದಾಳಿ ಮಾಡಿರುವ ಪೊಲೀಸರು ಅದರಲ್ಲಿ ವರವರರಾವ್,ಸುಧಾ ಭಾರದ್ವಾಜ್, ಅರುಣ್ ಫೆರೆರಾ ಗೌತಮ್ ನಾವಲ್ಕಾರನ್ನು ಬಂಧಿಸಿದ್ದಾರೆ.ಈ ಹಿಂದೆ ಜೂನ್ ತಿಂಗಳಲ್ಲಿ  ಭೀಮಾ ಕೊರೆಗಾಂ ಕಾರ್ಯಕ್ರಮದಲ್ಲಿ  ಸಂದರ್ಭದಲ್ಲಿ ಸುಧೀರ್ ಧವಾಲೆ,ಸುರೇಂದ್ರ ಗ್ಯಾಡ್ಲಿಂಗ್  ಮಹೇಶ್ ರಾವತ್ ರೋನಾ ವಿಲ್ಸೋನ್ ಮತ್ತು ಶೋಮಾ ಸೆನ್ ಅವರನ್ನು ಬಂಧಿಸಿದ್ದರು.